ವಿಜಯಪುರ:- ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ.
ಅದರಂತೆ ಇಂದು ಬೆಳಿಗ್ಗೆ 7 ಗಂಟೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಇವಿಎಂ ಮಷೀನ ಕೈಕೊಟ್ಟಿದೆ. ಭೂತ ಸಂಖ್ಯೆ 92 ರಲ್ಲಿ ಘಟನೆ ಜರುಗಿದೆ. ಕಳೆದ ಅರ್ದ ಗಂಟೆಯಿಂದ ಮಷೀನ್ ಬಂದ್ ಆಗಿದೆ.
ಮಷೀನ್ ಕೈ ಕೊಟ್ಟ ಹಿನ್ನಲೆಯಲ್ಲಿ ಸರತಿ ಸಾಲಿನಲ್ಲಿ ಜನರು ನಿಂತ ದೃಶ್ಯ ಕಂಡು ಬಂದಿದೆ. ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿ ಜನರು ಕೆಳಗೆ ಕುಳಿತಿದ್ದದಾರೆ.
21 ಮತ ಚಲಾವಣೆ ಆದ ಬಳಿಕ ಮಷಿನ್ ಕೈ ಕೊಟ್ಟಿದೆ. ಭೂತ್ ಸಂಖ್ಯೆ 92 ರಲ್ಲಿ ಒಟ್ಟು 1245 ಜನ ಮತದಾರರು ಇದ್ದು, ಬೇರೆ ಮಷೀನ್ ಅಳವಡಿಸಿ ಮತದಾನ ಮುಂದುವರೆಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.