ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇತ್ತೀಚೆಗಷ್ಟೇ ವಿದೇಶ ಪ್ರವಾಸ ಕೈಗೊಂಡಿದ್ದರು. ಇದೀಗ ಪತಿ ಜೊತೆ ವಿಜಯಲಕ್ಷ್ಮಿ ದುಬೈಗೆ ಹಾರಿದ್ದಾರೆ. ದುಬೈನಲ್ಲಿ ಗ್ರ್ಯಾಂಡ್ ಆಗಿ ಮ್ಯಾರೇಜ್ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ.
2003ನೇ ಇಸವಿಯ ಮೇ19 ರಂದು ವಿಜಯಲಕ್ಷ್ಮೀ ಹಾಗೂ ದರ್ಶನ್ ದರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ್ ಮಹಲ್ನಲ್ಲಿ ದರ್ಶನ್ – ವಿಜಯಲಕ್ಷ್ಮೀ ವಿವಾಹ ಬಂಧನಕ್ಕೆ ಒಳಗಾದರು. 19-05-2003 ರಂದು ಬೆಳಗ್ಗೆ 9.10 ರಿಂದ 9.50 ರವರೆಗಿದ್ದ ಶುಭ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೊರಳಿಗೆ ದರ್ಶನ್ ಮಾಂಗಲ್ಯಧಾರಣೆ ಮಾಡಿದರು.
‘ಲಂಕೇಶ್ ಪತ್ರಿಕೆ’ ಸಿನಿಮಾ ಬಿಡುಗಡೆ ಬೆನ್ನಲ್ಲೇ ದರ್ಶನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ವಿನೀಶ್ ಎನ್ನುವ ಒಬ್ಬ ಮಗನಿದ್ದಾನೆ. ವಿನೀಶ್ ಕೂಡ ತಂದೆಯ ಎರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾನೆ.
ಇದೀಗ ದರ್ಶನ್ – ವಿಜಯಲಕ್ಷ್ಮೀ ತಮ್ಮ 21ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ದುಬೈನಲ್ಲಿ ಅದ್ಧೂರಿಯಾಗಿ ಮ್ಯಾರೇಜ್ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದು ಅಲ್ಲಿನ ಸುಂದರ ಫೋಟೋಗಳನ್ನು ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಬಾರಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದುಬೈನಲ್ಲಿ ಅಭಿಮಾನಿಗಳ ಜೊತೆ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಅಲ್ಲಿನ ರೆಸ್ಟೋರೆಂಟ್ವೊಂದರಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ನೆಚ್ಚಿನ ಜೋಡಿಗೆ ಶುಭ ಕೋರಿದ್ದಾರೆ.
ದುಬೈನಲ್ಲಿ ನಟ ದರ್ಶನ್ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ‘ಕಾಟೇರ’ ಸಿನಿಮಾ ಪ್ರೀಮಿಯರ್ ಶೋಗೆ ಅಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ದುಬೈ ಕನ್ನಡಿಗರು ‘ಕರುನಾಡ ಅಧಿಪತಿ’ ಎನ್ನುವ ಬಿರುದು ಕೊಟ್ಟಿದ್ದರು. ಈ ಹಿಂದೆ ಕೂಡ ಹಲವು ಬಾರಿ ಚಾಲೆಂಜಿಂಗ್ ಸ್ಟಾರ್ ದುಬೈಗೆ ಭೇಟಿ ನೀಡಿದ್ದಾರೆ.
ಕಳೆದೆರಡು ದಶಕಗಳಲ್ಲಿ ನಟ ದರ್ಶನ್ ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಕನ್ನಡ ಚಿತ್ರರಂಗದ ನಂಬರ್ ವನ್ ಹೀರೋ ಆಗಿ ಮರೆಯುತ್ತಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಕೈಗೆ ಪೆಟ್ಟಾಗಿತ್ತು. ‘ಡೆವಿಲ್’ ಸಿನಿಮಾ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದರು. ಬಳಿಕ ಎಡಗೈಗೆ ಸರ್ಜರಿ ಮಾಡಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಡೆವಿಲ್’ ಚಿತ್ರದ 2ನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದೆ.