ಇತ್ತೀಚಿನ ದಿನಗಳಲ್ಲಿ ತೂಕ ಇಳಿಸೋದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಕೆಲವರು ತೆಳ್ಳಗಾಗಲು ಜಿಮ್ ಮೊರೆ ಹೋದರೆ ಒಂದಿಷ್ಟು ಮಂದಿ ಊಟವನ್ನೇ ಕಡಿಮೆ ಮಾಡುತ್ತಾರೆ. ಆದರೆ ಅನೇಕ ಪ್ರಯತ್ನಗಳ ನಡುವೆಯೂ ತೂಕ ಮಾತ್ರ ಕಡಿಮೆಯಾಗಲ್ಲ. ಅಚ್ಚರಿ ಎಂಬಂತೆ ಕೆಲವರು ಬೇಗವೇ ತೂಕ ಇಳಿಸಿಕೊಳ್ಳುವದನ್ನು ನೋಡಿರುತ್ತೇವೆ. ಅದು ಹೇಗೆ ಸಾಧ್ಯ ಎಂದು ಎಲ್ಲರಲ್ಲಿಯೂ ಕಾಡುತ್ತಿರುತ್ತದೆ. ಹಾಗಿದ್ರೆ ಬನ್ನಿ ಇಂದಿನ ಸಂಚಿಕೆಯಲ್ಲಿ ಆರೋಗ್ಯಯುತವಾಗಿ ತೂಕ ಇಳಿಸುವುದು ಹೇಗೆ!?,, ದೇಹದ ತೂಕ ಇಳಿಸುವ ರಹಸ್ಯ ತಿಳಿಯೋಣ ಬನ್ನಿ…
Bhavani Revanna: ಜೈಲಿನಲ್ಲಿರುವ ಇಬ್ಬರು ಮಕ್ಕಳನ್ನು ನೋಡಲು ಬಂದ ಭವಾನಿ ರೇವಣ್ಣ!
ಬಹುತೇಕ ಎಲ್ಲಾ ತಜ್ಞರು ವಾಕಿಂಗ್ ಮಾಡುವುದರಿಂದ ತೂಕ ಕಡಿಮೆಯಾಗುತ್ತೆ ಮತ್ತು ಆರೋಗ್ಯ ಸುಧಾರಿಸುತ್ತದೆ ಎಂದು ಹೇಳುತ್ತಾರೆ. ಆದರೆ ದಿನಕ್ಕೆ ಎಷ್ಟು ದೂರ ನಡೆಯಬೇಕು? ಯಾವಾಗ ನಡೆಯಬೇಕು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿರುತ್ತದೆ. ಇಂದು ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
ಒಬ್ಬ ವ್ಯಕ್ತಿಯು 10 ಕೆಜಿ ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ಪ್ರತಿದಿನ ಎಷ್ಟು ದೂರ ವಾಕಿಂಗ್ ಮಾಡಬೇಕು ? ನಿಮ್ಮ ಮನಸ್ಸಿನಲ್ಲಿ ಈ ಪ್ರಶ್ನೆ ಇದ್ದರೆ, ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಉತ್ತರ ನಿಮಗೆ ಸಿಗಲಿದೆ.. 100 ಕ್ಯಾಲೋರಿ ಬರ್ನ್ ಮಾಡಲು 2 ಕಿಲೋಮೀಟರ್ ನಡೆಯಬೇಕು. ವಾಸ್ತವವಾಗಿ ತೂಕವನ್ನು ಕಳೆದುಕೊಳ್ಳಲು ದಿನಕ್ಕೆ ಇಷ್ಟು ಕಿಲೋಮೀಟರ್ ನಡೆಯಬೇಕು ಎಂಬ ಯಾವುದೇ ನಿಯಮ ಇಲ್ಲ. ತೂಕ ನಷ್ಟಕ್ಕೆ ಪ್ರತಿದಿನ ಎಷ್ಟು ಗಂಟೆ ನಡೆಯಬೇಕು ಎಂಬುದರು ವಿಭಿನ್ನ ಅಭಿಪ್ರಾಯಗಳನ್ನು ನೀವು ಕೇಳಿರಬಹುದು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, 1-ಮೈಲಿ ಅಥವಾ 1.6 ಕಿಲೋಮೀಟರ್ ನಡೆಯುವುದರಿಂದ 55 ರಿಂದ 140 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು
ತೂಕ ಇಳಿಸಲು ಬ್ರಿಟಿಷ್ ರಾಷ್ಟ್ರೀಯ ಆರೋಗ್ಯ ಸೇವೆಯು ದಿನಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ನಡಿಗೆಯನ್ನು ಶಿಫಾರಸು ಮಾಡುತ್ತದೆ. ನೀವು ಚುರುಕಾಗಿ ಅಂದ್ರೆ ವೇಗವಾಗಿ ವ್ಯಾಯಾಮ ಮಾಡುತ್ತಾ ನಡೆದರೆ 75 ನಿಮಿಷಗಳ ವಾಕ್ ಮಾಡಬಹುದು. ಇದು ನಿಮ್ಮ ನಡಿಗೆಯ ವೇಗವನ್ನು ನಿರ್ಧರಿಸುತ್ತದೆ. ಇತ್ತೀಚೆಗೆ ದಿನಕ್ಕೆ 10,000 ಹೆಜ್ಜೆ ನಡೆದ್ರೂ ಸಾಕು ಎಂದು ಹೇಳುತ್ತಾರೆ. ಒಂದು ಕಿಲೋ ಮೀಟರ್ ನಡೆದ್ರೆ ಎಷ್ಟು ತೂಕ ಇಳಿಕೆಯಾಗುತ್ತೆ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ.
ವಾಕಿಂಗ್ ಮೂಲಕವೇ ಕೆಲವರು ಒಂದು ತಿಂಗಳಲ್ಲಿ 10 ಕೆಜಿ ತೂಕವನ್ನು ಕಳೆದುಕೊಳ್ಳಬಹುದು, ಆದರೆ ಕೆಲವರು 10 ಕೆಜಿ ತೂಕವನ್ನು ಕಳೆದುಕೊಳ್ಳಲು 2 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅದು ಅವರ ನಡಿಗೆಯನ್ನು ಅವಲಂಬಿಸಿರುತ್ತದೆ. ಎಷ್ಟು ತೂಕವನ್ನು ಕಳೆದುಕೊಳ್ಳುತ್ತದೆ ಎಂಬುದಕ್ಕೆ ಅನೇಕ ಅಂಶಗಳು ಕಾರಣವಾಗಿವೆ.
ಕೇವಲ ವಾಕಿಂಗ್ನಿಂದ ತೂಕ ಇಳಿಕೆಯಾಗಲ್ಲ ಎಂಬ ಮಾತೂ ಸಹ ಇದೆ. ವಾಕಿಂಗ್ ಜೊತೆಯಲ್ಲಿ ಆಹಾರದ ಮೇಲೆ ನಿಯಂತ್ರಣ ಇರಬೇಕು. ಅನಾರೋಗ್ಯಕರ ಆಹಾರದಿಂದ ದೂರ ಇರಬೇಕು. ಇಷ್ಟು ಮಾತ್ರವಲ್ಲದೇ ತೂಕ ನಷ್ಟಕ್ಕೆ ಸಾಕಷ್ಟು ನಿದ್ರೆ ಮತ್ತು ಒತ್ತಡವಿಲ್ಲದ ಜೀವನವೂ ಮುಖ್ಯವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ
ವ್ಯಾಯಾಮ, ಉಪವಾಸ, ಆಹಾರ ಪಥ್ಯ ಇತ್ಯಾದಿಗಳನ್ನು ಮಾಡಿದರೂ ಬೊಜ್ಜು ಕಡಿಮೆ ಆಗದೆ ಇದ್ದರೆ ಆಗ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡಿದರೆ ಅದು ತುಂಬಾ ಒಳ್ಳೆಯದು.
