ಬಳ್ಳಾರಿ: ಶ್ರೀರಾಮುಲು ವಿಚಾರದಲ್ಲಿ ಪಕ್ಷದ ವರಿಷ್ಟರು ಏನು ಮಾತನಾಡಬೇಡಿ ಎಂದಿದ್ದಾರೆ. ಎಲ್ಲಾ ವಿಷಯ ವರಿಷ್ಟರಿಗೆ ತಿಳಿಸಿದೆ ಅವರು ಏನ ಹೇಳುತ್ತಾರೆ ಅವರಂತೆ ನಡೆದುಕೊಳ್ಳಲಿದೆ. ಏನೇ ಇದ್ದರು ಪಕ್ಷದ ಚೌಕಟ್ಟಿನಲ್ಲಿ ಪ್ರಸ್ತಾಪ ಮಾಡುವೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಇಂದು ಅಪಹರಣಕ್ಕೆ ಒಳಗಾದ ವೈದ್ಯರ ಮನೆಗೆ ಭೇಟಿ ನೀಡಿ ಅವರಿಗೆ ದೈರ್ಯ ತುಂಬಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಶ್ರೀರಾಮುಲು ಬಗ್ಗೆ ನೀವು ಅವಹೇಳನವಾಗಿ ಮಾತನಾಡಿದ್ದೀರಿ ಎಂದು ವಾಲ್ಮೀಕಿ ಸಮುದಾಯ ನಿಮಗಮ ವಿರುದ್ದ ದೂರು ನೀಡಿದ್ದಾರೆಂಬ ಪ್ರಶ್ನೆಗೆ ಸಿಬಿಐ ತನಿಖೆ ಎದುರಿಸಿರುವ ನಾನು ಏನೇ ದೂರು ನೀಡಿದರೂ ಫೇಸ್ ಮಾಡುವೆ ಎಂದರು. ರಾಜ್ಯದಲ್ಲಿ ಅಪರಾದ ಹೆಚ್ಚಾಗುತ್ತಿದೆ, ಬೀದರ್, ಮಂಗಳೂರಿನಲ್ಲಿ ದರೋಡೆ, ಹಲವಡೆ ಹತ್ಯೆ, ಅಸನ್ ಲೈನ್ ವಂಚನೆ ಹೀಗೆ ಅಪರಾದ ಹೆಚ್ಚಳವಾಗುತ್ತಿದೆ. ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆಂದರು.
ಬಳ್ಳಾರಿ ವಾಕಿಂಗ್ ಮಾಡುತ್ತಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಅಪಹರಿಸಲಾಗಿದೆ. ದುಷ್ಕರ್ಮಿಗಳು ವೈದ್ಯ ಡಾ.ಸುನೀಲ್ ಅವರನ್ನು ಅಪಹರಿಸಿ 6 ಕೋಟಿ ರೂ. ಹಣ ಬೇಡಿಕೆ ಇಟ್ಟಿದ್ದಾರೆ ಬಳಿಕ, ಡಾ.ಸುನೀಲ್ ಮೊಬೈಲ್ನಿಂದ ಅವರ ಸಹೋದರ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣು ಅವರಿಗೆ ಕರೆ ಮಾಡಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ವೇಣು ಬಳ್ಳಾರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ದೂರು ಪಡೆದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.