ಬೇಸಿಗೆಯಲ್ಲಿ ಸಾಮಾನ್ಯವಾಗಿ ಹಾವುಗಳು ತಂಪಾದ ಸ್ಥಳ ಹುಡುಕುತ್ತಾ ಬರುತ್ತವೆ. ಹೀಗಾಗಿ ಬೇಸಿಗೆಯಲ್ಲಿ ಮನೆಗೆ ಹಾವು ನುಗ್ಗಿದಾಗ ಭಯಪಡಬೇಡಿ. ಏನು ಮಾಡಬೇಕು ಎಂದು ಉತ್ತರ ಕನ್ನಡ ಸ್ನೇಕ್ ಪವನ್ ಮಾಹಿತಿ ನೀಡಿದ್ದಾರೆ
IPL 2024: RCB ಅಭಿಮಾನಿಗಳಿಗೆ ಸಿಹಿ ಸುದ್ದಿ -ಮಳೆ ಬಂದರೂ ಮ್ಯಾಚ್ ನಡೆಯುವುದು ಖಚಿತ..!
ಹಾವನ್ನು ಕೋಣೆಯಲ್ಲಿ ಅಥವಾ ಬೇರೆ ಕಡೆ ಲಾಕ್ ಮಾಡಿ ನೀವು ಹೊರಗಿದ್ದು ಕಾಯಬೇಡಿ. ಹಾವಿನ ಚಲನವಲನವನ್ನು ಸೂಕ್ಷ್ಮವಾಗಿ ದೂರದಿಂದಲೇ ಗಮನಿಸಿ. ಹಾವು ಕೂಡ ಆದಷ್ಟು ಹೊಸ ಜಾಗದಿಂದ ಹೊರಗೆ ಹೋಗಲು ಪ್ರಯತ್ನಿಸುತ್ತದೆ, ಹಾಗಾಗಿ ಅದು ಹೊರಗೆ ಹೋಗಲು ದಾರಿ ಮಾಡಿಕೊಡಬೇಕು. ಅದನ್ನು ನೋಡೋ ಕುತೂಹಲದಲ್ಲಿ ಅದರ ಮುಂದೆ ಜನಜಂಗುಳಿ ಜಮಾಯಿಸಬಾರದು.
ಸ್ವಚ್ಛತೆ ಇದ್ದಲ್ಲಿ ಹಾವುಗಳು ಸುಳಿಯುವುದಿಲ್ಲ. ಸ್ವಚ್ಛ ಇರದ ಜಾಗದಲ್ಲಿ ಇಲಿಗಳ ಓಡಾಟ, ಇಲಿಗಳ ವಾಸನೆ ಬಂದರೆ ಹಾವುಗಳು ಅದರ ವಾಸನೆ ಪತ್ತೆ ಹಚ್ಚಿ ನಿಮ್ಮ ಮನೆಗೆ ಬಂದೇ ಬರುತ್ತವೆ. ಹಾಗಾಗಿ ಪ್ರಾರ್ಥಮಿಕ ಸ್ವಚ್ಛತೆ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ. ಹಾವುಗಳೂ ಕೂಡ ಉಳಿದ ಪ್ರಾಣಿಗಳಂತೆ ನೀರನ್ನು ಅರಿಸಿ ಮನೆಗೆ ಅಥವಾ ತಂಪಾದ ಜಾಗಗಳಿಗೆ ಬರುತ್ತವೆ. ಹಾಗೆ ಬಂದಾಕ್ಷಣ ಜನರು ಹೆದರುವ ಅಗತ್ಯವಿಲ್ಲ. 90% ಹಾವುಗಳು ವಿಷಕಾರಿ ಹಾವುಗಳಲ್ಲ. ಮನೆಯೊಳಗೆ ಬರುವ ಪ್ರಾಣಿಗಳು ಕೆರೆ ಹಾವು, ನಾಗರಹಾವು, ನೀರೊಳ್ಳೆ ಹಾವು, ಮರ ಹಾವು ಇತ್ಯಾದಿಗಳೇ ಅಧಿಕವಾದವು. ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಉರಗತಜ್ಞರಿಗೆ ಕಳುಹಿಸಬೇಕು, ಅವರು ಬರೋವರೆಗೂ ಅವರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು.