ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ ಚೈನ್ ಲಿಂಕ್ ಮುರಿದು ಅಪಾರ ಪ್ರಮಾಣದ ನೀರು ನದಿಗೆ ಹೋಗುತ್ತಿದೆ. ಈ ವರ್ಷದ ಮುಂಗಾರು ಮಳೆ ಅಬ್ಬರಕ್ಕೆ ಡ್ಯಾಂ ಭರ್ತಿಯಾಗಿದೆ ಎಂದು ಸಂತಸಗೊಂಡಿದ್ದ ರೈತರು ಈಗ ಗೇಟ್ ಮುರಿದಿರುವುದರಿಂದ ಆತಂಕಗೊಂಡಿದ್ದಾರೆ.
ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರ್ ಏರಿಕೆ, ಫಲಾನುಭವಿಗಳ ಆಕ್ರೋಶ!
ಡ್ಯಾಂ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನೀರು ಇರುವಾಗಲೇ ಗೇಟ್ ಅಳವಡಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ನೀರು ಇರುವಾಗ ಶಟರ್ಗಳನ್ನು ಹೇಗೆ ಸೆಟ್ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿರುವ ಕನ್ನಯ್ಯ ನಾಯ್ಡು ಆ್ಯಂಡ್ ಟೀಂ 20 ಅಡಿ ಅಗಲ, 12 ಅಡಿ ಉದ್ದದ ಕಟ್ ಮಾಡಿ ರೆಡಿ ಇರಿಸಿಕೊಂಡಿದೆ. ಈಗ ಗೇಟ್ ಮುಚ್ಚಿದರೆ ಜಲಾಶಯದಲ್ಲಿ ಸಾಕಷ್ಟು ನೀರು ಉಳಿಸಿಕೊಳ್ಳಬಹುದು. ಇಲ್ಲವಾದರೆ ಸುಮಾರು 60 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಹರಿದುಹೋಗಲಿದೆ.
ಕನ್ನಯ್ಯ ನಾಯ್ಡು ಅವರ ಪ್ರಯತ್ನದಿಂದ ನೀರು ಉಳಿಯುವ ಭರವಸೆ ಮೂಡಿದೆ. ಪರಿಣಿತರಾದ ಕನ್ನಯ್ಯ ನಾಯ್ಡು ಅವರಿಂದ ನೀರು ಉಳಿಸುವ ಪ್ರಯತ್ನ ನಡೆದಿದ್ದು, ಬಳ್ಳಾರಿಯ ಜಿಂದಾಲ್ನಿಂದ ಬೃಹತ್ ಯಂತ್ರಗಳು ಬಂದಿವೆ. ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್, ಹೊಸಳ್ಳಿಯ ಹಮೀದ್ ಎಂಜನಿಯರ್ಸ್ಗಳಲ್ಲಿ ಗೇಟ್ ರೆಡಿ ಮಾಡಲಾಗಿದೆ.
ಕ್ರೆಸ್ಟ್ ಪರಿಣತ ಎಂದೇ ಖ್ಯಾತಿ ಪಡೆದಿರುವ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಸ್ಥಳದಲ್ಲಿದ್ದು, ಒಟ್ಟಾರೆ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಸಿಎಂ ಆಗಮನಕ್ಕೂ ಮುನ್ನವೇ ಜಲಾಶಯಕ್ಕೆ ಆಗಮಿಸಿದ್ದ ಕನ್ನಯ್ಯ ನೇತೃತ್ವದ ತಜ್ಞರ ತಂಡ ಅದರ ಪರಿಶೀಲನೆ ನಡೆಸಿತ್ತು.
ಕ್ರೆಸ್ಟ್ ತಜ್ಞ ಅಂತಲೇ ಪ್ರಖ್ಯಾತಿ ಹೊಂದಿರೋ ಕನ್ಹಯ್ಯ ನಾಯ್ಡು ಹೇಳಿರುವ ಪ್ರಕಾರ, ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸುವುದು ಕಷ್ಟ. 48 ಟನ್ ಭಾರದ ಗೇಟ್ ಒಂದೇ ಬಾರಿಗೆ ಇಳಿಸುವುದು ಕಷ್ಟ. ಒಟ್ಟು ಐವತ್ತು ಟನ್ ಭಾರದ ಕಬ್ಬಿಣದ ಗೇಟ್ನಲ್ಲಿ ಐದು ಪೀಸ್ಗಳನ್ನು ಒಂದೊಂದಾಗಿ ಇಳಿಸಬೇಕು. ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗುತ್ತಿದೆ.
ನಾಳೆಯಿಂದ ಒಂದೊಂದೇ ಪೀಸ್ಗಳನ್ನು ಕೂರಿಸುತ್ತೇವೆ. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡುತ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಗೇಟ್ ಆಯುಷ್ಯ ಸುಮಾರು 40 ವರ್ಷ ಇರುತ್ತದೆ. ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಉತ್ತಮವಾಗಿ ಎಲ್ಲ ರೀತಿಯ ಮೆಂಟೆನೆನ್ಸ್ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ತಾತ್ಕಾಲಿಕ. ನೀರು ಕಡಿಮೆಯಾದ ಮೇಲೆ ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಕನ್ನಯ್ಯ ನಿನ್ನೆ ತಿಳಿಸಿದ್ದರು.