ಕಾರವಾರ :- 50, 100 ಕೋಟಿಗೆಲ್ಲ ಸೇಲ್ ಆಗುವಷ್ಟು ಚೀಪ್ ನಾನಲ್ಲ, ನಾನು ದುಬಾರಿ ಎಂದು ಸಚಿವ ಮಂಕಾಳ್ ವೈದ್ಯ ಹೇಳಿದ್ದಾರೆ.
ಮುರುಡೇಶ್ವರದಲ್ಲಿ ಮಾತನಾಡಿದ ಅವರು, 2,500 ಕೋಟಿಗೆ ಸಿಎಂ ಹುದ್ದೆ, 100 ಕೋಟಿಗೆ ಶಾಸಕ ಸ್ಥಾನ ಬಿಜೆಪಿಯ ಸಂಪ್ರದಾಯ. ಈ ಮಾತಿನ ಹಿಂದೆ ಬಿಜೆಪಿಯ ನಾಯಕರೇ ಹೇಳಿದ್ರು. ಹಾಗಾಗಿ, ದುಡ್ಡಿನಲ್ಲಿ ಮತ್ತೆ ಸರ್ಕಾರ ಮಾಡುವ ಕನಸು ಕಾಣುತ್ತಿದ್ದಾರೆ. ನನಗಂತೂ ಇದುವರೆಗೂ ಬಿಜೆಪಿ ಯಾವ ನಾಯಕರೂ ಸಂಪರ್ಕ ಮಾಡಿಲ್ಲ ಎಂದರು.
ಕೋವಿಡ್ ಹಗರಣ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಅಥವಾ ದೇಶದಲ್ಲಿ ವಸ್ತುವನ್ನ ಖರೀದಿ ಮಾಡಬೇಕಿತ್ತು. ಆದರೆ ಅಂದಿನ ಬಿಜೆಪಿ ಸರ್ಕಾರದಲ್ಲಿ ವಿದೇಶದಿಂದ ವಸ್ತು ಖರೀದಿ ಮಾಡಿದ್ದಾರೆ. ಇಲ್ಲಿ ರೇಟ್ 350 ರೂ. ಇಂಪೋರ್ಟ್ ರೇಟ್, 350 ರೂ. ಸ್ವದೇಶಿ ಎಂದು ಬಿಜೆಪಿಗರು ದೊಡ್ಡದಾಗಿ ಹೇಳುತ್ತಾರೆ. ಇದಕ್ಕಿಂತ ಪ್ರೂಫ್ ಏನು ಬೇಕು. ಈ ಹಗರಣದ ನೇರ ಕೈವಾಡ ಅಂದಿನ ಬಿಜೆಪಿ ಸರ್ಕಾರದ ಸಿಎಂ ಹಾಗೂ ಸಚಿವರಾಗಿದ್ದ ಶ್ರೀರಾಮುಲು, ಅದನ್ನು ಮುಚ್ಚಿಹಾಕಲು ಸುಧಾಕರ್ಗೆ ಸಚಿವರನ್ನಾಗಿ ಮಾಡಿದರು. ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.