ಹುಬ್ಬಳ್ಳಿ: ಶಾಲೆಗೆ ಹೋಗದೇ ಕೃಷಿಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಸುನಂದಾ ಉಳ್ಳಾಗಡ್ಡಿ ಸಾಧನೆ ಸಾಹಸಗಾಥೆ ಇದು.
ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದ ರೈತ ಮಹಿಳೆ ಸುನಂದಾ ಉಳ್ಳಾಗಡ್ಡಿ. ಚಿಕ್ಕ ವಯಸ್ಸಿನಲ್ಲೇ ಓದು ಬಿಟ್ಟು ತಂದೆಯೊಟ್ಟಿಗೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾದ ಅವರು, ಎಂಟು ವರ್ಷದಿಂದ ರೈತ ಮಹಿಳೆಯಾಗಿ ಹತ್ತು ಎಕರೆಯಲ್ಲಿ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ಋತುಮಾನಕ್ಕೆ ತಕ್ಕಂತೆ ಬೆಳೆ ಬೆಳೆಯುವ ಅವರು ಕೃಷಿ ಕೆಲಸಕ್ಕೆ ತಕ್ಕಂತೆ ನಾಲ್ಕಾರು ಜನಕ್ಕೆ ಕೆಲಸವನ್ನು ನೀಡುತ್ತಿದ್ದಾರೆ.
ಮುಂಗಾರು ಹಂಗಾಮಿ ನಲ್ಲಿ 6 ಎಕರೆಯಲ್ಲಿ ಹೆಸರು, ಕಡಲೆ, ಜೋಳ, ಮಡಕೆ, ಅಲಸಂದಿ, ಗೋವಿನ ಜೋಳ, ಶೇಂಗಾ, ಹೆಸರು, ಉದ್ದು ಹಾಗೂ ಇನ್ನುಳಿದ ನಾಲ್ಕು ಎಕರೆ ಹೊಲ ನೀರಾವರಿಯಿದ್ದು ಮೆಂತ್ಯೆ, ಕೊತ್ತಂಬರಿ ಹಾಗೂ ಕಿರಿಕ್ ಸಾಲಿ ಬೆಳೆಯುತ್ತಿದ್ದಾರೆ. ಜೊತೆಗೆ ಹೈನುಗಾರಿಕೆಯೂ ಮಾಡಿ ಸೈ ಎನಿಸಿಕೊಂಡವರು.ಈಗ ಹಿಂಗಾರು ಹಂಗಾಮಿನಲ್ಲಿ ಸಹ ಜೋಳ, ಗೋಧಿ, ಕುಸುಬೆ ಬೆಳೆ ಬೆಳೆದು ಕೃಷಿ ಕಾಯಕಕ್ಕೆ ಆದರ್ಶಪ್ರಾಯರಾಗಿದ್ದಾರೆ.ಹೈನುಗಾರಿಕೆಯಲ್ಲಿ ಎತ್ತಿದ ಕೈ ಇವರು
Post Office Jobs: 10th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ..! ತಿಂಗಳಿಗೆ ₹ 30,100 ಸಂಬಳ
ಮನೆಗೆ ಬೇಕಾದಷ್ಟು ಹಾಲನ್ನು ಬಳಸ ಉಳಿದ ಹಾಲನ್ನು ಡೇರಿಗೆ ಮಾರುತ್ತಾರೆ. ತರಕಾರಿಯನ್ನು ಬೆಳೆಯುವ ಅವರು ವರ್ಷಪೂರ್ತಿ ಹೊಲದಲ್ಲಿ ದುಡಿಯುತ್ತಾರೆ. ಅದರಿಂದಲೇ ವರ್ಷಪೂರ್ತಿ ಆದಾಯವನ್ನೂ ಪಡೆಯುತ್ತಾರೆ. ‘ಕಾಳುಗಳನ್ನು ಹುಬ್ಬಳ್ಳಿಯ ಎಪಿಎಂಸಿಗೆ ಹಾಗೂ ಉತ್ತಮ ಬೆಲೆ ಇದ್ದಾಗ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಮಾರಾಟ ಮಾಡುತ್ತೇನೆ. ಮಾರಾಟಗಾರರು ಒಮ್ಮೊಮ್ಮೆ ನೇರವಾಗಿ ಹೊಲಕ್ಕೆ ಬಂದು ಖರೀದಿಸುತ್ತಾರೆ.
ಸೊಪ್ಪನ್ನು ಬಾಡಿಗೆ ವಾಹನದ ಮೂಲಕ ಎಪಿಎಂಸಿಗೆ ಕಳಿಸುತ್ತೇನೆ. ಸಾವಯುವ ಗೊಬ್ಬರ ಬಳಸುವುದರಿಂದ ಉತ್ತಮ ಫಸಲು ದೊರೆಯುತ್ತದೆ. ‘ಹೊಲ ಹದಗೊಳಿಸುವುದು, ಬಿತ್ತನೆ, ಕೀಟನಾಶಕ ಸಿಂಪಡಣೆ, ಬಾಡಿಗೆ ವಾಹನ, ಕೂಲಿಕಾರರು ಸೇರಿ ₹ 50 ಸಾವಿರ ಖರ್ಚಾಗಿ, ವಾರ್ಷಿಕ ₹2ರಿಂದ ₹3 ಲಕ್ಷ ಆದಾಯ ಉಳಿಯುತ್ತದೆ.
25 ದಿನಕ್ಕೆ ಸೊಪ್ಪಿನ ಫಸಲು ಬರುತ್ತದೆ, ನಂತರ ಆ ಜಾಗವನ್ನು ಖಾಲಿ ಬಿಟ್ಟು, ಸ್ವಲ್ಪ ದಿನದ ನಂತರ ಬೇರೆ ಬೆಳೆ ಬೆಳೆಯುತ್ತೇವೆ. ಇದರಿಂದ ವರ್ಷಪೂರ್ತಿ ಆದಾಯ ದೊರೆಯುತ್ತದೆ’ ಎಂದು ಅವರು ಹೇಳಿದರು. ‘ಕೃಷಿ ಭೂಮಿ ಲಾಟ್ರಿ ಇದ್ದಂಗ್ರಿ, ಕೈ ಹಿಡಿದ್ರೆ ಲಕ್ಷಾಂತರ ರೂಪಾಯಿ ಲಾಭ ಬರ್ತದ. ಹವಾಮಾನ ವೈಪರೀತ್ಯದಿಂದ ಒಮ್ಮೊಮ್ಮೆ ನಷ್ಟಾನೂ ಅನುಭವಿಸ್ತಿವಿ. ಆದ್ರ ಕೃಷಿ ಭೂಮಿ ಮೇಲೆ ನಂಬಿಕಿ ಇಟ್ಟು ಕೆಲಸ ಮಾಡಿದ್ರ ಖಂಡಿತ ಕೈ ಹಿಡಿತಾಳ’ ಎನ್ನುವ ಅವರು ಮಾತು ರೈತ ಮಹಿಳೆಯರಿಗೆ ಮಾದರಿ ಆಗಿದ್ದಾರೆ.