ಹಾವೇರಿ: ಕುರುಬರು ಬಿಜೆಪಿಗೆ ವೋಟ್ ಹಾಕಬೇಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಸಿಎಂ ಸಿದ್ದರಾಮಯ್ಯ ಅವರ ಈ ರೀತಿ ಹೇಳಿಗೆ ಅರ್ಥ ಏನು?. ಅವರ ಕ್ಯಾಂಡಿಡೇಟ್ಗೆ ಅವರ ಸಮಾಜ ವೋಟ್ ಹಾಕುತ್ತಿಲ್ಲ ಅಂತ ಅರ್ಥ. ಯಾರೂ ಬಿಜೆಪಿಗೆ ವೋಟ್ ಹಾಕಬಾರದು ಅಂತಾರೆ ಅಂದರೆ ಈಗಾಗಲೇ ಹಾಕ್ತಾ ಇದಾರೆ ಅಂತ ಅರ್ಥ ಅಲ್ವಾ ಎಂದು ತಿರುಗೇಟು ನೀಡಿದರು.
ಬೊಮ್ಮಾಯಿ ಸಿಎಂ ಇದ್ದಾಗ ಮೋದಿ ತಾಳಕ್ಕೆ ಡ್ಯಾನ್ಸ್ ಮಾಡಿದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿ, ನರೇಂದ್ರ ಮೋದಿಯವರ ಸರ್ಕಾರದಲ್ಲಿ ಒಂದು ವ್ಯವಸ್ಥೆ ಇದೆ. ತನ್ನಿಂದ ತಾನೇ ಯೋಜನೆಗಳು ಅನುಷ್ಠಾನ ಆಗುತ್ತವೆ. ಕಾಂಗ್ರೆಸ್ನ ಮನಮೋಹನ್ ಸಿಂಗ್ ಸರ್ಕಾರದಲ್ಲಿದ್ದಂತೆ ಸಲಾಮ್ ಹೊಡೆದು, ಗೋಗರೆದು ದುಡ್ಡು ತರುವ ಅಗತ್ಯವಿಲ್ಲ.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ಸ್ಮಾರ್ಟ್ ಸಿಟಿಗೆ ಅನುದಾನ ಬಂದಿದೆ. ಯಾರಾದರೂ ಹೋಗಿ ಅರ್ಜಿ ಕೊಟ್ಟಿದ್ದರಾ? 3000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಾಗಿವೆ. ಕೇಂದ್ರದಲ್ಲಿ ಕೆಲಸ ಮಾಡುವ ಹೊಸ ಸಂಸ್ಕೃತಿ ಇದೆ. ವ್ಯಕ್ತಿಗತ ಅಭಿವೃದ್ಧಿಗಿಂತ ವ್ಯವಸ್ಥೆ ಮೇಲೆ ಅಭಿವೃದ್ಧಿಯನ್ನು ನರೇಂದ್ರ ಮೋದಿ ತಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ಗೆ 10 ವರ್ಷ ಬೇಕು ಎಂದರು.