ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರು ತಮ್ಮ ತಂಡದ ಪರ ಹೊಸ ಇತಿಹಾಸ ಬರೆದಿದ್ದಾರೆ.
HK Patil: ಕಾಂಗ್ರೆಸ್ ಎಂದೂ ಗೂಂಡಾಗಿರಿ ಮಾಡಿಲ್ಲ, ತಾಳಿ ಭಾಗ್ಯ ಕೊಟ್ಟಿದೆ -ಹೆಚ್.ಕೆ.ಪಾಟೀಲ್
ನಿನ್ನೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಸಿಎಸ್ಕೆ ತಂಡಕ್ಕೆ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಭರ್ಜರಿ ಆರಂಭ ಒದಗಿಸಿದರು. ಈ ಬಿರುಸಿನ ಬ್ಯಾಟಿಂಗ್ನೊಂದಿಗೆ ರುತುರಾಜ್ ಗಾಯಕ್ವಾಡ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಸೆಂಚುರಿಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ಪರ ಶತಕ ಸಿಡಿಸಿದ ಮೊದಲ ನಾಯಕ ಎಂಬ ದಾಖಲೆಯನ್ನು ರುತುರಾಜ್ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಪರ ಒಟ್ಟು 6 ಬ್ಯಾಟರ್ಗಳು ಶತಕ ಸಿಡಿಸಿದ್ದಾರೆ. ಆದರೆ ನಾಯಕನಾಗಿ ಕಣಕ್ಕಿಳಿದ ಯಾವುದೇ ಆಟಗಾರ ಸಿಎಸ್ಕೆ ಪರ ಸೆಂಚುರಿ ಸಿಡಿಸಿರಲಿಲ್ಲ. ಅಲ್ಲದೆ ಧೋನಿ 84 ರನ್ ಗಳಿಸಿದ್ದು ಸಿಎಸ್ಕೆ ನಾಯಕನ ಗರಿಷ್ಠ ಸ್ಕೋರ್ ಆಗಿತ್ತು. ಇದೀಗ 16 ವರ್ಷಗಳ ಕ್ಯಾಪ್ಟನ್ ಸೆಂಚುರಿ ಬರವನ್ನು ರುತುರಾಜ್ ಗಾಯಕ್ವಾಡ್ ನೀಗಿಸಿರುವುದು ವಿಶೇಷ.
ಇನ್ನು ನಾಯಕನ ಈ ಭರ್ಜರಿ ಸೆಂಚುರಿಯೊಂದಿಗೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಾರ್ಕಸ್ ಸ್ಟೊಯಿನಿಸ್ ಅಜೇಯ 124 ರನ್ ಬಾರಿಸಿದರು. ಅಲ್ಲದೆ 19.3 ಓವರ್ಗಳಲ್ಲಿ ಎಲ್ಎಸ್ಜಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.