ಬೆಂಗಳೂರು:- 2024 ಲೋಕಸಭಾ ಚುನಾವಣೆ ಅಂಗವಾಗಿ ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. 14 ಕ್ಷೇತ್ರದಲ್ಲಿ ವೋಟಿಂಗ್ ನಡೆಯಲಿದ್ದು, 247 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
IPL 2024: RCB ಆರ್ಭಟಕ್ಕೆ ನಲುಗಿದ ಹೈದರಾಬಾದ್ – SRH ಮನೆ ಅಂಗಳದಲ್ಲೇ ಗೆದ್ದು ಬೀಗಿದ ಬೆಂಗಳೂರು!
ಇನ್ನು ನಿನ್ನೆ(ಏಪ್ರಿಲ್ 25) ಬೆಳಗಿನಿಂದಲೇ 14 ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮಾಡಿ ಇವಿಎಂ, ವಿವಿಪ್ಯಾಟ್, ಮತದಾರರ ಪಟ್ಟಿ, ಶಾಹಿ ಸೇರಿದಂತೆ ಚುನಾವಣೆ ಸಾಮಾಗ್ರಿ ರವಾನಿಸಲಾಗಿದೆ. ಇವುಗಳನ್ನ ಹೊತ್ತು ಚುನಾವಣೆ ಸಿಬ್ಬಂದಿ ಮತಗಟ್ಟೆ ಸೇರಿದ್ದಾರೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದ್ದು, ಒಟ್ಟು 2ಕೋಟಿ 88 ಲಕ್ಷದ 19 ಸಾವಿರದ 342 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1ಕೋಟಿ 44 ಲಕ್ಷದ 17ಸಾವಿರದ 530 ಪುರುಷ ಮತದಾರರು, 1ಕೋಟಿ 43ಲಕ್ಷದ 87ಸಾವಿರದ 585 ಮಹಿಳಾ ಮತದಾರರಿದ್ದಾರೆ. ಮತಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಮತದಾನದ ವೇಳೆ ವೇಳೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮನ್ರೆಗಾ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಹಕ್ಕು ಚಲಾಯಿಸಬಹುದು. 30ಸಾವಿರದ 600 ಮತಗಟ್ಟೆಗಳ ಪೈಕಿ 19,701 ಮತಗಟ್ಟೆಗಳಲ್ಲಿ ಲೈವ್ವೆಬ್ಕಾಸ್ಟ್ ಇರಲಿದೆ ಅಂತಾ ಚುನಾವಣಾ ಆಯೋಗ ತಿಳಿಸಿದೆ.
ಇಂದು ನಡೆಯೋ 14 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿವೆ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ. ಇನ್ನೂ ಚುನಾವಣಾ ಕಾರ್ಯಕ್ಕಾಗಿ ಆಯೋಗ 3ಸಾವಿರದ 800 ಬಸ್ಗಳನ್ನ ಬಳಕೆ ಮಾಡಿಕೊಳ್ತಿದೆ. ಇದರಲ್ಲಿ 2,100 KSRTC ಬಸ್, 1,700 BMTC ಜೊತೆಗೆ ಖಾಸಗಿ ಬಸ್ ಮತ್ತು ಶಾಲಾ ವಾಹನಗಳನ್ನ ಬಳಸಿಕೊಂಡಿದೆ. ಹೀಗಾಗಿ ಇಂದು ಮತ್ತು ನಾಳೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯೆಯವಾಗಲಿದೆ. ಖಾಸಗಿ ಬಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ರಸ್ತೆಗೆ ಇಳಿದಿವೆ. ಬೇಡಿಕೆ ಹೆಚ್ಚಾಗ್ತಿದ್ದಂತೆ, ಟಿಕೆಟ್ ರೇಟ್ ಕೂಡ ಏರಿಕೆಯಾಗಿದೆ
ಕರ್ನಾಟಕ ಮಾತ್ರವಲ್ಲದೇ ಒಟ್ಟು 13 ರಾಜ್ಯದ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕೇರಳ 20, ಮಧ್ಯಪ್ರದೇಶ 06, ಮಹಾರಾಷ್ಟ್ರ 08, ರಾಜಸ್ಥಾನ 13, ಉತ್ತರ ಪ್ರದೇಶದ 8 ಕ್ಷೇತ್ರ ಸೇರಿ ಒಟ್ಟು 88 ಲೋಕಸಭಾ ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. ಇನ್ನು ರಾಹುಲ್ ಸ್ಪರ್ಧಿಸಿರುವ ವಯನಾಡಿನಲ್ಲಿ ಇಂದು ವೋಟಿಂಗ್ ನಡೆಯಲಿದೆ