ಮಲಬದ್ಧತೆ ಸಮಸ್ಯೆಯು ಸಾಮಾನ್ಯವಾಗಿ ಆಹಾರ ಕ್ರಮ, ಜೀವನಶೈಲಿ, ಒತ್ತಡ, ನಿರ್ಜಲೀಕರಣ, ಹೊಟ್ಟೆನೋವು, ಅಜೀರ್ಣ, ಗ್ಯಾಸ್ ಇತ್ಯಾದಿಗಳಿಂದಾಗಿ ಉಂಟಾಗಬಹುದು. ಮಲಬದ್ಧತೆ ಎಲ್ಲಾ ವಯಸ್ಸಿನವರನ್ನೂ ಕಾಡುವ ಸಮಸ್ಯೆಯಾಗಿದೆ.
Kumaraswamy: ಮಂಡ್ಯದಲ್ಲಿ ನನ್ನ ಗೆಲುವು ನಿಶ್ಚಿತ – ಹೆಚ್ ಡಿ ಕುಮಾರಸ್ವಾಮಿ!
ಮಲಬದ್ಧತೆಯ ಪ್ರಮುಖ ಲಕ್ಷಣ ಎಂದರೆ ಮಲ ವಿಸರ್ಜನೆಗೆ ತೊಂದರೆ ಉಂಟಾಗುವುದು. ಈ ಸಮಸ್ಯೆ ಇರುವವರಿಗೆ ವಾರದಲ್ಲಿ ಮೂರು ಬಾರಿ ಮಲವಿಸರ್ಜನೆ ಮಾಡುವುದು ಕಷ್ಟ. ಇದರೊಂದಿಗೆ ಮಲವಿರ್ಸಜನೆ ಮಾಡುವಾಗ ಆಯಾಸವಾಗುವುದು, ನೋವಾಗುವುದು, ಗುದನಾಳದಲ್ಲಿ ಮಲ ಸಿಕ್ಕಿಕೊಂಡಂತೆ ಅನ್ನಿಸುವುದು ಮುಂತಾದ ಸಮಸ್ಯೆಗಳನ್ನು ನೀವು ಎದುರಿಸಬಹುದು. ಇದನ್ನು ನಿವಾರಣೆ ಮಾಡಲು ಹಲವಾರು ಬಗೆ ಔಷಧಿಗಳು ಲಭ್ಯವಿದ್ದರೂ ಅವುಗಳು ಕೆಲವು ಸಲ ಅಡ್ಡಪರಿಣಾಮ ಬೀರಬಹುದು. ಆದರೆ ನಾವಿಂದು ತಿಳಿಸುವ ಎಣ್ಣೆಯನ್ನು ಬಳಸುವ ಮೂಲಕ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಆರೋಗ್ಯ ತಜ್ಞರು ಹೇಳುತ್ತಾರೆ.
ಹೌದು, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವ ಸಾಮರ್ಥ್ಯ ತೆಂಗಿನ ಎಣ್ಣೆಗಿದೆ. ತೆಂಗಿನ ಎಣ್ಣೆ ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಮೃದುಗೊಳಿಸುತ್ತದೆ. ಮಲ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಗೆ ಸಂಬಂಧಿಸಿದ ಹೊಟ್ಟೆ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಈ ತೆಂಗಿನ ಎಣ್ಣೆಯು ಆಯುರ್ವೇದ ಔಷಧದಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಬಳಕೆಯಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು ಮಲಬದ್ಧತೆಯ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ನಾವಿಂದು ನೋಡೋಣ.
ತೆಂಗಿನ ಎಣ್ಣೆಯ ಪ್ರಯೋಜನಗಳು: ತೆಂಗಿನ ಎಣ್ಣೆ ನೈಸರ್ಗಿಕ ಔಷಧವಾಗಿದೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಮ್ಲವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಸಹ ಹೊಂದಿದೆ. ಇದು ಜೀರ್ಣಾಂಗದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ
ತೈಲವನ್ನು ಹೇಗೆ ಬಳಸುವುದು: ತೆಂಗಿನ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಬಳಸಬಹುದು. ಅಡುಗೆಯಲ್ಲಿ ಅಥವಾ ಸಲಾಡ್ಗಳಿಗೆ ಡ್ರೆಸ್ಸಿಂಗ್ ಆಗಿ ಬಳಸಬಹುದು. ಹೀಗೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ಹೊಟ್ಟೆಯ ಮೇಲೆ ತೆಂಗಿನ ಎಣ್ಣೆಯಿಂದ ಮಸಾಜ್: ಮೊದಲು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಹೊಟ್ಟೆಯನ್ನು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಿ, ಕರುಳಿನ ವ್ಯವಸ್ಥೆಯನ್ನು ಸುಧಾರಿಸಿ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ಬೆಚ್ಚಗಿನ ನೀರಿನೊಂದಿಗೆ ತೆಂಗಿನ ಎಣ್ಣೆ: ಬೆಚ್ಚಗಿನ ತೆಂಗಿನ ಎಣ್ಣೆ ಹಚ್ಚಿಕೊಂಡು ಬಿಸಿ ಸ್ನಾನ ಮಾಡಿ, ಬೆಚ್ಚಗಿನ ಸ್ನಾನಕ್ಕೆ ತೆಂಗಿನ ಎಣ್ಣೆಯನ್ನು ಸೇರಿಸುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಇದರಿಂದ ದೇಹ ಸದೃಢವಾಗುತ್ತದೆ.
ಆಹಾರಕ್ಕೆ ತೆಂಗಿನ ಎಣ್ಣೆಯ ಬೆರೆಸುವುದು: ಒಂದು ಚಮಚ ತೆಂಗಿನ ಎಣ್ಣೆಯನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ತೆಗೆದುಕೊಳ್ಳಬಹುದು ಅಥವಾ ಕಾಫಿಗೆ ಸೇರಿಸಬಹುದು.