ಹುಬ್ಬಳ್ಳಿ: ಶಿರಗುಪ್ಪಿ ವಲಯದ ಇಂಗಳಹಳ್ಳಿಯ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಯೋಜನಾಧಿಕಾರಿ ಜಯಂತ. ಕೆ ಅವರು ಸಸಿಗೆ ನೀರುಣಿಸೋ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈಗಾಗಲೇ ಗ್ರಾಮೀಣ ಭಾಗದಲ್ಲಿ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಅಂದ್ರು.
ತುಂಗಭದ್ರಾ ಡ್ಯಾಂ: ನೀರಿನ ರಭಸದ ನಡುವೆಯೇ ಇಂದಿನಿಂದ ಗೇಟ್ ಅಳವಡಿಸುವ ಕಾರ್ಯ!
ನಂತರ ಮಾತನಾಡಿದ ಮೇಲ್ವಿಚಾರಕ ರವಿ ಪತ್ತಾರ ಅವರು ಪ್ರಸುತ್ತ ಆರ್ಥಿಕ ವರ್ಷಕ್ಕೆ ತಾಲೂಕಿನಾದ್ಯಂತ ರೈತರ ಜಮೀನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 3000 ಗಿಡಗಳನ್ನ ನೆಡುವ ಗುರಿ ಹೊಂದಲಾಗಿದೆ ಅಂದ್ರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಎಚ್ ಎಫ್ ಮೂಡಿಯಣ್ಣನವರ ಪರಿಸರ ಸಂರಕ್ಷಣೆ ಕುರಿತು ಮಾಹಿತಿಯನ್ನು ನೀಡಿದರು.
ಗಣ್ಯರಿಂದ ಮತ್ತು ಶಾಲೆಯ ಮಕ್ಕಳಿಂದ ಸಸಿಗಳನ್ನು ನೆಡಲಾಯಿತು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು. R M ಕ್ಯಾಮನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ರು. ಶಿಕ್ಷಕಿ ಶಿಲ್ಪಾ ಕುರಹಟ್ಟಿ ಕಾರ್ಯಕ್ರಮ ನಿರೂಪಿಸಿದರು, ಕಾವ್ಯ ನಲವಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಮಿತಿಯ ಸದಸ್ಯ ಶಾಂತಪ್ಪ, ಶಾಲೆಯ ಶಿಕ್ಷಕರ ವೃಂದ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.