ಮರಾಠಿ ನಟಿ ‘ಬಿಗ್ ಬಾಸ್ ಮರಾಠಿ’ ಮೊದಲ ಸೀಸನ್ ನ ವಿಜೇತೆ ಮೇಘಾ ಧಾಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಗರಂ ಆಗಿದ್ದಾರೆ. ನಟಿ, ರಾಹುಲ್ ಗಾಂಧಿ ಮೇಲೆ ಹರಿಹಾಯ್ದಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪುಥಳಿಯನ್ನು ಉಡುಗೊರೆಯಾಗಿ ನೀಡಲಾಯಿತು. ಆದರೆ ರಾಹುಲ್ ಅದನ್ನು ಮುಟ್ಟಲೂ ಇಲ್ಲ. ಮಾತ್ರವಲ್ಲದೇ ಉಡುಗೊರೆಯನ್ನು ಅನುಮಾನದಿಂದ ನೋಡಿದರು, ಅದನ್ನು ಕೊಟ್ಟವರು ಫೋಟೋ ತೆಗೆಸಿಕೊಂಡ ಬಳಿಕ ರಾಹುಲ್ ಗಾಂಧಿಯವರು ತೆಗೆದುಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಟೇಬಲ್ ಮೇಲೆ ಇಡಲು ಹೋದರು.
![Demo](https://ainlivenews.com/wp-content/uploads/2023/12/spoorthi-1.jpg)
ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಟೇಬಲ್ ಮೇಲೆಯೂ ಅದನ್ನು ಇಡಲು ಬಿಡಲಿಲ್ಲ. ಇದನ್ನು ನೋಡಿದ ಸಾಕಷ್ಟು ಮಂದಿ ರಾಹುಲ್ ಗಾಂಧಿ ವಿರುದ್ಧ ಸಾಕಷ್ಟು ಟೀಕೆ ಮಾಡಿದ್ದಾರೆ. ಇದರಿಂದ ರಾಹುಲ್ ವಿರುದ್ಧ ಅಸಮಾಧಾನಗಳ ಸುರಿಮಳೆಯೇ ಆಗುತ್ತಿದೆ.
ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ, ರಾಹುಲ್ ಗಾಂಧಿ ನಾನು ನಿನ್ನನ್ನು ದ್ವೇಷಿಸುತ್ತೇನೆ. ನನ್ನ ದೇಶವನ್ನು ಬಿಟ್ಟು ನರಕಕ್ಕೆ ಹೋಗಿ’ ಎಂದು ಅದರಲ್ಲಿ ಬರೆದಿದ್ದಾರೆ.
ಅಂದಹಾಗೆ ಮೇಘಾ ಅವರು, ಬಿಗ್ ಬಾಸ್ ವಿಜೇತೆ, ಖ್ಯಾತ ನಟಿ ಮಾತ್ರವಲ್ಲದೇ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಇವರು ಬಿಜೆಪಿ ಸೇರಿದ್ದು, ರಾಜಕೀಯದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ನಟಿ ಶೇರ್ ಮಾಡಿದ ವಿಡಿಯೋಕ್ಕೂ ಸಾಕಷ್ಟು ಮಂದಿ ಕಮೆಂಟ್ ಹಾಕಿದ್ದು, ನಿಜವಾದ ಮಹಾರಾಷ್ಟ್ರಿಗರು ಇದನ್ನು ಸಹಿಸುವುದಿಲ್ಲ ಎಂದಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)