ಬೆಂಗಳೂರು:- ಚುನಾವಣೆ ಹಿನ್ನೆಲೆ ಬಿಯರ್ ಉತ್ಪಾದನೆಗೆ ಕಡಿವಾಣ ಹಾಕಲಾಗಿದೆ ಎಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ಕರುಣಕರ್ ಹೆಗ್ಡೆ ಹೇಳಿದ್ದಾರೆ.
ಐಸ್ ಕ್ರೀಮ್ ಸೇವಿಸಿ ಅವಳಿ ಮಕ್ಕಳ ಸಾವು ಪ್ರಕರಣ: ಹೆತ್ತ ತಾಯಿಯೇ ವಿಷ ಹಾಕಿರುವ ಶಂಕೆ!
ಈ ಸಂಬಂಧ ಮಾತನಾಡಿದ ಅವರು, ಸಾಮಾನ್ಯವಾಗಿ ಬೇಸಿಗೆ ವೇಳೆ ಬಿಯರ್ ಮಾರಟ ಜಾಸ್ತಿ ಇರುತ್ತೆ. ಈ ವರ್ಷ ಬಿಸಿಲು ಅಧಿಕವಿದೆ, ಜೊತೆಗೆ ಚುನಾವಣೆ ಇದೆ. ಹೀಗಾಗಿ ಬಿಯರ್ ಮಾರಾಟದಲ್ಲಿ ಈ ವರ್ಷ ಅಧಿಕವಾಗಿದೆ. ಈ ವರ್ಷ 20ರಿಂದ 30 ಪರ್ಸೆಂಟ್ ಸೇಲ್ಸ್ ಜಾಸ್ತಿ ಆಗಿದೆ. ಬೇಡಿಕೆ ಇದ್ರು ಅಗತ್ಯವಿರುವಷ್ಟು ಬಿಯರ್ ಪೂರೈಕೆಯಾಗ್ತಿಲ್ಲ. ಚುನಾವಣೆ ಹಿನ್ನೆಲೆ ಬಿಯರ್ ಉತ್ಪಾದನೆಗೆ ಕಡಿವಾಣ ಹಾಕಲಾಗಿದೆ ಎಂದರು.
ಡಿಮ್ಯಾಂಡ್ ಇರುವ ಬ್ರ್ಯಾಂಡ್ ಗಳ ಸ್ಟಾಕ್ ಯಿಲ್ಲದೇ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಸದ್ಯ ಮಾರಾಟ ಅಧಿಕವಾಗಿರೋದ್ರಿಂದ ನಮಗೆ ಲಾಭವಾಗ್ತಿದೆ ಎಂದು ಹೇಳಿದ್ದಾರೆ.