ಸಾಮಾನ್ಯವಾಗಿ ನಾವು ಅಡುಗೆಗೆ ಬಳಕೆ ಮಾಡುವಂತಹ ಸಾಂಬಾರ ಪದಾರ್ಥಗಳಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ ಮತ್ತು ಇದು ತೂಕ ಇಳಿಸಲು ಕೂಡ ಸಹಕಾರಿ. ಇಂತಹ ಒಂದು ಪ್ರಮುಖ ಸಾಂಬಾರ ಪದಾರ್ಥವೆಂದರೆ ಅದು ಜೀರಿಗೆ.
ಜೀರಿಗೆಯನ್ನು ಹಲವಾರು ವಿಧದಿಂದ ಭಾರತೀಯರು ತಮ್ಮ ಅಡುಗೆಯಲ್ಲಿ ಬಳಕೆ ಮಾಡುವರು. ಇದು ಜೀರ್ಣಕ್ರಿಯೆ ಸುಧಾರಿಸುವುದು, ಮಲಬದ್ಧತೆ ಕಡಿಮೆ ಮಾಡುವುದು, ಇನ್ಸುಲಿನ್ ಪ್ರತಿರೋಧಕ ಸಮಸ್ಯೆ ತಡೆಯುವುದು. ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಇದು ತುಂಬಾ ಸಹಕಾರಿ.
ಕೆಲವು ಗಂಟೆಗಳ ಕಾಲ ಜೀರಿಗೆಯನ್ನು ನೆನೆಸಿದ ಬಳಿಕ ಅದನ್ನು ಸೇವನೆ ಮಾಡಬೇಕು. ನೀರಿನಲ್ಲಿ ಜೀರಿಗೆ ನೆನೆಸಿದ ವೇಳೆ ಅದು ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಬಿಡುಗಡೆ ಮಾಡುವುದು. ಹೀಗಾಗಿ ನೀರು ಹಳದಿ ಬಣ್ಣಕ್ಕೆ ತಿರುವುದು. ತೂಕ ಇಳಿಸಬೇಕಿದ್ದರೆ ಆಗ ನೀವು ಇದನ್ನು ಬಳಸಿದರೆ ಉತ್ತಮ. ಆಯುರ್ವೇದದಲ್ಲಿ ಕೂಡ ಜೀರಿಗೆಯನ್ನು ಹಲವಾರು ಔಷಧಿಗಳಿಗೆ ಬಳಕೆ ಮಾಡಿಕೊಂಡು ಬರಲಾಗಿದೆ. ಜೀರಿಗೆ ನೀರು ಹಲವಾರು ವಿಧದಿಂದ ದೇಹಕ್ಕೆ ಒಳ್ಳೆಯದು. ಇದು ಆರೋಗ್ಯಕಾರಿ ಕೂಡ.
ಪುರುಷರ ಮತ್ತು ಮಹಿಳೆರಲ್ಲಿ ಪ್ರತಿಯೊಬ್ಬರ ತೂಕವು ವೇಗವಾಗಿ ಹೆಚ್ಚುತ್ತಿದೆ. ವಾಸ್ತವವಾಗಿ, ನಮ್ಮ ಜೀವನಶೈಲಿ ಆರಾಮದ ಕಡೆಗೆ ಹೆಚ್ಚು ಒಲವು ತೋರಲು ಆರಂಭಿಸಿದೆ. ಅದೇ ಸಮಯದಲ್ಲಿ, ನಮ್ಮ ಆಹಾರವು ತುಂಬಾ ಅನಾರೋಗ್ಯಕರವಾಗಿದೆ. ಈ ಎರಡೂ ಕಾರಣಗಳಿಂದ ಬೊಜ್ಜು ಅಥವಾ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಆರಂಭವಾಗುತ್ತದೆ. ಆದರೆ ಕೆಲವು ಮಸಾಲೆಗಳನ್ನು ಸೇವಿಸುವುದರಿಂದ ಸ್ಥೂಲಕಾಯ ಹೆಚ್ಚಾಗುವುದಿಲ್ಲ ಮತ್ತು ತೂಕ ಇಳಿಕೆ ವೇಗವಾಗಿ ಪ್ರಾರಂಭವಾಗುತ್ತದೆ.
