ಬೆಳಗಾವಿ: ಬಳ್ಳಾರಿಯ ಬಿಮ್ಸ್ ನಲ್ಲಿ ಬಾಣಂತಿಯ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬಾಣಂತಿಯರ ಸಾವಿಗೆ RLS IV ಗ್ಲುಕೋಸ್ ಕಾರಣ ಎನ್ನುವುದು ತನಿಖಾ ವರದಿಯಿಂದ ಬಹಿರಂಗವಾಗಿದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ದಾಳಿ ವೇಳೆ ಹತ್ತಾರು ಬಾಕ್ಸ್ಗಳಲ್ಲಿ ಐವಿ ಗ್ಲುಕೋಸ್ ಪತ್ತೆಯಾಗಿದೆ. ಇವೆಲ್ಲವೂ ಪಿಬಿಪಿ ಸಂಸ್ಥೆ ಸರಬರಾಜು ಔಷಧಗಳಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಟ್ಟಿದ್ದ ಬಾಕ್ಸ್ಗಳನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ ಏಪ್ರಿಲ್ ತಿಂಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ಆರ್ಎಲ್ಎಸ್ ಐವಿ ಗ್ಲುಕೋಸ್ ಸರಬರಾಜಾಗಿದೆ. ಇನ್ನೂ ಉಗ್ರಾಣದ ಅಧಿಕಾರಿಗಳಿಂದ ಎಲ್ಲೆಲ್ಲಿ ಐವಿ ಗ್ಲುಕೋಸ್ ಪೂರೈಕೆಯಾಗಿದೆ ಎಂಬ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕರ್ತವ್ಯ ಜೊತೆಗೆ ಆರೋಗ್ಯದತ್ತ ಗಮನವಿರಲಿ ; ಪೊಲೀಸರಿಗೆ ಧಾರವಾಡ ಪಾಲಿಕೆ ಆಯುಕ್ತ ಉಳ್ಳಾಗಡ್ಡಿ ಕಿವಿಮಾತು