ಬೆಂಗಳೂರು:- ಹೊಸ ರೇಷನ್ ಕಾರ್ಡ್ ಗೆ ಶೀಘ್ರವೇ ಅರ್ಜಿ ಹಾಕಲು ಪ್ರಾರಂಭವಾಗಲಿದೆ. ಕರ್ನಾಟಕ ಸರ್ಕಾರ ಕಡೆಯಿಂದ ಈಗಾಗಲೇ ಸುಮಾರು ಸಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿತ್ತು ಹಾಗೂ ತಿದ್ದುಪಡಿ ಕೂಡ ಅವಕಾಶ ಮಾಡಿಕೊಟ್ಟಿತ್ತು. ಆದರೆ ತುಂಬಾ ಸಲ ಅವಕಾಶ ಕೊಟ್ಟಿದ್ದರೂ ಸರ್ವರ್ ಸಮಸ್ಯೆಯಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ತುಂಬಾ ಜನರಿಗೆ ಸಾಧ್ಯವಾಗಿಲ್ಲ ಆಗು ತಿದ್ದುಪಡಿಗೂ ಕೂಡ ಸಾಧ್ಯವಾಗಿಲ್ಲ
ಸದ್ಯ ಏಪ್ರಿಲ್ ತಿಂಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತೆ ಎಂಬ ಮಾಹಿತಿ ಕೂಡ ವರ ಬಿದ್ದಿತ್ತು ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಮಿತಿ ಜಾರಿಯಲ್ಲಿತ್ತು. ಆದರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲು ಸಾಧ್ಯವಾಗಿರಲಿಲ್ಲ ಎಂಬ ಮಾಹಿತಿ ಸರ್ಕಾರ ಕಡೆಯಿಂದ ಬಂದಿದೆ
ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಸರಕಾರವು ಜೂನ್ ತಿಂಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತೆ ಎಂಬ ಮಾಹಿತಿ ಕೂಡ ನೀಡಿದ್ದು ಬಯಸುವಂತಹ ಸದಸ್ಯರು ಈ ಕೆಳಗಡೆ ನೀಡಿದ ಎಲ್ಲಾ ದಾಖಲಾತಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ನಂತರ ನಿಮಗೆ ಜೂನ್ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವಂತಹ ದಾಖಲಾತಿಗಳು..?
ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರ)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಯಾರಾದರೂ ಕುಟುಂಬದ ಒಬ್ಬ ಸದಸ್ಯರು ಮಾತ್ರ)
ಜನನ ಪ್ರಮಾಣ ಪತ್ರ (ಆರು ವರ್ಷಕ್ಕಿಂತ ಕೆಳಗಿರುವ ಮಕ್ಕಳಿಗೆ ಮಾತ್ರ)
ಮೊಬೈಲ್ ನಂಬರ್ (ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವಂತ ನಂಬರ್)
ಇತ್ತೀಚಿನ ಭಾವಚಿತ್ರ (ಕುಟುಂಬ ಮುಖ್ಯಸ್ಥರ ಫೋಟೋ)
ಮೇಲೆ ನೀಡಿದ ಎಲ್ಲಾ ದಾಖಲಾತಿಗಳು ನೀವು ರೆಡಿ ಮಾಡಿ ಇಟ್ಟುಕೊಳ್ಳಿ ನಂತರ ನಿಮಗೆ ಜೂನ್ ತಿಂಗಳಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಕೊಟ್ಟ ನಂತರ ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಎಲ್ಲಿ ಹಾಕಬೇಕೆಂಬ ಮಾಹಿತಿ ಇರುವುದಿಲ್ಲ ಅಂತವರಿಗೆ ಈ ಕೆಳಕಂಡ ಅಂತ ಆನ್ಲೈನ್ ಸೆಂಟರ್ ಗಳ ಮೂಲಕ ನೀವು ಹೊಸ ರೇಷನ್ ಕಾರ್ಡಿಗೆ ಜೂನ್ ತಿಂಗಳಲ್ಲಿ ಅಥವಾ ಸರ್ಕಾರ ಕಡೆಯಿಂದ ಅವಕಾಶ ಬಿಟ್ಟಾಗ ಅರ್ಜಿ ಸಲ್ಲಿಸಬಹುದು
ಗ್ರಾಮ ಒನ್
ಕರ್ನಾಟಕ ಒನ್
ಬೆಂಗಳೂರು ಒನ್
CSC ಕೇಂದ್ರ
ಇತರ ಆನ್ಲೈನ್ ಸೆಂಟರ್ ಗಳು
ಈ ಮೇಲೆ ನೀಡಿದ ಆನ್ಲೈನ್ ಸೆಂಟರ್ಗಳ ಮೂಲಕ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು.