ಬೆಂಗಳೂರು:- ಅಶ್ಲೀಲ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ ಜರ್ಮನಿಯಲ್ಲಿದ್ದ ಪ್ರಜ್ವಲ್ ರೇವಣ್ಣ ಅವರು ಇದೀಗ ಲಂಡನ್ ಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ.
ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು ಮಾಹಿತಿ ಇತ್ತು. ಇದೀಗ ಪ್ರಜ್ವಲ್ ರೇವಣ್ಣ ಜರ್ಮನಿಯಿಂದಲೂ ಕಾಲ್ಕಿತ್ತಿದ್ದು, ಲಂಡನ್ಗೆ ಹೋಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಹುಟ್ಟುಹಬ್ಬ: ಲಕ್ಷ್ಮೀ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದ HDD.. ಬಾಡಿ ಹೋಗಿರುವ ದೇವೇಗೌಡರ ಮುಖ!
ಇಂಗ್ಲೆಂಡ್ನಲ್ಲಿನ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ಇಬ್ಬರು ಗೆಳೆಯರು ರೈಲು ಮೂಲಕ ಜರ್ಮಿನಿಯ ಮ್ಯೂನಿಚ್ ಲಂಡನ್ಗೆ ಹೋಗಿರುವ ಬಗ್ಗೆ ಟಿವಿ9ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ದುಬೈ ಮೂಲದ ಒರ್ವ ಮತ್ತು ಬೆಂಗಳೂರು ಮೂಲದ ಒರ್ವ ಸ್ನೇಹಿತ ಪ್ರಜ್ವಲ್ ರೇವಣ್ಣ ಅವರ ಜೊತೆ ಇದ್ದಾರೆ. ಮೂರು ಮಂದಿ ಒಟ್ಟಿಗೆ ಲಂಡನ್ಗೆ ಹೋಗಿರುವ ಸಾಧ್ಯೆತೆ ಇದೆ. ಇನ್ನು ಪ್ರಜ್ವಲ್ ರೇವಣ್ಣ ಕೆಳದ 15 ದಿನಗಳಿಂದ ಕುಟುಂಬದ ಸಂಪರ್ಕದಲ್ಲಿಲ್ಲ.
ಪ್ರಜ್ವಲ್ ರೇವಣ್ಣ ಈಗಾಗಲೇ 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಅಂದರೆ ಜೂನ್ 4ರ ನಂತರ ಪ್ರಜ್ವಲ್ ಭಾರತಕ್ಕೆ ಬರಬಹುದು ಎಂದು ವರದಿಯಾಗಿತ್ತು. ಮತ್ತೊಂದೆಡೆ, ವಾಪಸಾಗುವಂತೆ ಕುಟುಂಬಸ್ಥರಿಂದ ಪ್ರಜ್ವಲ್ಗೆ ಒತ್ತಡ ಹೆಚ್ಚಾಗಿದೆ ಎಂದೂ ಇತ್ತೀಚೆಗೆ ವರದಿಯಾಗಿತ್ತು.
![](https://ainlivenews.com/wp-content/uploads/2024/01/Ad-Banner-copy-scaled.jpg)