ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿ ಕಾರ್ಯಕ್ರಮಕ್ಕೆ ಐಸಿಸ್ ನಂಟು ಇದೆ ಎಂದು ಶಾಸಕ ಯತ್ನಾಳ್ (Basangouda Patil Yatnal) ಆರೋಪಕ್ಕೆ ಸಚಿವ ಹೆಚ್ಕೆ ಪಾಟೀಲ್ (HK Patil) ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯ (Belagavi) ಕೊಂಡಸಕೊಪ್ಪದಲ್ಲಿ ಸಚಿವ ಹೆಚ್ಕೆ ಪಾಟೀಲ್ ಪ್ರತಿಕ್ರಿಯೆ ನೀಡಿ, ಸಂತ ಸೂಫಿಗಳ ಪ್ರಭಾವಕ್ಕೆ ಒಳಗಾದವರು ಉಗ್ರಗಾಮಿ ಆಗ್ತಾರಾ? ಭ್ರಾತೃತ್ವ ಭಾವನೆ ಬೆಳೆಸಲು ಪ್ರಯತ್ನ ಮಾಡುವವರು, ಸಂತರನ್ನು ಸಮ ಭಾವನೆಯಿಂದ ನೋಡುವವರು,
ಟೆರರಿಸ್ಟ್ ಮತ್ತು ಉಗ್ರಗಾಮಿ ಅಂತ ಹೇಳುವುದು ಸರಿಯಲ್ಲ. ತಪ್ಪು ಗ್ರಹಿಕೆ ಮತ್ತು ಮಾಹಿತಿ ಕೊರತೆ ಮೂಲಕ ಹಾಗೆ ಹೇಳುವುದು ಸರಿಯಲ್ಲ ಎಂದರು. ಇದೇ ವೇಳೆ ಕೊಂಡಸಕೊಪ್ಪದ ಪ್ರತಿಭಟನೆ ಸ್ಥಳದಲ್ಲಿ ಅಕ್ರಮ ಸಾರಾಯಿ ನಿಷೇಧಕ್ಕೆ ಮಹಿಳೆಯ ಒತ್ತಾಯದ ಬಗ್ಗೆ ಮಾತನಾಡಿ, ಅಕ್ರಮ ಮಾರಾಟದ ಬಗ್ಗೆ ತಕರಾರು ಮಾಡಿದ್ರು. ಆಗ ನಾನು ನೀನು ಹೆಣ್ಣು ಮಗಳಮ್ಮ, ನೀನು ಮದ್ಯ ನಿಷೇಧಕ್ಕೆ ಒತ್ತಾಯ ಮಾಡು. ಕೇವಲ ಅಕ್ರಮ ಮಾರಾಟಕ್ಕೆ ಒತ್ತು ಕೊಡಬೇಡ ಅಂತ ಹೇಳಿದೆ ಎಂದರು.