ಜಗತ್ತಿನಲ್ಲೇ ಸದ್ಯಕ್ಕೆ ಸೆನ್ಸೇಷನ್ ಸೃಷ್ಟಿರುವ ಹಲವೇ ವ್ಯಕ್ತಿಗಳ ಪೈಕಿ ಮೊನಾಲಿಸಾ ಕೂಡ ಒಬ್ಬರು. ಸದ್ಯ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್ ಒಬ್ಬರ ಕಣ್ಣಿಗೆ ಬಿದ್ದವರು ಈ ಮೊನಾಲಿಸಾ. ಹೊಟ್ಟೆಪಾಡಿಗಾಗಿ ಮಹಾಕುಂಭ ಮೇಳದಲ್ಲಿ ಜಪಸರಮಾಲೆಗಳನ್ನು ಮಾರುತ್ತಿದ್ದ ಈ ಮೊನಾಲಿಸಾ ಆ ಯೂಟ್ಯೂಬರ್ ಹರಿಬಿಟ್ಟ ವಿಡಿಯೋ ಮೂಲಕ ರಾತ್ರಿ ಬೆಳಗಾಗುವುದರಲ್ಲಿ ಜಗತ್ತೇ ನೋಡುವಂತಾಯ್ತು.
Belly Fat Burning Tips: ನೀವು ಬೇಗ ಸಣ್ಣ ಆಗ್ಬೇಕಾ!? ಹಾಗಿದ್ರೆ ನಿತ್ಯ ಈ ಕೆಲಸ ಮಾಡಿ!
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಿಂದ ಬೆಳಕಿಗೆ ಬಂದವರಲ್ಲಿ ಮೊನಾಲಿಸಾ ಭೋಸಲೆ ಕೂಡ ಒಬ್ಬರು. ತನ್ನ ಕಪ್ಪನೆಯ ಚರ್ಮ ಮತ್ತು ಜೇನು ಕಣ್ಣುಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ ಮೊನಾಲಿಸಾ, ಮಣಿಗಳ ಹಾರ ಮತ್ತು ರುದ್ರಾಕ್ಷಗಳನ್ನು ಮಾರುವ ಸಾಮಾನ್ಯ ಹುಡುಗಿಯಾಗಿದ್ದರು, ಆದರೆ ಇದೀಗ ಈಕೆ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಕುಂಭಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಎಲ್ಲರ ನಿದ್ದೆಗೆಡಿಸಿದ್ದ ಮೊನಾಲಿಸಾ ಇದೀಗ ದೊಡ್ಡ ಪರದೆಯ ಮೇಲೆ ಬರಲು ಸಿದ್ಧಳಾಗಿದ್ದಾಳೆ.
ಪ್ರಯಾಗ್ರಾಜ್ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹುಡುಗಿಯೊಬ್ಬಳು ರುದ್ರಾಕ್ಷಿ ಮಾರುತ್ತಿದ್ದಳು. ಆಕೆಯ ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್ ಆಗಿ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದ್ದಳು.
ಇದೀಗ ಬರಹಗಾರ ಹಾಗೂ ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾಳ ಮನೆಗೆ ಭೇಟಿ ನೀಡಿದ್ದು, ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ʻದಿ ಡೈರಿ ಆಫ್ ಮಣಿಪುರ್ʼ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಸಹಿ ಹಾಕಿದ್ದಾರೆ. ಇದಕ್ಕೂ ಮುನ್ನ ಮೊನಾಲಿಸಾಳಿಗೆ ಹಲವು ಸಿನಿಮಾದಲ್ಲಿ ನಟಿಸುವಂತೆ ಆಫರ್ಗಳು ಬಂದಿದ್ದವು ಎನ್ನಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ಮಾತನಾಡಿ, ಮೊನಾಲಿಸಾ ಕುಟುಂಬದವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮೊನಾಲಿಸಾ ಕುಟುಂಬದವರು ಮುಗ್ಧ ಮನಸ್ಸಿನವರು. ಸಿನಿಮಾದಲ್ಲಿ ನಟಿಸಲು ಆಕೆ ಹಾಗೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಮೊನಾಲಿಸಾ ಹಾಟ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು.