ಹಾಸನ:- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ದೇಶದ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶ್ರಮಿಕರು. ಮಹಿಳೆಯರು ಉದ್ಧಾರವಾಗಬೇಕಾದರೆ ಸಂವಿಧಾನವನ್ನು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲೇಬೇಕು ಮತ್ತು ಆ ಕೆಲಸ ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ ಪಕ್ಷವನ್ನು ಯಾರೂ ನಂಬುವಂತಿಲ್ಲ, ಯಾಕೆಂದರೆ ಅವರು ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿ ಭಾಯಿ-ಭಾಯಿ ಅಗಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ತಮಗೆ ದೇವೇಗೌಡರ ಬಗ್ಗೆ ಸಹಾನುಭೂತಿ ಹುಟ್ಟುತ್ತದೆ ಅಂದರು. ಯಾಕೆಂದರೆ ಅವರು ತಾವ್ಯಾವತ್ತೂ ಬಿಜೆಪಿ ಜೊತೆ ಕೈ ಜೋಡಿಸಲ್ಲ ಅಂತ ಹೇಳಿದ್ದರು, ಆದರೆ ಅವರಿಗೆ ತಮ್ಮ ಮಾತು ಮರೆತುಹೋಗಿದೆ, ಹಾಗಾಗಿ ಮಾತು ತಪ್ಪುವವರ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಸೋಲಿಸಿ ಎಂದರು.