ಪ್ರತಿಯೊಬ್ಬ ತಾಯಿಯು ಮಗುವಿಗೆ ಇಂತಿಷ್ಟು ವರ್ಷಗಳ ಎದೆ ಹಾಲುಣಿಸಬೇಕು. ನವಜಾತ ಶಿಶುವಿಗೆ ತಾಯಿಯ ಎದೆಹಾಲು ಪೋಷಣೆಯ ಮೂಲವಾಗಿದೆ. ಹೀಗಾಗಿ ಮಗು ಹುಟ್ಟಿದ ಒಂದು ಗಂಟೆಯೊಳಗೆ ಎದೆಹಾಲು ಉಣಿಸಬೇಕು. ಅದಲ್ಲದೆ, ಮಗು ಹುಟ್ಟಿದ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಆರು ತಿಂಗಳ ಬಳಿಕ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ನೀಡಬೇಕು. ಆದರೆ ತಾಯಿಯ ಎದೆಹಾಲು ಪ್ರತಿ ಮಗುವಿಗೂ ಎರಡು ವರ್ಷ ಕಳೆಯುವವರೆಗೂ ನೀಡಲೇ ಬೇಕು ಎಂದು ಮಾರ್ಗಸೂಚಿನಲ್ಲಿ ತಿಳಿಸಲಾಗಿದೆ.
IPL 2024: ಗುಜರಾತ್ ಮತ್ತು ಕೋಲ್ಕತಾ ನಡುವಿನ ಪಂದ್ಯಕ್ಕೆ ಮಳೆ ಕಾಟ… ಟಾಸ್ ವಿಳಂಬ!
ಎದೆಹಾಲಿನ ಬದಲಾಗಿ ಬೇರೆ ಆಹಾರವನ್ನು ನೀಡಿದರೆ ಮಗುವು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಎದೆಹಾಲಿನಲ್ಲಿರುವಂತೆ ವಿಟಮಿನ್, ಪ್ರೊಟೀನ್ ಮತ್ತು ಕೊಬ್ಬು ಬೇರೆ ಆಹಾರದಲ್ಲಿ ಇರುವುದಿಲ್ಲ. ಮಕ್ಕಳಿಗೆ ಕನಿಷ್ಠ ಎರಡು ವರ್ಷಗಳವರೆಗೆ ಎದೆಹಾಲು ನೀಡದೇ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಮಗುವಿನಲ್ಲಿ ಕೊಲಿಕ್, ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ತಾಯಿ ಮಗುವಿನ ಸಂಬಂಧವು ಗಟ್ಟಿಯಾಗುವುದೇ ಹುಟ್ಟಿದ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ. ಸ್ತನ್ಯಪಾನವು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತಾಯಿ ಹಾಗೂ ಮಗುವಿನ ನಡುವೆ ಉತ್ತಮ ಭಾವನಾತ್ಮಕ ಬಾಂಧವ್ಯ ಬೆಳೆಸುತ್ತವೆ. ಅದಲ್ಲದೇ ತಾಯಿಯ ಎದೆಹಾಲು ವಿಟಮಿನ್, ಪ್ರೊಟೀನ್, ಕೊಬ್ಬಿನ ಅಂಶಗಳುಹೇರಳವಾಗಿರುವ ಕಾರಣ ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ತೂಕ ಹೆಚ್ಚಳಕ್ಕೂ ಈ ಎದೆಹಾಲು ಕಾರಣವಾಗಿದೆ. ಈ ಹಾಲಿನಲ್ಲಿರುವ ಇಮ್ಯುನೋಗ್ಲೋಬಿನ್ ಐಜಿಎಯಿದ್ದು ಸಾಂಕ್ರಾಮಿಕ ಜೀವಿಗಳ ವಿರುದ್ಧ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಒದಗಿಸಿ ಆರೋಗ್ಯ ಸಮಸ್ಯೆಯು ಬಾರದಂತೆ ನೋಡಿಕೊಳ್ಳುತ್ತವೆ. ಎಂದು ಆಹಾರ ಮಾರ್ಗಸೂಚಿನಲ್ಲಿ ತಿಳಿಸಲಾಗಿದೆ.