ಬೆಂಗಳೂರು : ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ ಸಾಕಿದ್ದ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದಲ್ಲಿ ಮುಂಜಾನೆ ಹೈಡ್ರಾಮ ನಡೆದಿತ್ತು. ಆರ್.ಆರ್ ನಗರ ಪೊಲೀಸ್ ರು ವಿಚಾರಣೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದರ ನಡುವೆ ಮಹಿಳೆ ತನಿಖೆ ಸಹಕಾರ ನೀಡಿದ್ದಾರೆ.
ಅಮಿತಾ ಜಿಂದಾಲ್ ಎಂಬುವವರಿಗೆ ದರ್ಶನ್ ಮನೆಯಲ್ಲಿ ಸಾಕಿದ್ದ ನಾಯಿ ಕಚ್ಚಿತ್ತು. ಈಕೆಯನ್ನು ಪೊಲೀಸರು ಮಹಜರ್ ಮತ್ತು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದರು. ಇವರು ಬೆಳ್ಳಂ ಬೆಳಗ್ಗೆ ಸರಿಸುಮಾರು 7.30ಗೆ ಠಾಣೆ ಹಾಜರಾಗಿದ್ದರು. ಅಷ್ಟೇ ತಾನೂ ವಿಚಾರಣೆಗೆ ಬಂದಿದ್ದೇನೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಠಾಣೆಯ ಬಾಗಿಲಲ್ಲೇ ನಿಂತು ಮೇಲಿಂದ ಮೇಲೆ ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡುತ್ತಿದ್ದರು.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಅಮಿತಾ ಜಿಂದಾಲರ ಈ ಪರಿ ಕ್ವಾಟ್ಲೇಗೆ ಬೇಸತ್ತ ಪೊಲೀಸರು ದೌಡಾಯಿಸಿ ಬಂದು ಈಕೆಯನ್ನು ದರ್ಶನ್ ಮನೆಯ ಬಳಿಗೆ ಕರೆದುಕೊಂಡು ಹೋದರು. ಅಮಿತಾಗೆ ನಾಯಿಕಚ್ಚಿದ್ದೆಲ್ಲಿ ಎಂದು ತೋರಿಸುವಂತೆ ಹೇಳಿದರು. ಆ ಸ್ಥಳದ ಮಹಜರ್ ಮಾಡಿ ಇಬ್ಬರು ಸಾಕ್ಷಿಗಳ ಸಹಿಯನ್ನು ಪಡೆದ ಪೊಲೀಸರು ಹೇಳಿಕೆ ದಾಖಲಿಸಲು ಠಾಣೆಗೆ ಬರುವಂತೆ ಸೂಚನೆಯನ್ನು ನೀಡಿದರು.
ಬೇಕು ಅಂತಲೇ ನಾಯಿ ಛೂ ಬಿಟ್ರು
ಮಹಜರ್ ಕಾರ್ಯ ಪೂರ್ಣವಾಗಿದ್ದು ಅಮಿತಾ ಜಿಂದಾಲ್ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ದರ್ಶನ್ ಮನೆಯ ಸಿಬ್ಬಂದಿ ಮತ್ತು ದರ್ಶನ್ ರನ್ನು ಕರೆಸಿ ತನಿಖೆಯನ್ನ ಮಾಡಬೇಕಾಗಿದೆ. ಮಹಿಳೆ ನೇರಾವಾಗಿ ದರ್ಶನ್ ರವರ ಮನೆಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ನಾಯಿಯನ್ನು ಛೂ ಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಈ ವಿಚಾರದಲ್ಲಿ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.