ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ.
ಸಿಂಹಪ್ರಿಯಾ ಜೋಡಿ ಮರ್ಸಿಡೀಸ್ ಬೆಂಜ್ ಜಿಎಲ್ಇ 450 ಡಿ ಕಾರು ಖರೀದಿಸಿದ್ದು, ಸಖತ್ ಐಷಾರಾಮಿ ಆಗಿದೆ.
ಕಾರನ್ನು ಖರೀದಿಸೋ ಸಂದರ್ಭದ ವಿಡಿಯೋ ಮಾಡಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶೋರೂಂನಲ್ಲಿ ಸಖತ್ ಅದ್ದೂರಿಯಾಗಿ ಡೆಕೋರೇಟ್ ಮಾಡಲಾಗಿತ್ತು. ಮೊದಲು ಕಾರನ್ನೇರಿದ ಹರಿಪ್ರಿಯಾ ಅವರು ಕಾರನ್ನು ಓಡಿಸಿದರು.
ಬೆಂಗಳೂರಿನಲ್ಲಿ ಈ ಕಾರಿನ ಬೆಲೆ 1.20-1.40 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದರಲ್ಲಿ 1993 ಸಿಸಿ ಹಾಗೂ 2989 ಸಿಸಿ ಇಂಜಿನ್ ಬರುತ್ತದೆ. ಕಾರಿನ ಟಾಪ್ ಸ್ಪೀಡ್ 230 ಕಿ.ಮೀ ಆಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮೀಷನ್ನ ಈ ಕಾರು ಹೊಂದಿದೆ.
ಚಂದನವನದ ಚೆಲುವೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ಮದುವೆಯಾದ ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಅನೇಕ ಸ್ಯಾಂಡಲ್ವುಡ್ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದ್ರು.