ಇನ್ನೂ ಭಾರತದ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ಕೇವಲ ಆಹಾರದ ರುಚಿ ಹೆಚ್ಚಿಸುವುದಿಲ್ಲ. ಸಾಕಷ್ಟು ಔಷಧಿ ಗುಣವನ್ನು ಹೊಂದಿರುತ್ತವೆ. ನಿಮ್ಮ ತೂಕ ಇಳಿಕೆಗೂ ಅವು ನೆರವಾಗುತ್ತವೆ. ಖಾರದ ಅಡುಗೆಯಲ್ಲಿ ಇದು ಇರಲೇಬೇಕು. ಇದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಚಯಾಪಯಶಕ್ತಿ ಬಲ ಪಡೆಯುತ್ತದೆ. ನಿಮ್ಮ ದೇಹದ 100 ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ. ನಿಮ್ಮ ಹಸಿವನ್ನು ಇದು ಕಡಿಮೆ ಮಾಡುತ್ತದೆ. ದೇಹದ ಕೊಬ್ಬು ಇದ್ರಿಂದ ಕರಗುತ್ತದೆ.
ಜೀರಿಗೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುತ್ತದೆ. ಇದ್ರಲ್ಲಿ ಸಾಕಷ್ಟು ಔಷಧಿ ಗುಣವಿದೆ. ಜೀರಿಗೆ ತೂಕ ಇಳಿಸಿಕೊಳ್ಳಲು ಸಹಕಾರಿ. ಪ್ರತಿದಿನ ಬೆಳಿಗ್ಗೆ ಜೀರಿಗೆ ನೀರು ಸೇವನೆ ಮಾಡಿದ್ರೆ ತೂಕ ವೇಗವಾಗಿ ಇಳಿಯುತ್ತದೆ.
ಶುಂಠಿ ಕೂಡ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದ್ರಲ್ಲೂ ಔಷಧಿ ಗುಣವಿದೆ. ಹಸಿವನ್ನು ಕಡಿಮೆ ಮಾಡುತ್ತದೆ. ಚಯಾಪಚಯವನ್ನು ಸುಲಭಗೊಳಿಸುತ್ತದೆ. ದೇಹದಲ್ಲಿರುವ ಕೊಬ್ಬನ್ನು ಕರಗಿಸುವ ಕೆಲಸ ಮಾಡುತ್ತದೆ.
ಕರಿಮೆಣಸು ಕೊಬ್ಬು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೊಬ್ಬಿನ ಕೋಶಗಳು ರೂಪುಗೊಳ್ಳದಂತೆ ತಡೆಯುತ್ತದೆ. ಕರಿಮೆಣಸು ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ.
ಅರಿಶಿನ ರುಚಿ ಮತ್ತು ಬಣ್ಣಕ್ಕೆ ಪ್ರಸಿದ್ಧಿ ಪಡೆದಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಆಹಾರದಲ್ಲಿ ಅರಿಶಿನ ಬಳಕೆ ಹೆಚ್ಚು ಮಾಡಿ. ಹಾಲಿಗೆ ಹಾಕಿ ಇಲ್ಲವೆ ನೀರಿಗೆ ಹಾಕಿ ಅರಿಶಿನವನ್ನು ಸೇವಿಸಬಹುದು.
ಚಯಾಪಚಯ ಶಕ್ತಿಯನ್ನು ಬಲಪಡಿಸುವ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವ ಕೆಲಸವನ್ನು ದಾಲ್ಚಿನಿ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸಿದರೆ ಆಹಾರದಲ್ಲಿ ದಾಲ್ಚಿನ್ನಿ ಬಳಸಿ. ಚಹಾಕ್ಕೆ ದಾಲ್ಚಿನಿ ಹಾಕಿ ಸೇವನೆ ಮಾಡಬಹುದು.
