ಬೆಂಗಳೂರು:- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾಮದ ಪುರಾಣ ಒಂದೊಂದೇ ಹೊರ ಬರುತ್ತಿದೆ. ಇದೀಗ ಸಂತ್ರಸ್ತೆಯೊಬ್ಬರು SIT ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರು ಜನರೇ ಇಲ್ಲಿ ಕೇಳಿ.. ಈ ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ..!
ಪ್ರಜ್ವಲ್ ರೇವಣ್ಣ ಪದೇ ಪದೆ ವಿಡಿಯೋ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಪೀಡಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದರು ಎಂದು ಎಸ್ಐಟಿ ಮುಂದೆ ಸಂತ್ರಸ್ತೆ ನೋವು ಹೇಳಿಕೊಂಡು ಕಣ್ಣೀರು ಇಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಎಸ್ಐಟಿ ರಚನೆಯಾದ ಬಳಿಕ ಮೊದಲ ಬಾರಿ ಸಂಸ್ತ್ರಸ್ತೆಯೊಬ್ಬರು ಸ್ವಯಂ ಪ್ರೇರಿತವಾಗಿ ಬಂದು ದೂರು ನೀಡಿದ್ದಾರೆ. ಆ ದೂರಿನಲ್ಲಿ ತಮಗಾದ ಲೈಂಗಿಕ ದೌರ್ಜನ್ಯವನ್ನು ಹೇಳಿಕೊಂಡಿದ್ದಾರೆ. ಎಫ್ಐಆರ್ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ
2021ರಿಂದ 2024ರ ನಡುವಣ ಅವಧಿಯಲ್ಲಿ ಸಂಸದರ ವಸತಿ ಕೊಠಡಿಯಲ್ಲಿ ಬಲವಂತದಿಂದ ಲೈಂಗಿಕ ದೌರ್ಜನ್ಯ ಎಸಗಿದ ಪ್ರಜ್ವಲ್ ರೇವಣ್ಣ ಇದನ್ನು ಅವರ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಈ ವಿಚಾರವನ್ನು ಹೊರಗಡೆ ಯಾರಿಗಾದರೂ ಹೇಳಿದರೆ ವಿಡಿಯೋ ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ. ಇದರಲ್ಲಿ ನನ್ನ ಮುಖವಿಲ್ಲ, ನಿನ್ನ ಮುಖ ಮಾತ್ರ ಕಾಣುತ್ತಿದೆ. ಹೀಗಾಗಿ, ನಿನ್ನದೇ ಮರ್ಯಾದೆ ಹಾಳಾಗಲಿದೆ. ಹೀಗಾಗಿ, ಈ ವಿಡಿಯೊ ಮುಂದಿಟ್ಟುಕೊಂಡು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ” ಎಂದು ದೂರಿದ್ದಾರೆ. ಪದೇ ಪದೆ ವಿಡಿಯೋ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಪೀಡಿಸಿ ಮಾನಸಿಕ ಹಿಂಸೆ ನೀಡಿದ್ದಾರೆ,” ಎಂದು ಸಂತ್ರಸ್ತೆ ಎಸ್ಐಟಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2021 ರಲ್ಲಿ ಕ್ಷೇತ್ರದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೀಟು ಕೊಡಿಸುವ ವಿಚಾರಕ್ಕೆ ಸಂಸದರ ಅಧಿಕೃತ ವಸತಿ ನಿವಾಸದಲ್ಲಿ ಭೇಟಿಯಾಗಿದ್ದೆ. ಕೊಠಡಿಗೆ ಒಂಟಿಯಾಗಿ ಕರೆದೊಯ್ದ ಪ್ರಜ್ವಲ್, ಬಲವಂತದಿಂದ ಬಟ್ಟೆ ಬಿಚ್ಚಿಸಿದ್ದರು. ಇದಕ್ಕೆ ಒಪ್ಪದೆ ಕಿರುಚಾಡಲು ಪ್ರಯತ್ನಿಸಿದ್ದಕ್ಕೆ. ನನ್ನ ಬಳಿ ಗನ್ ಇದ್ದು, ನಿನ್ನ ಹಾಗೂ ನಿನ್ನ ಗಂಡನನ್ನು ಮುಗಿಸುತ್ತೇನೆ ಎಂದು ಹೆದರಿಸಿದ್ದರು. ನಿನ್ನ ಗಂಡನಿಂದ ನನ್ನ ತಾಯಿಗೆ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೈತಪ್ಪಿ ಹೋಯಿತು. ನಿನ್ನ ಗಂಡ ರಾಜಕೀಯವಾಗಿ ಬೆಳೆಯಬೇಕಾದರೆ ನಾನು ಹೇಳಿದಂತೆ ಕೇಳಬೇಕು. ಅವನನ್ನು ಕೊಲ್ಲುತ್ತೇನೆ ಎಂದು ಪದೇ ಪದೆ ಬೆದರಿಕೆ ಹಾಕುತ್ತಿದ್ದರು ” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