ಸಧ್ಯ ಈ ಬಾರಿ ಬಿಸಿಲಿನ ಝಳ ಜಾಸ್ತಿ ಇದೆ. ಮನೆಯ ಒಳಗೆ ಇಟ್ಟ ಪಾತ್ರೆಯೂ ಕೂಡ ಬಿಸಿಲಿನ ತಾಪಕ್ಕೆ ತಣ್ಣಗಿರೋ ನೀರು ಬಿಸಿ ಆಗುತ್ತೆ. ಇತ್ತೀಚೆಗೆ ಸ್ನಾನಕ್ಕೂ ಯಾರು ನೀರು ಕಾಯಿಸಿಲ್ಲ. ಮನೆಯ ಮೇಲಿರೋ ಟ್ಯಾಂಕ್ ನೀರು ಬಿಸಿಲಿನ ಪ್ರಖರತೆ ಬಿಸಿಯಾಗಿರುತ್ತದೆ. ಆದ್ರೆ ಮನೆಯ ಮೇಲಿರುವ ಟ್ಯಾಂಕರ್ ನೀರನ್ನು ಕೂಲ್ ಆಗಿ ಇರಿಸಬಹುದು. ಅದು ಹೇಗೆ ಗೊತ್ತಾ?
ಚಾಮರಾಜನಗರ: ಜಾನಪದ ತವರೂರಿನಲ್ಲಿ ಕಣ್ಮನ ಸೆಳೆದ ಸಾಂಪ್ರಾದಾಯಿಕ ಮತಗಟ್ಟೆ!
ಬೆಳಗಿನ ಜಾವ ನೀರು ಸಾಮನ್ಯ ಸ್ಥಿತಿಯಲ್ಲಿರುತ್ತದೆ. ಮಧ್ಯಾಹ್ನ ಆಗುತ್ತಿದ್ದಂತೆ ಟ್ಯಾಂಕರ್ ನಲ್ಲಿರೋ ನೀರು ಕಾಯಲು ಶುರುವಾಗುತ್ತದೆ. ಬೇಸಿಗೆಗಾಲದಲ್ಲಿ ಉಂಟಾಗುವ ಈ ಸಮಸ್ಯೆಗೆ ಪರಿಹಾರವೊಂದಿದೆ. ಈ ಟಿಪ್ ಫಾಲೋ ಮಾಡಿದ್ರೆ ಟ್ಯಾಂಕ್ ನೀರು ಕೂಲ್ ಕೂಲ್ ಆಗಿರುತ್ತದೆ. ಕೆಲವು ವಿಧಾನಗಳನ್ನು ಅಳವಡಿಸಿಕೊಂಡರೆ, ಬಿಸಿಲು ಎಷ್ಟೇ ಪ್ರಖರವಾಗಿದ್ದರೂ, ನಿಮ್ಮ ಮನೆಯ ನಲ್ಲಿಯಿಂದ ತಣ್ಣೀರು ಸಿಗುತ್ತದೆ.
ತೊಟ್ಟಿಯನ್ನು ಮುಚ್ಚಿ: ಸೂರ್ಯನ ಬೆಳಕು ತೊಟ್ಟಿಯಲ್ಲಿನ ನೀರನ್ನು ಬಿಸಿ ಮಾಡುತ್ತದೆ. ಹಾಗಾಗಿ ಸೂರ್ಯನ ಬೆಳಕು ನೇರವಾಗಿ ಟ್ಯಾಂಕ್ಗೆ ತಾಗದಂತೆ ನೋಡಿಕೊಳ್ಳಿ. ಟ್ಯಾಂಕ್ ಮೇಲಿನ ತೊಟ್ಟಿಯನ್ನು ಯಾವಾಗಲು ಮುಚ್ಚಬೇಕು. ಇದರಿಂದ ನೀರು ಅತಿಯಾಗಿ ಬಿಸಿಯಾಗಲ್ಲ.
