ಕಂಪಾಲ: 70 ವರ್ಷದ ವೃದ್ಧೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಹೌದು 70ರ ಇಳಿ ವಯಸ್ಸಿನಲ್ಲಿ ತಾಯಿಯಾಗಿರುವ ಸಫೀನಾ ನಮುಕ್ವಾಯಾ ಸದ್ಯ ವಿಶ್ವದ ಹಿರಿಯ ತಾಯಂದಿರಲ್ಲಿ ಒಬ್ಬರಾಗಿದ್ದಾರೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಸಫೀನಾ ಜನ್ಮ ನೀಡಿದ್ದಾರೆ. ಇವರಿಗೆ ವಿಟ್ರೋ ಫರ್ಟಿಲೈಜೇಶನ್ ಎಂಬ ಚಿಕಿತ್ಸೆ ನೀಡಲಾಗಿತ್ತು. ಇದೀಗ ಸಫೀನಾ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ಚಿಕಿತ್ಸೆ ಬಳಿಕ ಭಾರತದಲ್ಲೂ 2019ರಲ್ಲಿ 73ರ ವೃದ್ಧೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.
ಇಂಟ್ರೊವೆನಸ್ ಫರ್ಟಿಲಿಟಿ ಚಿಕಿತ್ಸೆ ನಂತರ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ಮೂಲಕ ಮಗುವಿಗೆ ಇಳಿವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವಿಶ್ವದ ಕೆಲವೇ ಮಹಿಳೆಯರಲ್ಲಿ ಸಫೀನ ಕೂಡ ಒಬ್ಬರೆನಿಸಿದ್ದಾರೆ. ಸಿ ಸೆಕ್ಷನ್ (ಸಿಸೇರಿಯನ್ )ಮೂಲಕ ಇವರು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಆಕೆ ಆರೋಗ್ಯವಾಗಿದ್ದಾಳೆ, ಮಾತನಾಡುತ್ತಾಳೆ. ವಾಕ್ ಮಾಡಿ ಎಂದರೆ ಆಸ್ಪತ್ರೆ ಸುತ್ತ ವಾಕ್ ಮಾಡುತ್ತಾರೆ ಎಂದು ಆಸ್ಪತ್ರೆ ವಕ್ತಾರ ಅರ್ಥೂರ್ ಮತ್ಸಿಕೊ ಹೇಳಿದ್ದಾರೆ. ಸೈಫಿನಾ ಅವರು 2020ರಲ್ಲಿ ಇದೇ ರೀತಿ ಐವಿಎಫ್ ಚಿಕಿತ್ಸೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ವೈದ್ಯಕೀಯ ಯಶಸ್ಸಿಗಿಂತ ದೊಡ್ಡ ಸಾಹಸವಾಗಿದ್ದು, ಇದು ಮಾನವ ಚೇತನದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಎಂದು ಆಸ್ಪತ್ರೆ ಹೇಳಿದೆ.
ದಾನಿಯೊಬ್ಬರು ನೀಡಿದ ಅಂಡಾಣು ಹಾಗೂ ಆಕೆಯ ಗಂಡನ ವೀರ್ಯಾಣುವನ್ನು ಐವಿಎಫ್ ಮೂಲಕ ಮಹಿಳೆಯ ಗರ್ಭದಲ್ಲಿ ಇರಿಸಲಾಗಿತ್ತು. ಮಕ್ಕಳು ಅವಧಿಗೆ ಮೊದಲೇ ಅಂದರೆ 31ನೇ ವಾರದಲ್ಲೇ ಜನಿಸಿದ್ದು, (ಸಾಮಾನ್ಯವಾಗಿ 34ರಿಂದ 36 ವಾರಗಳು )ಮಕ್ಕಳನ್ನು ಇನ್ಕ್ಯೂಬೆಟರ್ನಲ್ಲಿ ಇಡಲಾಗಿದ್ದು, ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರಾದ ಡಾ. ಸಾಲಿ ಹೇಳಿದ್ದಾರೆ.