ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಟ ಝಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸೋನಾಕ್ಷಿ, ಝಹೀರ್ ನಾಗಾರೀಕ ವಿವಾಹವಾಗಿದ್ದಾರೆ.
ಅಂದ ಹಾಗೆ ಸೋನಾಕ್ಷಿ ಮದುವೆಯಾಗಿರೋದು ಮುಸ್ಲಿಂ ಯುವಕನನ್ನ. ಇದು ಆಕೆಯ ಮನೆಯಲ್ಲಿ ಸುತರಾಂ ಇಷ್ಟವಿರಲಿಲ್ಲ. ಆದರೂ ಸೋನಾಕ್ಷಿ ಪಟ್ಟು ಬಿಡದೆ ಝಹೀರ್ ನನ್ನು ವಿವಾಹವಾಗಿದ್ದರು. ಇದೇ ಕಾರಣಕ್ಕೆ ಒಬ್ಬಳ್ಳೆ ಒಬ್ಬ ಮುದ್ದಿನ ತಂಗಿಯ ಮದುವೆಗೆ ಆಕೆಯ ಅಣ್ಣಂದಿರು ಬರಲಿಲ್ಲ ಎನ್ನಲಾಗಿತ್ತು.
ನಟ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿರುವ ಶತ್ರುಘ್ನ ಸಿನ್ಹಾಗೂ ಮೊದಲು ಈ ಮದುವೆ ಇಷ್ಟವಿರಲಿಲ್ಲ. ಅದೇ ಕಾರಣಕ್ಕೆ ಮೊದಲು ಗೊಂದಲದ ಹೇಳಿಕೆ ನೀಡಿದ್ದರು. ಆ ಬಳಿಕ ಸೋನಾಕ್ಷಿ ತುಂಬಾ ಖುಷಿಯಾಗಿ ಕಾಣುತ್ತಾಳೆ. ಅವರಿಬ್ಬರೂ ಸುಖವಾಗಿರಲಿ ಎಂದಿದ್ದು ಮದುವೆಗೆ ಹೋಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು. ಆದರೆ ಅವರ ಮುಖದಲ್ಲಿ ಅಷ್ಟೇನು ಖುಷಿ ಕಾಣಿಸುತ್ತಿರಲಿಲ್ಲ.
ಸೋನಾಕ್ಷಿ ಮದುವೆಗೆ ತಂದೆ ತಾಯಿ ಬಂದಿದ್ದರು ಅಣ್ಣಂದಿರು ಮಾತ್ರ ಬಂದಿರಲಿಲ್ಲ. ಮದುವೆ ಕೆಲವೇ ದಿನ ಮೊದಲು ಸೋನಾಕ್ಷಿ ಸಿನ್ಹಾ ಅವರ ತಾಯಿ ಹಾಗೂ ಅಣ್ಣಂದಿರಾದ ಲವ್ – ಕುಶ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದರು. ಈ ಮೂಲಕ ಸೋನಾಕ್ಷಿ ಮುಸ್ಲಿಂ ಯುವಕನನ್ನು ಮದುವೆಯಾಗುವುದು ಅವರ ಮನೆ ಮಂದಿಗೆ ಇಷ್ಟ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು.
ಆ ನಂತರ ಸಹೋದರಿಬ್ಬರು ಮದುವೆಗೂ ಬಂದಿಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು. ಮದುವೆಯನ್ನೇ ಇಷ್ಟಪಡದೆ ಇದ್ದ ಅವರು ಮದುವೆಗೆ ಖಂಡಿತಾ ಬಂದಿರಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಸೋನಾಕ್ಷಿ ಸಹೋದರರು, ಅಮ್ಮನ ಫೋಟೋ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಅವರು ಕೂಡಾ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಸೋನಾಕ್ಷಿ ಸಹೋದರ ಕುಶ್ ಸಿನ್ಹಾ ಪ್ರತಿಕ್ರಿಯಿಸಿದ್ದು, ‘ನಾನು ಖಾಸಗಿ ವ್ಯಕ್ತಿ ಮತ್ತು ನಾನು ಹೆಚ್ಚು ಕಾಣಿಸಿಕೊಂಡಿಲ್ಲ, ಆದರೆ ನಾನು ಅಲ್ಲಿ ಇರಲಿಲ್ಲ ಎಂದು ಅರ್ಥವಲ್ಲ. ನಾನು ಅಲ್ಲಿ ಹಾಜರಿದ್ದೆ. ನನ್ನ ತಂಗಿಗೆ ಒಳ್ಳೆಯದನ್ನು ಮಾತ್ರ ಬಯಸುತ್ತೇನೆ. ಯಾವಾಗಲೂ ಅವಳಿಗೆ ಶುಭ ಹಾರೈಸುತ್ತೇನೆ ಎಂದಿದ್ದರು.
ಕುಶ್ ಸಿನ್ಹಾ ಹೇಳಿಕೆಯ ಮೂಲಕ ಅವರು ಕೂಡಾ ಮದುವೆಯಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ. ಆದರೆ ಮದುವೆ ಮನೆಯಲ್ಲಿ ಸೋನಾಕ್ಷಿ ಸಹೋದರರು ಹಾಗೂ ತಾಯಿ ತುಂಬಾ ಖುಷಿಯಾಗಿದ್ದಂತೆ ಕಂಡು ಬರಲಿಲ್ಲ. ಕಾಟಾಚಾರಕ್ಕೆ ಮದುವೆಗೆ ಬಂದಿದ್ದೇವೆ ಎಂಬಂತೆ ತೋರುತ್ತಿತ್ತು.
ನಟಿ ಸೋನಾಕ್ಷಿ ಸಿನ್ಹಾ ಅವರು ಅಮ್ಮನ ಸೀರೆ ಉಟ್ಟಿದ್ದರು. ಅಷ್ಟೇ ಅಲ್ಲದೆ ನಟಿ ಖುಷಿಯಲ್ಲಿ ಪತಿಯೊಂದಿಗೆ ಡ್ಯಾನ್ಸ್ ಮಾಡುವಾಗಲೂ ಅವರ ಪೋಷಕರು ಸೈಲೆಂಟ್ ಆಗಿದ್ದರು. ಯಾವುದೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿಲ್ಲ. ಇದೆಲ್ಲವೂ ಈ ಮದುವೆಯಲ್ಲಿ ಸೋನಾಕ್ಷಿ ಸಿನ್ಹಾ ಮನೆ ಮಂದಿಗೆ ಮನಸಿರಲಿಲ್ಲ ಎನ್ನುವುದನ್ನು ರಿವೀಲ್ ಆಗಿದೆ.