ಸ್ಯಾಂಡಲ್ ವುಡ್ ನಲ್ಲಿ ಬೇಬಿ ಸೀಸನ್ ಶುರುವಾಗಿದೆ. ಯೆಸ್. ಕನ್ನಡ ಹಿರಿತೆರೆ ಹಾಗೂ ಕಿರುತೆರೆಯ ನಟಿಯರು ಸದ್ಯದಲ್ಲೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ.
ಕನ್ನಡದ ಐವರು ನಟಿಯರು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಾಲ್ವರು ನಟಿಯರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರೆ ನಟಿ ಪ್ರಣೀತಾ ಸುಭಾಷ್ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ.
ಬಹುಭಾಷಾ ನಟಿ ಕನ್ನಡತಿ ಪ್ರಣಿತಾ ಸುಭಾಷ್ ಅವರು ಎರಡನೇ ಬಾರಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಖ್ಯಾತ ನಟಿ ಪ್ರಣೀತಾ ಅವರು ಈಗ ಎರಡನೇ ಸಲ ತಾಯಿಯಾಗುತ್ತಿರುವ ಖುಷಿಯಲ್ಲಿದ್ದಾರೆ. ಮತ್ತೊಮ್ಮೆ ಅಮ್ಮನಾಗುತ್ತಿದ್ದು ನಟಿ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಮೂಲಕ ಅಮ್ಮನಾಗುತ್ತಿರುವ ಮಾಹಿತಿಯನ್ನು ನೀಡಿದ್ದರು. ಸಕೆಂಡ್ ರೌಂಡ್, ಪ್ಯಾಂಟ್ ಫಿಟ್ ಆಗುತ್ತಿಲ್ಲ ಎಂದು ಪ್ಯಾಂಟ್ ಬಟನ್ ಓಪನ್ ಮಾಡಿ ಬೇಬಿ ಬಂಪ್ ರಿವೀಲ್ ಮಾಡಿದ್ದಾರೆ ನಟಿ. ಇದೇ ಕ್ಯಾಪ್ಶನ್ ಜೊತೆಗೆ ಫೋಟೋಗಳನ್ನು ಕೂಡಾ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಬ್ಲೂ ಜೀನ್ಸ್, ಬ್ಲ್ಯಾಕ್ ಸ್ಲೀವ್ಲೆಸ್ ಟೀ ಶರ್ಟ್ ಧರಿಸಿ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ಫೋಟೋಸ್ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಹರ್ಷಿಕಾ ಮತ್ತು ಭುವನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಈ ಒಂದು ಸಂತೋಷದ ವಿಷಯವನ್ನ ಸ್ಪೆಷಲ್ ಫೋಟೋ ಶೂಟ್ ಮೂಲಕವೇ ಹರ್ಷಿಕಾ ಮತ್ತು ಭುವನ್ ಎಲ್ಲರಿಗೂ ತಿಳಿಸಿದ್ದರು. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಕಳೆದ ವರ್ಷ ಆಗಸ್ಟ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.
ಐದು ತಿಂಗಳ ಗರ್ಭಿಣಿ ಹರ್ಷಿಕಾ ಪೂಣಚ್ಚ ಅಕ್ಟೋಬರ್ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆ ಮಾಡುತ್ತಿದ್ದಾರೆ. ಸ್ವತಃ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಚ್ಚ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದರು.
ಸ್ಯಾಂಡಲ್ವುಡ್ ದಂಪತಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿ ಸೋಷಿಯಲ್ ಮೀಡಿಯಾ ಮೂಲಕ ತಾಯಿಯಾಗುವ ಶುಭ ಸುದ್ದಿಯನ್ನು ಕೊಟ್ಟಿದ್ದಾರೆ. ತಾನು ಗರ್ಭಿಣಿ ಎನ್ನುವುದನ್ನು ಅನೌನ್ಸ್ ಮಾಡಿದ್ದರು.
ನಮ್ಮನ್ನ ಆಶಿರ್ವದಿಸಿ ಎಂದು ನಟಿ ತಮ್ಮ ಇನ್ಸ್ಟಾ ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಅದರೊಂದಿಗೆ ಸುಂದರವಾದ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಮಗುವಿನ ಡ್ರೆಸ್ ಇದ್ದು ಅದರಲ್ಲಿ ಬೇಬಿ ಕ್ರಿಸ್ಮಿ ಎಂದು ಬರೆದು ಪಿಂಕ್ ಹಾರ್ಟ್ ಹಾಕಲಾಗಿದೆ. ಅದರೊಂದಿಗೆ ಡ್ಯೂ ಡೇಟ್ ಕೂಡಾ ನಮೂದಿಸಿದ್ದಾರೆ. ಈ ವರ್ಷವೇ ಸೆಪ್ಟೆಂಬರ್ನಲ್ಲಿ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.
ಕಿರುತೆರೆ ನಟಿ, ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ ಕೂಡಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಅವರು ಪತಿಯೊಂದಿಗೆ ಬ್ಲ್ಯಾಕ್ ಔಟ್ಫಿಟ್ನಲ್ಲಿ ಫೋಟೋ ಶೂಟ್ ಕೂಡಾ ಮಾಡಿಸಿಕೊಂಡಿದ್ದರು.
ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಿನ್ನು ಪಾತ್ರ ಮಾಡಿದ್ದ ಕವಿತಾ ಗೌಡ ಕೂಡಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಕೂಡಾ ಇನ್ಸ್ಟಾಗ್ರಾಮ್ ಮೂಲಕ ಬೇಬಿ ಬಂಪ್ ಅಪ್ಡೇಟ್ಸ್ ಕೊಡುತ್ತಲೇ ಇರುತ್ತಾರೆ. ಅಂತೂ ಈ ನಟಿಯರೆಲ್ಲ ಮಗುವನ್ನು ಸ್ವಾಗತಿಸುವ ಖುಷಿಯಲ್ಲಿದ್ದಾರೆ. ಅವರ ಅಭಿಮಾನಿಗಳು ಕೂಡಾ ಎಕ್ಸೈಟ್ ಆಗಿದ್ದಾರೆ.