ಒಟ್ಟಾರೆ ತೂಕ ಇಳಿಕೆ ಒಂದೆರಡು ದಿನದಲ್ಲಿ ಮಾಡಿ ಮುಗಿಸುವ ಕೆಲಸವಲ್ಲ, ಅದಕ್ಕಾಗಿ ದೀರ್ಘಕಾಲದ ಶ್ರಮ ಮತ್ತು ತಾಳ್ಮೆ ಹಾಗೂ ಡಯಟ್, ವರ್ಕೌಟ್ ಮಾಡುವುದು ಮುಖ್ಯವಾಗುತ್ತೆ.
ಅನಾರೋಗ್ಯಕರ ಆಹಾರದಿಂದಾಗಿ, ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿದೆ. ಗ್ಯಾಸ್ಟ್ರಿಕ್ ಅನೇಕ ಹೊಸ ಅನಾರೋಗ್ಯ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು, ಖಾಲಿ ಹೊಟ್ಟೆಯಲ್ಲಿ ಅಜ್ವೈನದ ನೀರು ಸೇವನೆ ಮಾಡಬೇಕು. ಕೆಲವೇ ದಿನಗಳಲ್ಲಿ ಪರಿಣಾಮ ಕಾಣಿಸುತ್ತದೆ.
ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ ತುಂಬಿದೆ. ಇದರ ನೀರು, ತೂಕ ನಿಯಂತ್ರಣಕ್ಕೆ ಸಹಕಾರಿ. ಅಜ್ವೈನ್ ಪ್ರೋಟೀನ್, ಕೊಬ್ಬು, ಖನಿಜ, ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಗಳಿಂದ ಕೂಡಿದೆ. ಕ್ಯಾಲ್ಸಿಯಂ, ರಿಬೋಫ್ಲಾವಿನ್, ಫಾಸ್ಪರಸ್, ಕಬ್ಬಿಣ ಮತ್ತು ನಿಯಾಸಿನ್ ಕಂಡುಬರುತ್ತದೆ.
ಖಾಲಿ ಹೊಟ್ಟೆಯಲ್ಲಿ ಅಜ್ವೈನದ ನೀರು ಸೇವನೆ ಮಾಡುವುದ್ರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬೆಳಿಗ್ಗೆ ಅಜ್ವೈನದ ನೀರು ಸೇವನೆ ಮಾಡುವುದ್ರಿಂದ ಬೇಗ ತೂಕ ಇಳಿಸಬಹುದು. ಇನ್ನೂ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಅನುಭವಿಸುವ ಮಹಿಳೆಯರು ಅಜ್ವೈನದ ನೀರು ಕುಡಿಯಬಹುದು. ಮುಟ್ಟಿನ ನೋವು ನಿವಾರಿಸುವ ಶಕ್ತಿ ಅಜ್ವೈನದ ನೀರಿಗಿದೆ.
ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರುಮಾಡಿದೆ. ಇದಕ್ಕೆಲ್ಲಾ ಜಡ ಜೀವನಶೈಲಿ ಹಾಗೂ ನಾವು ಅನುಸರಿಸುತ್ತಿ ರುವ ಅನಾರೋಗ್ಯಕರ ಆಹಾರ ಪದ್ಧತಿ ಎಂದು ನೇರ ಕಾರಣ ಎಂದು ಹೇಳಬಹುದು. ಆದರೆ ಕೆಲವೊಮ್ಮೆ ಮನೆಯಲ್ಲೇ ಮಾಡಿದ, ಆಹಾರ ಪದಾರ್ಥ ಗಳನ್ನು ಸೇವಿಸಿದರೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಆಗಿಬಿಡುತ್ತದೆ.
