ಹುಬ್ಬಳ್ಳಿ: ತಾಲೂಕಿನ ರಾಯನಾಳ ಗ್ರಾಮದ ಬಳಿ ಹುಡಾದಿಂದ ನಿರ್ಮಿಸಿದ್ದ ಲೇಔಟ್ನಲ್ಲಿ ಮೃತಪಟ್ಟವರ ಹೆಸರಿನಲ್ಲಿದ್ದ ಜಾಗ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಉಪನಗರ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರ್ಟಿಐ ಕಾರ್ಯಕರ್ತ ಮನೋಜ ತೋಟಗೇರನನ್ನು ಬಂಧಿಸಿದ್ದು, ಸುನೀಲ, ನಿತಿನ್ ಹಾಗೂ ಸಂಜಯನನ್ನು ವಿಚಾರಣೆ ನಡೆಸಿದ್ದಾರೆ. ಇನ್ನೂ ಹಲವರ ವಿಚಾರಣೆ ಪ್ರಕ್ರಿಯೆ ನಡೆಯಲಿದೆ. ಸೈಬರ್ ಸೆಂಟರ್ ನಡೆಸುತ್ತಿರುವ ಸಂಜಯ ಹಾಗೂ ಆತನ ಸ್ನೇಹಿತರಾದ ಸುನೀಲ್, ನಿತಿನ್ ಸಹಕಾರದಿಂದ ಮನೋಜ, ಬೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದ ಎನ್ನಲಾಗುತ್ತಿದೆ.
ಸಾಕ್ಸ್ ಇಲ್ಲದೆ ಶೂ ಹಾಕಿದ್ರೆ ಏನಾಗುತ್ತೆ ಗೊತ್ತಾ.? ಅಪ್ಪಿ ತಪ್ಪಿಯೂ ಹೀಗೆ ಮಾಡಬೇಡಿ!
ಈ ದಾಖಲೆಗಳು ಅಸಲಿಯೋ ಅಥವಾ ನಕಲಿಯೋ ಎಂಬುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಎಲ್ಲ ದಾಖಲೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಸಹಿ ಹಾಗೂ ಸೀಲ್ ತಾವೇ ಸಿದ್ಧಗೊಳಿಸಿದ್ದರೋ ಅಥವಾ ಯಾರಾದರೂ ಅಧಿಕಾರಿಗಳು ಸಾಥ್ ನೀಡಿದ್ದಾರೋ? ಎಂಬುದರ ಕುರಿತು ಮಾಹಿತಿ ಹೊರಬರಹುದು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.