ಮನೆಯಲ್ಲಿ ಅಥವಾ ಹೊರಗಡೆ ಯಾವುದೇ ಸಮಸ್ಯೆಗಳು ಬಂದಾಗ ಕೆಲವು ಮಹಿಳೆಯರು ತಲೆಯ ಮೇಲೆ ಬೆಟ್ಟವೇ ಬಿದ್ದಂತೆ ಆಡುತ್ತಾರೆ. ಆದರೆ ಬುದ್ಧಿವಂತ ಮಹಿಳೆಯರು ಸ್ವಲ್ಪ ನಿಧಾನವಾಗಿ ಯೋಚಿಸಿ ಸಮಸ್ಯೆಗೆ ಯಾವ ರೀತಿ ಪರಿಹಾರವಿದೆ ಎಂಬುದನ್ನು ಚಿಂತಿಸಿ ಆ ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ. ಜೊತೆಗೆ ಸಮಸ್ಯೆ ಹಾಗೂ ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ಪರಿಹರಿಸುತ್ತಾರೆ.
ಯಾರೇ ಸತ್ತರೂ ಕಾಂಗ್ರೆಸ್ ಲೂಟಿ ಮಾಡೋದನ್ನು ಬಿಡೋದಿಲ್ಲ – ಮೋದಿ ವಾಗ್ದಾಳಿ!
ಬುದ್ದಿವಂತ ಮಹಿಳೆಯರು ಯಾವುದೇ ಒಂದು ವಿಚಾರ ಬಂದಾಗ ಅದನ್ನು ಪ್ರಶ್ನೆ ಮಾಡಿ ಬಹು ದೃಷ್ಟಿಕೋನದಿಂದ ಅವುಗಳ ಮಾಹಿತಿಯನ್ನು ಕಲೆ ಹಾಕುತ್ತಾರೆ. ಕೆಲವು ಮಹಿಳೆಯರು ಯಾವುದೇ ಪ್ರಶ್ನೆ ಮಾಡದೆ ಯಾವ ರೀತಿ ಒಂದು ಸಮಸ್ಯೆ ಬರುತ್ತದೆ ಅದನ್ನು ಆಗಿಯೇ ನಿರ್ವಹಿಸುತ್ತಾರೆ. ಆದರೆ ಆ ರೀತಿ ಮಾಡುವುದು ತಪ್ಪು. ಏನೇ ಒಂದು ಸಂದೇಹ ಬಂದರು ಪ್ರಶ್ನೆ ಮಾಡುವ ಮೂಲಕ ಬಗೆಹರಿಸಿಕೊಳ್ಳಬೇಕು
ಬುದ್ದಿವಂತ ಮಹಿಳೆಯಾದವರು ಹೊಸ ಹೊಸ ಆಲೋಚನೆಗಳನ್ನ ಮಾಡುತ್ತಾರೆ. ಇರುವ ವಸ್ತು ಸ್ಥಿತಿಯ ಮೇಲೆ ತಾರ್ಕಿಕ ವಾದಗಳನ್ನ ಮಾಡಿ ತಮ್ಮ ಅಭಿಪ್ರಾಯ ತಪ್ಪಾಗಿ ಇದ್ದರೆ ಅದನ್ನು ಬದಲಾಯಿಸಲು ಕೂಡ ಸಿದ್ದರಿರುತ್ತಾರೆ. ಕೆಲವು ಮಹಿಳೆಯರು ವಾದ ಮಾಡಿದಾಗ ತಮ್ಮದೇ ಸರಿ ಎಂದು ಅನ್ನುತ್ತಾರೆ. ಆ ರೀತಿ ಮಾಡುವುದು ತಪ್ಪು ಅದರ ಮೇಲೆ ತಾರ್ಕಿಕ ವಾದವನ್ನು ಮಾಡಿ ಅಭಿಪ್ರಾಯವನ್ನು ಕೈಗೊಳ್ಳಬೇಕಾಗಿರುತ್ತದೆ
ಬುದ್ಧಿವಂತ ಮಹಿಳೆಯರು ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಯಾರೊಂದಿಗೂ ಕೂಡ ಸಂಬಂಧವನ್ನು ಕಳೆದುಕೊಳ್ಳಲು ಇಷ್ಟ ಪಡೋದಿಲ್ಲ ಎಲ್ಲವನ್ನು ಕೂಡ ನಿರ್ವಹಿಸುವ ಕಲೆಯನ್ನು ಕಲಿತಿರುತ್ತಾರೆ. ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರಿಗೂ ಕೂಡ ಸಮಾಧಾನ ಮಾಡುವುದನ್ನು ಕಲಿತಿರುತ್ತಾರೆ. ಆದರೆ ಕೆಲವೊಂದು ಮಹಿಳೆಯರು ಈ ರೀತಿ ಮಾಡುವುದಿಲ್ಲ ಅವರಿಗೆ ಏನಾದರೂ ನಮಗೇನು ಎಂಬಂತೆ ಸುಮ್ಮನೆ ಇರುತ್ತಾರೆ.
ಬುದ್ದಿವಂತ ಮಹಿಳೆಯರು ಎಲ್ಲಾ ವಿಷಯದಲ್ಲೂ ಸಹ ಕುತೂಹಲದಿಂದ ಇರುತ್ತಾರೆ ಪ್ರತಿಯೊಂದನ್ನು ಕಲಿಯಬೇಕು ಎಂಬ ಉತ್ಸಾಹವನ್ನು ತೋರುತ್ತಾರೆ. ಆದರೆ ಕೆಲವು ಮಹಿಳೆಯರು ಯಾವುದರ ಬಗ್ಗೆಯೂ ಆಸಕ್ತಿ ತೋರುವುದಿಲ್ಲ. ಅವರಿಗೆ ಜೀವನದಲ್ಲಿ ಕುತೂಹಲದಿಂದ ಇರಬೇಕು ಎಂದು ಅನಿಸುವುದೇ ಇಲ್ಲ. ಬುದ್ಧಿವಂತ ಮಹಿಳೆ ಸ್ವಾಭಾವಿಕವಾಗಿ ಕುತೂಹಲದಿಂದ ಇರುತ್ತಾರೆ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ
ಬುದ್ಧಿವಂತ ಮಹಿಳೆಯರಲ್ಲಿ ನಿಷ್ಕಲ್ಮಶವಾದ ಮನಸು ಇರುತ್ತದೆ ಮುಕ್ತ ಮನಸ್ಸಿನಿಂದ ಎಲ್ಲರನ್ನು ಕೂಡ ಮಾತನಾಡಿಸುತ್ತಾರೆ. ಜೊತೆಗೆ ತಾವು ಕೂಡ ಮುಕ್ತ ಮನಸ್ಸಿನಿಂದ ಇರುತ್ತಾರೆ ಯಾವುದೇ ರೀತಿಯ ಸವಾಲುಗಳು ಬಂದರೂ ಕೂಡ ಅವುಗಳನ್ನು ಎದುರಿಸಿ ನಿಲ್ಲುತ್ತಾರೆ. ಸಮಸ್ಯೆಗಳು ಯಾವುದೇ ಬಂದರೂ ಕೂಡ ಅದಕ್ಕೆ ಹೊಂದಿಕೊಂಡು ಹೋಗುವ ಸ್ವಭಾವವನ್ನು ಹೊಂದಿರುತ್ತಾರೆ