ನಮ್ಮ ಹಿರಿಯರು ಮಕ್ಕಳ ತಲೆಗೆ ಎಣ್ಣೆ ಹಾಕದೆ ಬಿಡುವುದೇ ಇಲ್ಲ. ಅದೂ, ನೆತ್ತಿಗೆ ಎಣ್ಣೆ ಹಾಕುತ್ತಾರೆ. ತಲೆ ಕೂದಲಿಗೆ, ಅದರಲ್ಲೂ ನೆತ್ತಿಗೆ ಯಾಕೆ ಎಣ್ಣೆ ಹಾಕುತ್ತಾರೆ? ಇದರ ಪ್ರಯೋಜನಗಳು ಏನು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ಇದರ ಬಗ್ಗೆ ಮಾಹಿತಿ
Karnataka weather: ಬೆಂಗಳೂರು ಸೇರಿ ರಾಜ್ಯದಲ್ಲಿ ಮೇ. 19 ರತನಕ ಭಾರೀ ಮಳೆ…
ಭಾರತದಲ್ಲಿ ಅನಾದಿ ಕಾಲದಿಂದಲೂ ತಲೆಗೂದಲಿಗೆ ಎಣ್ಣೆ ಹಚ್ಚುವುದು ವಾಡಿಕೆ. ಕೂದಲಿನ ಆರೈಕೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ಎಣ್ಣೆ ಹಚ್ಚುವುದು ರೂಢಿ. ಆದರೆ, ಕೂದಲಿಗೆ ಎಣ್ಣೆ ಹಚ್ಚಿದರೆ ಸಾಕಾಗುವುದಿಲ್ಲ. ಎಣ್ಣೆ ಹಚ್ಚಲು ನಿರ್ದಿಷ್ಟ ವಿಧಾನವಿದೆ. ಅಜಾಗರೂಕತೆಯಿಂದ ಹಚ್ಚುವುದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ಇದು ಪ್ರಯೋಜನಗಳಿಗಿಂತ ಹೆಚ್ಚು ಸಮಸ್ಯೆ ತಂದೊಡ್ಡಬಹುದು. ಹಾಗಿದ್ದರೆ ತಲೆಗೂದಲಿಗೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು? ಇದರ ಪ್ರಯೋಜನಗಳೇನು ಎಂಬಿತ್ಯಾದಿ ಮಾಹಿತಿ ಈ ಸುದ್ದಿಯಲ್ಲಿದೆ
ತಲೆಗೂದಲಿಗೆ ವಾರಕ್ಕೆ ಒಂದರಿಂದ ಎರಡು ಬಾರಿ ಮಾತ್ರ ಎಣ್ಣೆ ಹಚ್ಚಬೇಕು. ಎಣ್ಣೆಯು ಜಿಡ್ಡಿನಂತಿರುವುದರಿಂದ, ಹೆಚ್ಚಿನ ಸಮಯ ಕೂದಲು ಮತ್ತು ನೆತ್ತಿಯನ್ನು ಎಣ್ಣೆಯುಕ್ತವಾಗಿರಿಸಿಕೊಳ್ಳುವುದರಿಂದ ಕಲ್ಮಶಗಳನ್ನು ಆಕರ್ಷಿಸಬಹುದು. ಅದು ನಿಮ್ಮ ನೆತ್ತಿಯ ರಂಧ್ರಗಳನ್ನು ತೂರಿಕೊಳ್ಳಬಹುದು. ಹೀಗಾಗಿ ಆಗಾಗ್ಗೆ ನಿಮ್ಮ ತಲೆ ಕೂದಲಿಗೆ ಎಣ್ಣೆ ಹಚ್ಚಬೇಡಿ. ತಲೆಗೂದಲು ಮತ್ತು ನೆತ್ತಿಯನ್ನು ಉಸಿರಾಡಲು ಬಿಡುವುದು ಮುಖ್ಯ.
