ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರದಲ್ಲಿ ನಟಿಸಿದ್ದ ಸತ್ಯರಾಜ್ ಅವರನ್ನು ಯಾರು ತಾನೆ ಮರೆಯೋಕೆ ಸಾಧ್ಯ. ಒಂದು ಕಾಲದಲ್ಲಿ ಹೀರೋ ಆಗಿ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಮಾಡ್ತಿರೋ ಸತ್ಯರಾಜ್ ಮಗಳು ಯಾವ ನಟಿಗೂ ಕಮ್ಮಿ ಇಲ್ಲ.
ಸದ್ಯ ಸತ್ಯರಾಜ್ ಮಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈಕೆಗೆ ನಟಿಯಾಗುವ ಎಲ್ಲ ಲಕ್ಷಣಗಳಿದ್ರು ಈಕೆ ಮಾತ್ರ ಸಿನಿಮಾ ರಂಗದಿಂದ ಸಖತ್ ದೂರವಿದ್ದಾರೆ.
ಸತ್ಯರಾಜ್ ಮಗಳು ನೋಡಲು ಥೇಟ್ ತಂದೆಯಂತೆಯೇ ಕಾಣುತ್ತಾರೆ. ಸದ್ಯ ಸತ್ಯರಾಜ್ ಮಗಳ ಫೋಟೋ ನೋಡಿದ ನೆಟ್ಟಿಗರು ಯಾಕೆ ಸಿನಿಮಾದಲ್ಲಿ ಇದುವರೆಗೂ ನಟಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಆದಷ್ಟು ಬೇಗ ಚಿತ್ರರಂಗಕ್ಕೆ ಎಂಟ್ರಿಕೊಡಿ ಎಂದು ಮನವಿ ಮಾಡಿದ್ದಾರೆ.
ಸಿನಿಮಾ ಜಗತ್ತೇ ಇರಲಿ ದಿವ್ಯಾ ಸತ್ಯರಾಜ್ ಅವರ ಕುಟುಂಬ ಸರಳ ಮತ್ತು ಸರಳವಾಗಿದೆ. ಒಬ್ಬ ಮಗ ಮತ್ತು ಮಗಳಿದ್ದು, ಮಗಳು ದಿವ್ಯಾ ಸತ್ಯರಾಜ್ ನ್ಯೂಟ್ರಿಷಿಯನಿಸ್ಟ್ ಆಗಿದ್ದಾರೆ. ಈಕೆ ಆನ್ಲೈನ್ನಲ್ಲಿ ತನ್ನ ಫಾಲೋವರ್ಸ್ಗಳಿಗೆ ಜೀವನಶೈಲಿ ಮತ್ತು ಆರೋಗ್ಯ ಸಲಹೆಯನ್ನು ನೀಡುತ್ತಿರುತ್ತಾರೆ.
ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲದೆ, ತೆಲುಗಿನಲ್ಲೂ ಸತ್ಯರಾಜ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಜೊತೆ ಮಿರ್ಚಿ ಮತ್ತು ಬಾಹುಬಲಿಯಲ್ಲಿ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದರು. ಸತ್ಯರಾಜ್ ಅವರ ಪುತ್ರ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.ಮಗ ಸಿಬಿರಾಜ್ ಈಗಾಗಲೇ ಡೋರಾ, ಮಾಯೋನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ದಿವ್ಯಾ ಸತ್ಯರಾಜ್ ಗೆ ನಟನೆಯಲ್ಲಿ ಆಸಕ್ತಿ ಇಲ್ಲ. ಇದೇ ಕಾರಣಕ್ಕೆ ಸತ್ಯರಾಜ್ ಅವರನ್ನು ಸಿನಿಮಾದಲ್ಲಿ ನಟಿಸಲು ಬಲವಂತ ಮಾಡುತ್ತಿಲ್ಲವಂತೆ. ದಿವ್ಯಾ ಸತ್ಯರಾಜ್ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದಾರೆ. ಹಾಗಾಗಿಯೇ ಅವರು ಬೇಗ ರಾಜಕೀಯಕ್ಕೆ ಬಂದರೆ ಅಚ್ಚರಿ ಪಡಬೇಕಾಗಿಲ್ಲ.
ದಿವ್ಯಾ ಸತ್ಯರಾಜ್ ಅವರಿಗೆ ರಾಜಕೀಯಕ್ಕೆ ಬರುವ ಆಲೋಚನೆ ಇದೆ, ಆದ್ದರಿಂದ ದಿವ್ಯಾ ಸತ್ಯರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ತಮಿಳು ರಾಜಕಾರಣಿ ಎಂಜಿಆರ್, ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಅವರ ಫೋಟೋಗಳನ್ನು ಹಾಕಿಕೊಂಡಿದ್ದಾರೆ.