ಗದಗ: ರೈತರ ಭೂಮಿಯನ್ನ ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಜಿಲ್ಲೆಯಲ್ಲಿ 689 ವಕ್ಪ್ ಆಸ್ತಿಗಳಿದ್ದು, ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಒಬ್ಬ ರೈತನಿಗೆ ನೋಟಿಸ್ ನೀಡಿಲ್ಲ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಹೇಳಿದರು. ರೈತರ ಆಸ್ತಿ ಖಾತಾ ಬದಲಾವಣೆ ವಕ್ಫ್ ಆಗಿರುವ ಬಗ್ಗೆ ನಮ್ಮ ರೈತರಿಗೆ ಆತಂಕದ ಪರಿಸ್ಥಿತಿ ಇಲ್ಲ.
ಇದರ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಸುದೀರ್ಘವಾಗಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು 2019 ರಿಂದ 2023 ರ ಅವಧಿಯಲ್ಲಿ ವಕ್ಪ್ ಆಸ್ತಿಗಳಿಗೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ ಎನ್ನುವ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದರು.
ಸಾಕ್ಸ್ ಇಲ್ಲದೆ ಶೂ ಹಾಕಿದ್ರೆ ಏನಾಗುತ್ತೆ ಗೊತ್ತಾ.? ಅಪ್ಪಿ ತಪ್ಪಿಯೂ ಹೀಗೆ ಮಾಡಬೇಡಿ!
ನಂತರ ಕಪ್ಪತಗುಡ್ಡ ವಿಷಯವಾಗಿ ಮಾತನಾಡಿ, ಅಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ. ಕಪ್ಪತಗುಡ್ಡ ಸಂರಕ್ಷಣೆ ನಮ್ಮ ಹೊಣೆ ಎಂದರು. ಕಪ್ಪತಗುಡ್ಡ ಉಳಿಸಲು ನಮ್ಮ ಸರ್ಕಾರ ಬದ್ಧವಿದೆ. ಕಪ್ಪತಗುಡ್ಡ ಕಬ್ಬಿಣದ ಅದಿರು, ಬಂಗಾರ ಗಣಿಗಾರಿಕೆ, ಇತರೆ ಅದಿರು ತೆಗೆಯಲು ಬಳಕೆ ಆಗಕೂಡದು ಎನ್ನುವ ಬಗ್ಗೆ ಸರ್ವಾನುಮತದ ನಿರ್ಣಯ ಜನತೆ ತೆಗೆದುಕೊಂಡಿದ್ದಾರೆ.
ಈಗ ಹೇಗಿದೆ, ಹಾಗೆ ಉಳಿಸಬೇಕು ಎಂಬ ದೃಢವಾದ ಸಂಕಲ್ಪ ನಮ್ಮದು. ಆ ಸಂಕಲ್ಪ ಮುಂದುವರೆಸುವ ಪ್ರಯತ್ನ ಮಾಡುತ್ತೇವೆ. ಅಲ್ಲಿ ಪರಿಸರ ವೃದ್ಧಿ ಆಗಬೇಕು. ಪ್ರವಾಸಿಗರು ಬರಬೇಕು. ನೀವು ಪ್ರಕೃತಿ ಸೌಂದರ್ಯ ಸವಿಯಲು, ಆನಂದಕ್ಕಾಗಿ ಅಲ್ಲಿಗೆ ಹೋಗಬೇಕೇ ವಿನಃ ಬೇಟೆಯಾಡಲು ಅಲ್ಲ ಎಂದು ಖಡಕ್ ಸಂದೇಶ ನೀಡಿದರು.