ಆದರೂ, ಎಣ್ಣೆ ಹಚ್ಚುವುದು ನಿಮ್ಮ ತಲೆಗೂದಲನ್ನು ತೊಳೆಯುವುದರ ಮೇಲೆ ಅವಲಂಬಿಸಿರುತ್ತದೆ. ನೀವು ಶಾಂಪೂವಿನಿಂದ ನಿಮ್ಮ ಕೂದಲನ್ನು ಹೆಚ್ಚಾಗಿ ತೊಳೆಯುತ್ತಿದ್ದರೆ, ವಾರಕ್ಕೆ ನಾಲ್ಕು ಬಾರಿ ತೊಳೆಯಬಹುದು. ನಿಮ್ಮ ಕೂದಲಿಗೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಎಂಬುದನ್ನು ನಿರ್ಧರಿಸುವ ಇನ್ನೊಂದು ಅಂಶವೆಂದರೆ ನಿಮ್ಮ ಕೂದಲಿನ ಪ್ರಕಾರ, ವಿನ್ಯಾಸ, ಉದ್ದ ಮತ್ತು ದಪ್ಪ. ಒರಟು, ದಪ್ಪ, ಉದ್ದ ಮತ್ತು ಗುಂಗುರು ಕೂದಲಿಗೆ ಹೆಚ್ಚಾಗಿ ಎಣ್ಣೆ ಹಾಕಬೇಕಾಗುತ್ತದೆ. ಅನೇಕ ಜನರಿಗೆ ಇದರ ಬಗ್ಗೆ ಸರಿಯಾಗಿ ತಿಳಿದಿಲ್ಲ. ತಲೆಗೂದಲಿಗೆ ಎಣ್ಣೆ ಹಾಕುವುದಕ್ಕಿಂತ ತಲೆಯ ಬುಡಕ್ಕೆ ಎಣ್ಣೆ ಹಾಕುವುದು ತುಂಬಾ ಮುಖ್ಯ. ನೀವು ನೆತ್ತಿಯ ಮೇಲೆ ಎಣ್ಣೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು. ನೆತ್ತಿಯ ಮಸಾಜ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ರಕ್ತದೊತ್ತಡ, ಹೃದಯ ಬಡಿತ ಮತ್ತು ಹಾರ್ಮೋನು ಏರುಪೇರಾಗುವುದನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.
ನೆತ್ತಿಗೆ ಎಣ್ಣೆ ಹಾಕುವುದು ಬಹಳ ಮುಖ್ಯವಾಗಿದ್ದರೂ ಸಹ, ಪೂರ್ತಿ ಕೂದಲಿಗೆ ಎಣ್ಣೆ ಹಚ್ಚುವುದು ಕೂಡ ಪ್ರಯೋಜನಕಾರಿ. ತಲೆಗೂದಲಿನ ಮಧ್ಯಕ್ಕೆ ಮತ್ತು ತುದಿಗೆ ಎಣ್ಣೆ ಹಾಕುವುದರಿಂದ ಅವುಗಳ ಹೊಳಪು, ಮೃದುತ್ವ, ಮತ್ತು ಒಟ್ಟಾರೆ ನೋಟವನ್ನು ಸುಧಾರಿಸುತ್ತದೆ. ಎಣ್ಣೆಯು ಒಣ ನೆತ್ತಿಯನ್ನು ಪೋಷಿಸುತ್ತದೆ. ಕೂದಲಿನ ಬೇರುಗಳನ್ನು ಚೈತನ್ಯಗೊಳಿಸುತ್ತದೆ. ಹಾಗೂ ತಲೆಗೂದಲನ್ನು ಪುನರ್ಯೌವನಗೊಳಿಸುವಂತೆ ಮಾಡುತ್ತದೆ. ಅಲ್ಲದೆ, ಇದು ಜಲಸಂಚಯನವನ್ನು ಹೆಚ್ಚಿಸಿ, ಶುಷ್ಕತೆಯನ್ನು ನಿವಾರಿಸುತ್ತದೆ. ಆಕ್ಸಿಡೇಟಿವ್ ಸ್ಟ್ರೆಸ್ ಎನ್ನುವುದು ವ್ಯಕ್ತಿಯ ಚರ್ಮ, ಕೂದಲು, ನೆತ್ತಿ ಇತ್ಯಾದಿಗಳಿಗೆ ಉಂಟಾಗುವ ಹಾನಿಯಾಗಿದೆ. ಇದರಿಂದ ಅತಿಯಾದ ಕೂದಲು ಉದುರುವಿಕೆ, ಅಕಾಲಿಕ ಕೂದಲು ಬಿಳಿಯಾಗುವುದು ಇತ್ಯಾದಿಗಳಿಗೆ ಕಾರಣವಾಗುತ್ತದೆ. ಹೀಗಾಗಿ ಕೂದಲಿಗೆ ಎಣ್ಣೆ ಹಾಕುವುದು ಬಹಳ ಮುಖ್ಯ.