ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಕಾರ್ತಿಕ್ ಅವರಿಗೆ 50 ಲಕ್ಷ ರೂಪಾಯಿ ಬಹುಮಾನದ ಮೊತ್ತದ ಜೊತೆಗೆ ಬ್ರೇಜಾ ಕಾರು ಮತ್ತು ಎಲೆಕ್ಟ್ರಿಕ್ ಬೈಕ್ ಕೂಡ ಸಿಕ್ಕಿತ್ತು. ಎಲೆಕ್ಟ್ರಿಕ್ ಬೈಕ್ ಬಂದಿದ್ದು, ಮಾರುತಿ ಸುಜುಕಿ ಬ್ರೇಜಾ ಕಾರು ಇನ್ನೂ ಅವರ ಕೈ ಸೇರಿಲ್ಲ.
ಬೇಬಿ ಪೌಡರ್ನಿಂದ ಕ್ಯಾನ್ಸರ್ ಕೇಸ್: ಮಹಿಳೆಗೆ ಸಂಸ್ಥೆ ಕೊಟ್ಟ ಪರಿಹಾರ ಎಷ್ಟು ಗೊತ್ತಾ!?
ಈ ಬಗ್ಗೆ ಕಾರ್ತಿಕ್ ಮಹೇಶ್ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ. ಜೊತೆಗೆ ಎಷ್ಟು ಹಣ ಸಿಕ್ಕಿದೆ ಎಂಬ ಬಗ್ಗೆ ತಿಳಿಸಿದ್ದಾರೆ. ಕಾರ್ತಿಕ್ ಮಹೇಶ್, ಬ್ರೇಜಾ ಕಾರು ಬರೋಕೆ ಇನ್ನೂ ಐದಾರು ತಿಂಗಳು ಕಾಯಬೇಕು. ಇದಕ್ಕೆ ಇನ್ನೂ ಟೈಮ್ ತಗೊಳ್ಳುತ್ತೆ. ಮನೆ ನೋಡ್ತಾ ಇದ್ದೇನೆ. ಬಿಗ್ ಬಾಸ್ʼನಿಂದ ಬಂದ ಹಣದಲ್ಲಿ ಮನೆ ಕಟ್ಟಲು ಆಗಲ್ಲ. ಬೆಂಗಳೂರಲ್ಲಿ ಮನೆ ಕಟ್ಟಬೇಕು ಎಂದರೆ ಬಿಗ್ ಬಾಸ್ ಹಣ ಎಲ್ಲಿಯೂ ಸಾಕಾಗಲ್ಲ. ನಾನು ಸಹ ದುಡಿಬೇಕು ಎಂದು ಕಾರ್ತಿಕ್ ಮಹೇಶ್ ಹೇಳಿದ್ದಾರೆ.
50 ಲಕ್ಷ ಗೆದ್ದಿದ್ದೇನೆ ನಿಜ. ಅದರೆ ಅದರಲ್ಲಿ ಪೂರ್ತಿ 50 ಲಕ್ಷ ನಮ್ಮ ಕೈ ಸೇರಲ್ಲ. 35 ಲಕ್ಷ ರೂಪಾಯಿ ಮಾತ್ರ ಬರುತ್ತದೆ. 15 ಲಕ್ಷ ರೂಪಾಯಿ ಟ್ಯಾಕ್ಸ್ ಡಿಡೆಕ್ಟ್ ಆಗುತ್ತದೆ. ಹಂತ ಹಂತವಾಗಿ ಹಣ ಬಂದು ಕೈ ಸೇರುತ್ತಿದೆ ಎಂದಿದ್ದಾರೆ.