ದೇಶದ ಪ್ರತಿಷ್ಠಿತ ಫ್ಯಾಶನ್ ನೆಟ್ವರ್ಕ್ ಸಂಸ್ಥೆಯ ಮಾಲೀಕನ ಮಗಳು. ಸಿಮೆಂಟ್, ಕೆಮಿಕಲ್, ರಿಟೇಲ್, ಫೈನಾನ್ಶಿಯಲ್ ಸರ್ವೀಸ್ ಸೇರಿದಂತೆ ದೇಶದ ಸಕಲ ಕ್ಷೇತ್ರಗಳಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್ನ ಮುಖ್ಯಸ್ಥ , 2023ರಲ್ಲಿ ದೇಶದ 9ನೇ ಅತ್ಯಂತ ಶ್ರೀಮಂತ ಕುಮಾರ ಮಂಗಲಂ ಬಿರ್ಲಾ ಅವರ ಹಿರಿಯ ಪುತ್ರಿ ಅನನ್ಯಾ ಬಿರ್ಲಾ ಸಂಗೀತ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ.
ತಂದೆಯ ವಾಣಿಜ್ಯ ಉದ್ಯಮಗಳನ್ನು ನೋಡಿಕೊಳ್ಳುವ ಹಾಗೂ ಅದರ ಬಗ್ಗೆ ಗಮನ ನೀಡುವ ಸಲುವಾಗಿ ತನ್ನ ಇಷ್ಟದ ಸಂಗೀತ ಕ್ಷೇತ್ರವನ್ನು ಬಿಡುತ್ತಿರುವುದಾಗಿ ಅನನ್ಯಾ ಬಿರ್ಲಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
‘ಇದು ನನ್ನ ಅತ್ಯಂತ ಕಠಿಣ ನಿರ್ಧಾರ. ನಾನು ನಡೆಸುವ ಮತ್ತು ನಿರ್ಮಿಸುತ್ತಿರುವ ಎರಡೂ ವ್ಯವಹಾರಗಳನ್ನು ಸಮತೋಲನಗೊಳಿಸುವ ಹಂತವನ್ನು ನಾನು ತಲುಪಿದ್ದೇನೆ. ಆದರೆ, ಇನ್ನು ಮುಂದೆ ಸಂಗೀತವು ನನಗೆ ಅಸಾಧ್ಯವಾಗುತ್ತಿದೆ ಮತ್ತು ನಾನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ನನ್ನ ಮೇಲೆ ಟೋಲ್ ತೆಗೆದುಕೊಳ್ಳುತ್ತಿದೆ. ಇಷ್ಟು ವರ್ಷಗಳಿಂದ ನಾನು ಬಿಡುಗಡೆ ಮಾಡಿದ ಸಂಗೀತ ಆಲ್ಬಂಗೆ ನೀವು ತೋರಿಸಿದ ಎಲ್ಲಾ ಪ್ರೀತಿಗೆ ಥ್ಯಾಂಕ್ ಯು ಎಂದಷ್ಟೇ ಹೇಳಲು ಸಾಧ್ಯ. ನಮ್ಮದೇ ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿರುವುದರಿಂದ ನಮ್ಮದೇ ಜನರು ಮಾಡಿದ ಇಂಗ್ಲಿಷ್ ಸಂಗೀತವನ್ನು ನಾವು ಒಂದು ದಿನ ಮೆಚ್ಚಬಹುದು ಎಂದು ನಾನು ಭಾವಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ ಯು. ಈಗ ನನ್ನೆಲ್ಲಾ ಶಕ್ತಿಯನ್ನು ಬ್ಯುಸಿನೆಸ್ ವರ್ಲ್ಡ್ನಲ್ಲಿ ಹೂಡುವ ಸಮಯ’ ಎಂದು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಅವರು ಪೋಸ್ಟ್ಗೆ “ಮರೆಯಲಾಗದ ನೆನಪುಗಳು, ಎಲ್ಲಾ ಪ್ರೀತಿಗೆ ಧನ್ಯವಾದಗಳು’ ಎನ್ನುವ ಶೀರ್ಷಿಕೆಯನ್ನೂ ಅವರು ನೀಡಿದ್ದಾರೆ. ಗಾಯಕ ಅರ್ಮಾನ್ ಮಲಿಕ್, ಸಾನಿಯಾ ಮಿರ್ಜಾ, ಬಾಬಿ ಡಿಯೋಲ್ ಮತ್ತು ಇತರರು ಅನನ್ಯಾ ಬಿರ್ಲಾ ಅವರ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ, ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ. “ಅನನ್ಯ ಇದನ್ನು ಓದಲು ತುಂಬಾ ದುಃಖವಾಗಿದೆ, ಆದರೆ ನೀವು ಮಾಡುತ್ತಲೇ ಇದ್ದೀರಿ! ನಿಮ್ಮ ಎಲ್ಲಾ ಕನಸುಗಳು ಮತ್ತು ಭವಿಷ್ಯದ ಪ್ರಯತ್ನಗಳಿಗೆ ಹೆಚ್ಚಿನ ಶಕ್ತಿ ಸಿಗಲಿ’ ಎಂದು ಅರ್ಮಾನ್ ಮಲೀಕ್ ಬರೆದಿದ್ದಾರೆ.