ಬಾಗಲಕೋಟೆ: ಹಾಡಹಗಲೇ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಶಿವಾನಂದ ಕೋಲಿ ಅವರ ಮನೆಯಲ್ಲಿ ಸುಮಾರು 11:15am ಕ್ಕೆ ಮಚ್ಚನ್ನು ಹಿಡಿದುಕೊಂಡು ದರೋಡೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಇನ್ಸ್ಟಾದಲ್ಲಿ ಯುವಕನ ಪರಿಚಯ, ಪ್ರೀತಿ ; ಪತಿ ಬಿಟ್ಟು ಬಂದವಳ ಕಥೆ ಏನಾಯ್ತು..?
ಆರೋಪಿ ಅರ್ಜುನ್ ಗಾಡೀವಡ್ಡರ ಹಾಗೂ ಆತನ ಸಹಚರ ಜೊತೆ ಮುಖಕ್ಕೆ ಕಪ್ಪು ಬಟ್ಟೆಯನ್ನು ಧರಿಸಿ ಲಾಂಗ್, ಮಚ್ಚನ್ನ ಹಿಡಿದುಕೊಂಡು ಮನೆ ಒಳಗೆ ಹೋಗಿ ಮನೆಯಲ್ಲಿ ಶಿವಾನಂದ ಪತ್ನಿ ಹಾಗೂ ಮಗಳಿಗೆ ಹೆದರಿಸಿ ಹಣ ಮತ್ತು ಬಂಗಾರ ಕೊಡಿ ಇಲ್ಲ ಅಂದ್ರೆ ನಿಮ್ಮನ್ನ ಬಿಡೋದಿಲ್ಲ ಎಂದು ಹೆದರಿಸಿ ಕೊರಳಲ್ಲಿದ್ದ ಬಂಗಾರದ ತಾಳಿ ಹಾಗೂ ಚಿನ್ನಾಭರಣ ಮತ್ತು ಹಣ ಎಗರಿಸಿ ಪರಾರಿಯಾಗುವ ಸಂದರ್ಭದಲ್ಲಿ ಪೊಲೀಸರ ಸಮಯ ಪ್ರಜ್ಞೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಗಳನ್ನ ಹೆಡೆಮುರಿ ಕಟ್ಟಿ ತೇರದಾಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.