ದಪ್ಪ ಬಟ್ಟೆ ಅಥವಾ ಟ್ಯಾಂಕ್ ಕವರ್ನ್ನು ನಿಮ್ಮ ತೊಟ್ಟಿಯ ಸುತ್ತ ಸುತ್ತಬೇಕು. ಇದು ಸೂರ್ಯನ ಬೆಳಕನ್ನು ತಡೆಯುತ್ತದೆ. ಹೀಗೆ ಮಾಡೋದರಿಂದ ದೀರ್ಘಕಾಲದವರೆಗೆ ನೀರನ್ನು ತಂಪಾಗಿಸಿರಬಹುದು
ತೊಟ್ಟಿ ಅಥವಾ ಟ್ಯಾಂಕ್ ಹೊರಭಾಗಕ್ಕೆ ಸುಣ್ಣ ಅಥವಾ ಜೇಡಿಮಣ್ಣಿನ ಕೆಸರು ಹಚ್ಚಬೇಕು. ತೊಟ್ಟಿಯ ಈ ಕವರ್ ನೇರ ಸೂರ್ಯನ ಬೆಳಕನ್ನು ಪ್ರವೇಶಿಸಲು ಬಿಡಲ್ಲ. ಹೀಗೆ ಮಾಡೋದರಿಂದ ಇದು ನೀರನ್ನು ತಂಪಾಗಿರಿಸುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕರು ಮನೆಗಳ ಮೇಲಿನ ಟ್ಯಾಂಕ್ಗೆ ಸುಣ್ಣ ಬಳೆಯುತ್ತಾರೆ. ತೊಟ್ಟಿಯನ್ನು ಮಣ್ಣಿನಿಂದ ಮುಚ್ಚಿದ್ರೆ ಅದು ನೀರನ್ನು ತಂಪಾಗಿಸುತ್ತದೆ. ಸ್ವಯಂಚಾಲಿತವಾಗಿ ನೀರನ್ನು ಸ್ವಲ್ಪ ತಂಪಾಗಿಸುತ್ತದೆ.
ಬೇಸಿಗೆಯಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಸೂಚಿಸಲಾಗುತ್ತದೆ. ಏಕೆಂದರೆ ಬಿಳಿ ಬಣ್ಣವು ಸೂರ್ಯನ ಬೆಳಕನ್ನು ಹೀರಿಕೊಳ್ಳುವುದಿಲ್ಲ. ನೀರನ್ನು ನಿಖರವಾಗಿ ಇದೇ ರೀತಿಯಲ್ಲಿ ತಣ್ಣಗಾಗಿಸಬಹುದು. ಬಿಳಿ ಬಣ್ಣ ಸೂರ್ಯನ ಪ್ರಖರತೆಯನ್ನು ತಡೆಯುವ ಸಾಮಾರ್ಥ್ಯ ಹೊಂದಿದೆ
ಟ್ಯಾಂಕ್ ಅನ್ನು ಬಿಳಿ ಬಣ್ಣ ಮಾಡಿ. ಬಿಳಿ ಬಣ್ಣವನ್ನು ಅನ್ವಯಿಸಿದರೆ, ನೇರ ಸೂರ್ಯನ ಬೆಳಕು ಟ್ಯಾಂಕ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ. ಜೊತೆಗೆ ಬಿಳಿ ಬಣ್ಣದಿಂದಾಗಿ, ಶಾಖವು ತುಂಬಾ ಕಡಿಮೆ ಇರುತ್ತದೆ. ಟ್ಯಾಂಕ್ ಮೇಲೆ ಸಣ್ಣದಾದ ಛಾವಣಿಯನ್ನು ಸಹ ಕೆಲವರು ನಿರ್ಮಿಸುತ್ತಾರೆ. ಈ ಮೂಲಕವೂ ಟ್ಯಾಂಕ್ ನೀರನ್ನು ತಂಪಾಗಿಸಬಹುದು.