ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಿದಾಯ ಹೇಳಬಲ್ಲ ಆಟಗಾರರ ಪೈಕಿ 38 ವರ್ಷದ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಕೂಡ ಒಬ್ಬರಾಗಿದ್ದಾರೆ. ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ದೂರ ಉಳಿದು ಕೇವಲ ಐಪಿಎಲ್ ಮಾತ್ರ ಆಡುತ್ತಿರುವ ಡಿ.ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಲಾಗ್ ಓವರ್ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯಗಳನ್ನು ಗೆದ್ದುಕೊಡುವ ಕೆಲಸ ನಿಭಾಯಿಸುತ್ತಿದ್ದಾರೆ.
ಐಪಿಎಲ್ 2024 ಟೂರ್ನಿಯಲ್ಲಿ ಆರ್ಸಿಬಿ ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಗೆಲುವು ಮಾತ್ರ ದಾಖಲಿಸಿದೆ. ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದು, 6 ಇನಿಂಗ್ಸ್ಗಳಿಂದ 226 ರನ್ ಬಾರಿಸಿ ಮನಮೋಹಕ 205.45ರ ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದಾರೆ. 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಹತ್ತಿರದಲ್ಲಿದ್ದು,
ಭಾರತದ ಟಿ20 ವಿಶ್ವಕಪ್ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ಎದುರು ಆರ್ಸಿಬಿ 288 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಎದುರಿಸಿದ 35 ಎಸೆತಗಳಲ್ಲಿ 83 ರನ್ ಸಿಡಿಸಿ (7 ಸಿಕ್ಸರ್, 5 ಫೋರ್) ಅಬ್ಬರಿಸಿದರು. ಇದರ ಬೆನ್ನಲ್ಲೇ ಭಾರತ ತಂಡದ ಪರ ಆಡುವ ಸಾಮರ್ಥ್ಯ ಅವರಲ್ಲಿ ಇನ್ನೂ ಇದೆ ಎಂಬ ವಾದ ಶುರುವಾಗಿದೆ.
Rama Navami 2024: ರಾಮ ನವಮಿ ಯಾವಾಗ.? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ
ಈ ಬಗ್ಗೆ ಮಾತನಾಡಿರುವ ಅಂಬಾಟಿ ರಾಯುಡು, ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಬ್ಯಾಟ್ ಮಾಡುತ್ತಿರುವ ರೀತಿ ಬಗ್ಗೆ ಮೆಚ್ಚುಗೆ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಲೀಗ್ ಇತಿಹಾಸದಲ್ಲಿ ಎಂಎಸ್ ಧೋನಿ ಬಳಿಕ ದಿನೇಶ್ ಕಾರ್ತಿಕ್ ಅತ್ಯುತ್ತಮ ಫಿನಿಷರ್ ಎಂದು ಗುಣಗಾನ ಮಾಡಿದ್ದಾರೆ. “ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅದ್ಭುತವಾಗಿ ಆಡುತ್ತಿದ್ದಾರೆ. ಇಷ್ಟು ಕೆಲ ಕ್ರಮಾಂಕದಲ್ಲಿ ಆಡುವಾಗ ದೊಡ್ಡ ಇನಿಂಗ್ಸ್ ಆಡುವ ಅವಕಾಶ ಸಿಗುವುದು ಬಹಳಾ ಕಡಿಮೆ. ಅವಕಾಶ ಸಿಕ್ಕಾಗ ಇಂದು ದಿನೇಶ್ ಕಾರ್ತಿಕ್ ಅದ್ಭುತ ಆಟವಾಡಿದ್ದಾರೆ.
ಡೆತ್ ಓವರ್ಗಳಲ್ಲಿ ಎಂಎಸ್ ಧೋನಿ ಬಳಿಕ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್ ಎಂದರೆ ಅದು ಡಿ.ಕೆ. ಕೆಳ ಕ್ರಮಾಂಕದಲ್ಲಿ ಇವರು ಅತ್ಯಂತ ಮಹತ್ವದ ರನ್ ಕಲೆಹಾಕುತ್ತಾರೆ. ಈ ಬಾರಿ ಆರ್ಸಿಬಿ ಪರ ಡಿ.ಕೆ ಶ್ರೇಷ್ಠ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲಯ ತಂಡಕ್ಕೆ ಧನಾತ್ಮಕತೆ ತಂದುಕೊಟ್ಟಿದೆ,” ಎಂದು ಸ್ಟಾರ್ ಸ್ಪೊರ್ಟ್ಸ್ ಕಾರ್ಯಕ್ರಮದಲ್ಲಿ ಅಂಬಾಟಿ ರಾಯುಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.