ಬಿಸಿಲಿನಲ್ಲಿ ನಮ್ಮ ಆರೋಗ್ಯವನ್ನು ಸಮತೋಲನವಾಗಿ ಕಾಪಾಡಿಕೊಳ್ಳಬೇಕು ಎಂದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಬೇಕು. ಕೆಲವೊಂದು ಡ್ರೈ ಫ್ರೂಟ್ಸ್ ನಿಂದ ದೂರ ಇರಬೇಕೆಂಬುದು ಆರೋಗ್ಯ ತಜ್ಞರ ಸಲಹೆ.
Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ!
ಬೇಸಿಗೆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ ಈ ಕೆಳಗಿನ ಡ್ರೈ ಫ್ರೂಟ್ಸ್ ಗಳನ್ನು ಬೇಸಿಗೆ ಕಳೆಯುವವರೆಗೆ ತಿನ್ನದೇ ಇರುವುದು ಉತ್ತಮ.
ಖರ್ಜೂರ ತಿನ್ನಲು ಬಹಳ ಸಿಹಿಯಾಗಿರುತ್ತದೆ. ಅಂದರೆ ಇದರಲ್ಲಿ ನೈಸರ್ಗಿಕವಾಗಿ ಮೊದಲೇ ಸಿಹಿ ಪ್ರಮಾಣ ತುಂಬಿರುತ್ತದೆ.
ಬೇಸಿಗೆಯಲ್ಲಿ ಬಿಸಿಲಿನ ತಾಪ ಜೋರಾಗಿರುವುದರಿಂದ ಸುತ್ತಲಿನ ವಾತಾವರಣ ನಮ್ಮ ದೇಹಕ್ಕೆ ಹೆಚ್ಚಿನ ತಾಪಮಾನ ನೀಡುತ್ತದೆ. ಈ ರೀತಿ ಇರುವ ಸಂದರ್ಭದಲ್ಲಿ ಖರ್ಜೂರ ಸೇವನೆ ಮಾಡಿದರೆ ಅದರಿಂದ ನಮ್ಮ ದೇಹದ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ
ಬಾದಾಮಿ ಬೀಜಗಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಹೇರಳವಾಗಿದೆ. ನಮ್ಮ ದೇಹದ ತಾಪಮಾನವನ್ನು ಹೆಚ್ಚಿಸುವ ಗುಣ ಕೂಡ ಇವುಗಳಲ್ಲಿ ಕಂಡು ಬರುತ್ತದೆ. ಬಾದಾಮಿ ಬೀಜಗಳನ್ನು ಬೇಸಿಗೆ ದಿನಗಳಲ್ಲಿ ಮಿತಿ ಯಾಗಿ ತಿಂದರೆ ಒಳ್ಳೆಯದು. ಸೂಕ್ಷ್ಮ ಆರೋಗ್ಯ ಇರುವವರು ಇವುಗಳಿಂದ ದೂರವಿರಿ.
ಹೆಚ್ಚಿನ ಕೊಬ್ಬಿನ ಅಂಶ ಇರುವ ಗೋಡಂಬಿ ಬೀಜಗಳು ಆರೋಗ್ಯಕ್ಕೆ ಒಂದು ರೀತಿಯ ಸಮತೋಲನದ ಪೌಷ್ಟಿಕಾಂಶಗಳನ್ನು ಕೊಡುತ್ತದೆ. ಆದರೂ ಕೂಡ ಇವುಗಳನ್ನು ಹೆಚ್ಚಾಗಿ ತಿಂದರೆ ದೇಹದ ತಾಪಮಾನ ಹೆಚ್ಚುತ್ತದೆ. ದೇಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಒಮೆಗಾ 3 ಫ್ಯಾಟಿ ಆಮ್ಲಗಳನ್ನು ಹೆಚ್ಚಾಗಿ ಒಳಗೊಂಡಿರುವ ವಾಲ್ನಟ್ ಬೀಜಗಳು ನಮ್ಮ ದೇಹದ ತಾಪಮಾನವನ್ನು ಹೆಚ್ಚಿಸುವ ಗುಣವನ್ನು ಪಡೆದಿವೆ. ವಾಲ್ನಟ್ ಬೀಜಗಳನ್ನು ಸಹ ಬೇಸಿಗೆಯಲ್ಲಿ ಮಿತವಾಗಿ ಸೇವಿಸ ಬೇಕು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು
ತಿನ್ನಲು ಪಿಸ್ತಾ ಬೀಜಗಳು ಬಹಳ ಚೆನ್ನಾಗಿರುತ್ತವೆ. ಆದರೆ ಬೇಸಿಗೆ ದಿನ ಗಳಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇರುವವರು ಇವುಗಳಿಂದ ದೂರ ಇದ್ದರೆ ವಾಸಿ. ಏಕೆಂದರೆ ಪಿಸ್ತಾ ಬೀಜಗಳು ಸ್ವಲ್ಪ ಹೊತ್ತು ಕಳೆದ ನಂತರ ದೇಹದಲ್ಲಿ ಉಷ್ಣ ಪ್ರಭಾವವನ್ನು ಉಂಟು ಮಾಡುತ್ತವೆ.
ವಿವಿಧ ಸಿಹಿ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವ ಒಣ ದ್ರಾಕ್ಷಿ ನಮ್ಮ ದೇಹದ ತಾಪಮಾನವನ್ನು ಹೆಚ್ಚಿಸುವ ಗುಣವನ್ನು ಹೊಂದಿವೆ. ಹೀಗಾಗಿ ತಂಪಾದ ಆಹಾರ ಪದಾರ್ಥಗಳಲ್ಲಿ ಒಣದ್ರಾಕ್ಷಿಯನ್ನು ಬಳಸಬಹುದು ಆದರೆ ಬೇಸಿಗೆಯಲ್ಲಿ ಹಾಗೆ ತಿನ್ನಬಾರದು ಎನ್ನುತ್ತಾರೆ.