ಮೈಸೂರು: ಅಯೋಧ್ಯೆ ರಾಮಲಲ್ಲಾನ ವಿಗ್ರಹ ಕೆತ್ತನೆಗೆ ಬಳಸಿರುವ ಶಿಲೆ ಸಿಕ್ಕ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ತೆರಳಿದ್ದ ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ದಲಿತ ಮುಖಂಡರು ಘೇರಾವ್ ಹಾಕಿದ ಘಟನೆ ನಡೆದಿದೆ. ಮೈಸೂರಿನ (Mysuru) ಹಾರೋಹಳ್ಳಿಯಲ್ಲಿ ಬಾಲರಾಮನ ಮೂರ್ತಿಗೆ ಕಲ್ಲು ಸಿಕ್ಕಿತ್ತು.
Ram Mandir: ಅಯೋಧ್ಯಾ ನಗರಿಯಲ್ಲಿ ವಿರಾಜಮಾನನಾದ ಬಾಲರಾಮ: ಹಿಂದೂಗಳ ಕನಸು ನನಸು!
ಶಿಲೆ ಸಿಕ್ಕ ಸ್ಥಳದಲ್ಲೇ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದರು. ಅದರಂತೆ ಇಂದು (ಜ.22) ರಂದು ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲು ಸಂಸದ ಪ್ರತಾಪ್ ಸಿಂಹ ತೆರಳಿದ್ದವು. ಸಂಸದನಿಗೆ ದಲಿತ ಮುಖಂಡರು ಘೇರಾವ್ ಹಾಕಿದ್ದಾರೆ. ಸಂಸದ ಪ್ರತಾಪ್ ಸಿಂಹ ದಲಿತ ವಿರೋಧಿ ಎಂದು ಕೂಗಲಾಯಿತು. ಈ ವೇಳೆ ಬೇಸರದಿಂದ ಕಾರ್ಯಕ್ರಮದಿಂದ ಪ್ರತಾಪ್ ಸಿಂಹ ಹೊರಹೋದರು.