ಮಂಡ್ಯ:- ಸಕ್ಕರೆ ನಾಡು ಮಂಡ್ಯದಲ್ಲಿ ಸರ್ಕಾರ ಭ್ರೂಣಲಿಂಗ ಪತ್ತೆ ದಂಧೆ ಮಟ್ಟಹಾಕಲು ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದು, ಫೇಸ್ ಬುಕ್ ಪೋಸ್ಟ್ ಮೂಲಕ ನೋವು ಹೊರಹಾಕಿದ್ದಾರೆ.
ಅಂಜಲಿ ಕೊಲೆಗಡುಕ ಗಿರೀಶ್ ಸಾವಂತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು..!
ಈ ಕರಾಳ ದಂಧೆ ನಿರ್ಭಯವಾಗಿ ನಡೆಯುತ್ತಿದ್ದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಈ ಹಿಂದೆ ಎಚ್ಚರಿಸಿತ್ತು. ಆದರೂ ಸರ್ಕಾರದ ನಿರ್ಲಕ್ಷ ಧೋರಣೆ ಯಾಕೆ ಎಂದು ಕಿಡಿಕಾರಿದ್ದಾರೆ. ಸರ್ಕಾರಿ ಕ್ವಾಟ್ರಸ್ನಲ್ಲಿಯೇ ಇಂತಹ ನೀಚ ಕೃತ್ಯ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಹಿಂದೆ ಪ್ರಕರಣ ಬೆಳಕಿಗೆ ಬಂದಾಗ ಕಠಿಣ ಕ್ರಮಕೈಗೊಂಡಿದ್ದರೆ, ಪುನಃ ಇಂತಹ ಪ್ರಕರಣ ನಡೆಯುತ್ತಿತ್ತಾ?, ಈಗಲಾದರೂ ಸರ್ಕಾರ ಈ ದುಷ್ಕೃತ್ಯದಲ್ಲಿ ಶಾಮೀಲಾದ ವೈದ್ಯರು, ತಪ್ಪಿತಸ್ಥರನ್ನ ಶಿಕ್ಷಿಸುತ್ತಾ ಎಂದು ಪ್ರಶ್ನಿಸಿದ ಅವರು, ಒಬ್ಬ ತಾಯಿಯಾಗಿ ಇಂತಹ ಹೇಯ ಕೃತ್ಯದ ಬಗ್ಗೆ ತಿಳಿದು ನೋವಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನರ್ಸ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದರು. ‘ಈ ಆರೋಪಿಗಳು 25 ರಿಂದ 30 ಸಾವಿರಕ್ಕೆ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರು. ಗರ್ಭಿಣಿಯರನ್ನು ಟಾರ್ಗೆಟ್ ಮಾಡಿ ಅವರಿಗೆ ಹೆಣ್ಣು ಮಗು ಬಗ್ಗೆ ನಿರಾಸಕ್ತಿಯಿದ್ರೆ ಭ್ರೂಣ ಹತ್ಯೆ ಮಾಡ್ತಿದ್ದರು ಎಂದು ವಿಚಾರಣೆ ವೇಳೆ ಕರಾಳ ದಂಧೆಯ ಬಗ್ಗೆ ಬಂಧಿತ ನರ್ಸ್ ಬಾಯ್ಬಿಟ್ಟಿದ್ದಾರೆ. ಸ್ಕಾನಿಂಗ್ ಸೆಂಟರ್ಗಳಿಗೆ ಬರುವ ಗರ್ಭಿಣಿಯರನ್ನು ಟಾರ್ಗೆಟ್ ಮಾಡಿ ಎರಡನೇ ಮಗುವಿನ ಸ್ಕ್ಯಾನಿಂಗ್ಗೆ ಬಂದಿದ್ದಾರೆ ಎಂದರೆ ಗಾಳ ಹಾಕುತ್ತಿದ್ದರು. ಹೆಣ್ಣು ಮಗು ಬಗ್ಗೆ ನಿರಾಸಕ್ತಿ ತೋರಿಸಿದ್ರೆ ಭ್ರೂಣ ಲಿಂಗ ಪರೀಕ್ಷೆ ಮಾಹಿತಿ ನೀಡುತ್ತಿದ್ದರು.