ಉದಾಹರಣೆಗೆ ಹೇಳುವುದಾದರೆ, ಕೆಲವರಿಗೆ ಆಲೂಗಡ್ಡೆ ಹಾಕಿ ಮಾಡಿರುವ, ಸಾಂಬರ್ ಸೇವಿಸಿದರೆ ಸಾಕು, ಆಮೇಲೆ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ, ಆಮೇಲೆ ಒಂದು ತುತ್ತು, ಊಟ ಮಾಡಲೂ ಆಗದೇ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನು ಕೆಲವರಿಗೆ, ಅನ್ನದ ಜೊತೆಗೆ ಬೇಳೆಸಾರು, ಸೇವಿಸಿದರೂ ಸಾಕು ಗ್ಯಾಸ್ಟ್ರಿಕ್ ಆಗಿಬಿಡುತ್ತದೆ! ಹೀಗಾಗಿ ಈ ಸಮಯದಲ್ಲಿ ಯಾವುದನ್ನು ತಿನ್ನಬೇಕು ಯಾವುದನ್ನು ಬಿಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ, ಮೆಡಿಕಲ್ನಿಂದ ಮಾತ್ರೆ ತಂದು ನುಂಗುವುದು, ನೀರಿಗೆ ಮಿಕ್ಸ್ ಮಾಡುವ ಪೌಡರ್ ತಂದು ಕುಡಿಯುವ ಅಭ್ಯಾಸ ಮಾಡಿಕೊಳ್ಳ ಬೇಡಿ. ವೈದ್ಯರು ಕೂಡ ಇದನ್ನೇ ಸಲಹೆ ನೀಡುತ್ತಾರೆ. ಇದಕ್ಕಾಗಿ ನಮ್ಮ ದೈನಂದಿನ ಜೀವನಶೈಲಿಯಲ್ಲಿ ನಾವೇ ಕೆಲವೊಂ ದು ಬದಲಾವಣೆಗಳನ್ನು ತಂದುಕೊಂಡು, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು. ಮಧುಮೇಹ, ರಕ್ತದೊತ್ತಡ, ಕಣ್ಣಿನ ಸಮಸ್ಯೆ, ಕಿಡ್ನಿ ಸಮಸ್ಯೆ ಇದ್ದವರು ಎಲೆಕೋಸನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದರೆ ಪದೇ ಪದೇ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ಅಸಿಡಿಟಿ ಸಮಸ್ಯೆ, ಹೊಟ್ಟೆಯ ಸ್ನಾಯು ಸೆಳೆತ ಇತ್ಯಾದಿ ಸಮಸ್ಯೆಗಳು ಇದ್ದವರು ಆದಷ್ಟು ಈ ತರಕಾರಿಯಿಂದ ದೂರವಿದ್ದರೆ ಒಳ್ಳೆಯದು. ಯಾಕೆಂದ್ರೆ ಎಲೆಕೋಸು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನ ಗೊಳಿಸುವುದರಿಂದ, ಕೆಲವರಿಗೆ ಬಹಳ ಬೇಗನೇ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ನಂತಹ ಸಮಸ್ಯೆ, ಕಂಡು ಬರುವ ಸಾಧ್ಯತೆ ಇರುತ್ತದೆ.
ಸಕ್ಕರೆಕಾಯಿಲೆ, ಹೃದಯದ ಸಮಸ್ಯೆ, ಮೂಳೆಗಳಿಗೆ ಸಂಬಂಧ ಪಟ್ಟ ಸಮಸ್ಯೆ ಇದ್ದವರಿಗೆ ಇದ್ದವರಿಗೆ, ಮೆದು ಳಿನ ಆರೋಗ್ಯಕ್ಕೆ, ಆಲೂಗಡ್ಡೆ ಬಹಳ ಒಳ್ಳೆಯ ತರಕಾರಿ ಎಂದು ಹೇಳಲಾಗುತ್ತದೆ. ಪ್ರಮುಖವಾಗಿ ಈ ತರಕಾರಿ ಯಲ್ಲಿ ನಾರಿನಾಂಶ, ಪೊಟ್ಯಾ ಷಿಯಂ, ಮೆಗ್ನೀಸಿಯಮ್, ವಿವಿಧ ಬಗೆಯ ವಿಟಮಿನ್ಸ್ ಅಂಶಗಳು, ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ಇಂತಹ ದೀರ್ಘಕಾಲದ ಕಾಯಿಲೆಗಳನ್ನು, ನಮ್ಮಿಂದ ದೂರವಿರಿಸಲು ನೆರವಾಗುತ್ತದೆ. ಆದರೆ ಪದೇ ಪದೇ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲು ತ್ತಿರುವವರು, ಆದಷ್ಟು ಈ ತರಕಾರಿಯಿಂದ ದೂರವಿರ ಬೇಕು. ಯಾಕೆಂದ್ರೆ ಈ ತರಕಾರಿಯಲ್ಲಿ, ಪಿಷ್ಠದ ಪ್ರಮಾಣ ಯಥೇ ಚ್ಛವಾಗಿ ಕಂಡು ಬರುವುದರಿಂದ, ಇವು ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೀರಿನಾಂಶವನ್ನು ಒಳ ಗೊಂಡಿರುವ ಸೌತೆಕಾಯಿ, ದೇಹಕ್ಕೆ ತಂಪನ್ನು ಒದಗಿಸಿ, ನಿರ್ಜಲೀಕರಣ ಸಮಸ್ಯೆಯಿಂದ ದೂರ ಮಾಡುತ್ತದೆ.
ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ಊಟ ಆದ ಮೇಲೆ, ಒಂದೆರಡು ಸಣ್ಣ ಪೀಸ್ ಸೌತೆಕಾಯಿ ತಿನ್ನುವುದು ಅಥವಾ ಊಟಕ್ಕೆ ಮುಂಚೆ ಖಾಲಿ ಹೊಟ್ಟೆಯಲ್ಲಿ ಸೌತೆ ಕಾಯಿ ಜ್ಯೂಸ್ ಸೇವನೆ ಮಾಡುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಆದರೆ ನಿಮಗೆ ಗೊತ್ತಿರಲಿ, ರಾತ್ರಿ ಊಟದ ಬಳಿಕ ಸೌತೆ ಕಾಯಿ ಸೇವನೆ ಮಾಡಿದರೆ, ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನಗೊಂಡು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರುವ ಸಾಧ್ಯತೆ ಕಂಡು ಬರುವ ಸಾಧ್ಯತೆ ಇರುತ್ತದೆಯಂತೆ!
ಯಾಕೆಂದ್ರೆ ಮೊದಲೇ ಹೇಳಿದ ಹಾಗೆ ಈ ತರಕಾರಿಯಲ್ಲಿ ಕಂಡು ಬರುವ ನೀರಿನಾಂಶ ಹಾಗೂ ನಾರಿನಾಂಶವು ಜೀರ್ಣಕ್ರಿಯೆನ್ನು ನಿಧಾನವಾಗಿಸಿ, ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುತ್ತದೆಯಂತೆ.
ಹೇಳಿ ಕೇಳಿ ಈಗ ಕಲ್ಲಂಗಡಿ ಹಣ್ಣಿನ ಸೀಸನ್! ಈ ಹಣ್ಣು ಕೂಡ ಅಷ್ಟೇ, ಸೌತೆಕಾಯಿಯಂತೆ ತನ್ನಲ್ಲಿ ಅಧಿಕ ಪ್ರಮಾ ಣದಲ್ಲಿ ನೀರಿನಾಂಶ ಹಾಗೂ ಯಥೇಚ್ಛವಾಗಿ ನಾರಿನಾಂ ಶವನ್ನು ಒಳಗೊಂಡಿದೆ. ಈಗಾಗಿ ರಾತ್ರಿ ಊಟದ ಬಳಿಕ, ಈ ಹಣ್ಣನ್ನು ಹೊಟ್ಟೆ ತುಂಬಾ ತಿನ್ನುವುದರಿಂದ ಜೀರ್ಣ ವಾಗಲು ಹೆಚ್ಚು ಸಮಯ ಬೇಕಾಗುವುದು.
ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ಕಂಡು ಬರುವ ಸಕ್ಕರೆ ಅಂಶ ಹೊಟ್ಟೆ ಉಬ್ಬರ ಹಾಗೂ ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುವ ಸಾಧ್ಯತೆ ಇರುತ್ತದೆ