ಮಹಿಳೆಯರು ಸ್ಟೈಲಿಶ್ ಆಗಿ ಕಾಣಿಸಲು ತುಂಬಾ ಪ್ರಯತ್ನ ಪಡುತ್ತಾರೆ. ಆದರೆ ಮಹಿಳೆಯರಿಗೆ ಅಂದವನ್ನು ಹೆಚ್ಚಿಸುವುದೇ ಕೂದಲು. ಒಬ್ಬರಿಗೆ ಒಂದೊಂದು ರೀತಿಯ ಹೇರ್ಕಟ್ ಸೂಟ್ ಆಗುತ್ತದೆ. ಅದಕ್ಕಾಗಿಯೇ ಮಹಿಳೆಯರಿಗಾಗಿಯೇ ವಿಶೇಷ ಹೇರ್ಕಟ್ ಮಾಡಿಸುವುದು ಹೇಗೆ, ಯಾವ ಸ್ಟೈಲ್ ಹೇರ್ಕಟ್ ಮಾಡಿಸಿದರೇ ಸುಂದರವಾಗಿ ಕಾಣಿಸುತ್ತಾರೆ ಎಂಬುವುದರ ಬಗ್ಗೆ ಕೆಲವೊಂದು ಟಿಪ್ಸ್ಗಳನ್ನು ನಾವು ಇಂದು ನಿಮಗೆ ಹೇಳಿಕೊಡುತ್ತೇವೆ.
ಶಾರ್ಟ್ ಹೇರ್ಕಟ್
ಶಾರ್ಟ್ ಹೇರ್ ಇರುವವರು ನನ್ನ ಕೊದಲಿಗೆ ಯಾವ ರೀತಿಯ ಹೇರ್ಕಟ್ ಮಾಡಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದರೆ, ಶಾರ್ಟ್ ಹೇರ್ಕಟ್ ಮಾಡಿಸಿಕೊಳ್ಳಿ. ಇದೊಂದು ಟ್ರೆಂಡಿ ಹೇರ್ ಸ್ಟೈಲ್ ಆಗಿದ್ದು, ನೀವು ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸೂಟ್ ಆಗುತ್ತದೆ.
ಮೀಡಿಯಂ ಹೇರ್ಕಟ್
ಕೆಲವರಿಗೆ ಹೇರ್ ತುಂಬಾ ಉದ್ದವಿರುವುದರಿಂದ ಇಷ್ಟವಿಲ್ಲದೇ ಹೋದರೆ, ಈ ಹೇರ್ಕಟ್ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದು ನಿಮಗೆ ತುಂಬಾ ಹೇರ್ಕಟ್ ಮಾಡಿಕೊಂಡಿದ್ದೇವೆ ಎಂಬ ಫೀಲ್ ನೀಡುವುದಿಲ್ಲ. ಅಲ್ಲದೇ ಈ ಹೇರ್ಕಟ್ ನೀವು ಸುಂದರವಾಗಿ ಕಾಣಿಸಿಕೊಳ್ಳಲು ಸಹಾಯಕವಾಗಿದೆ.
ಲಾಗ್ ಹೇರ್ಕಟ್
ಎಷ್ಟೋ ಜನ ಹೆಣ್ಣು ಮಕ್ಕಳಿಗೆ ಲಾಗ್ ಹೇರ್ ಸ್ಟೈಲ್ ತುಂಬಾ ಇಷ್ಟ. ಅದರಲ್ಲಿಯೂ ಕೂದಲು ಚೆನ್ನಾಗಿ ಬೆಳೆದರೆ ಸಾಕಾಪ್ಪ ಎನ್ನುತ್ತಾರೆ. ಲಾಗ್ಹೇರ್ ಇದ್ದವರೂ ಈ ರೀತಿಯ ಸ್ಟೈಲಿಶ್ ಹೇರ್ಕಟ್ ಮಾಡಿಸಿಕೊಂಡರೆ ನೋಡುವುದಕ್ಕೆ ತುಂಬಾ ಟ್ರೆಂಡಿ ಹಾಗೂ ಕ್ಲಾಸಿಕ್ ಲುಕ್ ನೀಡುತ್ತದೆ.
ಲೇಯರ್ಡ್ ಹೇರ್ಕಟ್
ಈ ಹೇರ್ಕಟ್ ಉದ್ದ ಮುಖ ಇರುವವರಿಗೆ ಸಖತ್ ಆಗಿ ಕಾಣಿಸುತ್ತದೆ. ಲೇಯರ್ ಇರುವುದರಿಂದ ಈ ಹೇರ್ ಸ್ಟೈಲ್ ನೋಡುಗರಿಗೆ ತುಂಬಾ ಆಕರ್ಷಣಿಯವಾಗಿ ಕಾಣಿಸುತ್ತದೆ.
ಬಾಬ್ ಹೇರ್ಕಟ್
ಟಾಮ್ ಬಾಯ್ ಆಗಿರುವ ಹುಡುಗಿಯರು ಈ ರೀತಿಯ ಹೇರ್ಕಟ್ ಇಷ್ಟ ಪಡುತ್ತಾರೆ. ಇತ್ತೀಚೆಗೆ ಇದು ತುಂಬಾ ಟ್ರೆಂಡಿಯಾಗಿದ್ದು, ಆಲ್ಮೋಸ್ಟ್ ಕಾಲೇಜ್ ಹುಡುಗಿಯರು ಈ ಶೈಲಿಯ ಹೇರ್ ಸ್ಟೈಲ್ ಅನ್ನು ಇಷ್ಟಪಡುತ್ತಾರೆ.