ಸ್ಯಾಂಡಲ್ವುಡ್ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಅಕ್ಕ ಅನುಷಾ (Anusha) ಅವರು ಮದುವೆಗೆ ಸಜ್ಜಾಗಿದ್ದಾರೆ. ಇದೇ ಖುಷಿಯಲ್ಲಿ ಸಹೋದರಿ, ತಂಗಿ ಆಶಿಕಾ ಜೊತೆ ಬ್ರೈಡಲ್ ಪಾರ್ಟಿ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
‘ಗೋಕುಲದಲ್ಲಿ ಸೀತೆ’ ಎಂಬ ಧಾರಾವಾಹಿ ಸೇರಿದಂತೆ ಸಿನಿಮಾದಲ್ಲಿ ನಟಿಸಿರುವ ಅನುಷಾ ರಂಗನಾಥ್ (Anusha Ranganath) ಅವರು ಈಗ ಮದುವೆಗೆ ಸಜ್ಜಾಗಿದ್ದಾರೆ. ಖಾಸಗಿ ರೆಸಾರ್ಟ್ವೊಂದರಲ್ಲಿ ಬ್ರೈಡಲ್ ಪಾರ್ಟಿ ಮಾಡುವ ಮೂಲಕ ಅನುಷಾ & ಟೀಮ್ ಸಂಭ್ರಮಿಸಿದೆ.
ತಂಗಿ ಆಶಿಕಾ ರಂಗನಾಥ್, ಸಿರಿ ಪ್ರಹ್ಲಾದ್, ಸುಶ್ಮಿತಾ ಗೌಡ ಮತ್ತು ಆಪ್ತರ ಜೊತೆ ಸೇರಿ ಬ್ರೈಡ್ ಪಾರ್ಟಿ ಮಾಡಿ ಮದುವೆ ಹುಡುಗಿ ಅನುಷಾ ಸಂಭ್ರಮಿಸಿದ್ದಾರೆ. ಇನ್ನೂ ಖುಷಿಯಿಂದ ತಂಗಿ ಆಶಿಕಾರನ್ನು ಎತ್ತಿಕೊಂಡು ಅನುಷಾ ಖುಷಿಯಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.