ತುಮಕೂರು : ತಮ್ಮ ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ ವಿಚಾರವಾಗಿ ಇಬ್ಬರು ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕ ಎಸ್ಆರ್ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ತುಘಲಕ್ ಆಡಳಿತ ನಡೆಸುತ್ತಿದ್ದಾರೆಂದು ಸಚಿವ ಪರಮೇಶ್ವರ್ ಹಾಗೂ ಕೆ.ಎನ್ ರಾಜಣ್ಣ ವಿರುದ್ಧ ಶಾಸಕ ಎಸ್ ಆರ್ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಬ್ಬರು ಸಚಿವರಿಂದ ತುಘಲಕ್ ಆಡಳಿತವಾಗುತ್ತಿದೆ. ಜಿಲ್ಲೆಯಲ್ಲಿ ಏನ್ ನಡೀತಿದೆ ಅನ್ನೋದೆ ಗೊತ್ತಾಗ್ತಿಲ್ಲ.ಇಬ್ಬರು ಮಂತ್ರಿಗಳು ಸೇರಿಕೊಂಡು ಏನ್ ಮಾಡ್ಬೇಕು ಅದನ್ನ ಮಾಡ್ತಿದ್ದಾರೆ. ನಮ್ಮನ್ನ ಮೀಟಿಂಗ್ ಗೂ ಸಹ ಕರೆಯುತ್ತಿಲ್ಲ. ಏನ್ ಮಾಡ್ತೀವಿ ಅಂತ ನಮ್ಮನ್ನ ಕೇಳ್ತಿಲ್ಲ. ಆ ಇಬ್ಬರು ಸಾಮಾಜಿಕ ನ್ಯಾಯ ಕೊಡೋ ಹರಿಕಾರರು. ಎಡಗೈ ಜನಾಂಗಕ್ಕೆ ಅನ್ಯಾಯ ಆಗಿದೆ. ಇಡೀ ಜಿಲ್ಲೆಯಲ್ಲಿ ಎಸ್ ಟಿ, ಭೋವಿಗಳನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಲಗೈ ಸಮುದಾಯದವರು ಮಿನಿಸ್ಟರ್ ಇದ್ದಾರೆ. ಲಿಂಗಾಯತರು, ಒಕ್ಕಲಿಗರು ಎಂಎಲ್ ಎಗಳು ಇದ್ದಾರೆ. ಅನ್ಯಾಯ ಆಗಿರೋದು ಹಿಂದುಳಿದ ವರ್ಗ ಬಲಗೈ ಸಮುದಾಯಕ್ಕೆ ಎಂದು ಕಿಡಿಕಾರಿದರು.
ಇದೆಂಥಾ ಎಡವಟ್ಟು: ಸಚಿವ ಜಮೀರ್ ಧ್ವಜಾರೋಹಣ ಮಾಡುತ್ತಿದ್ದಂತೆ ಹರಿದು ಬಿದ್ದ ರಾಷ್ಟ್ರಧ್ವಜ!
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಲ್ಕ್ ಯುನಿಯನ್ ಗೆ ನಾಮಿನಿ ಸದಸ್ಯರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರು ಮಾತು ಎತ್ತಿದ್ದರೆ ಶೋಷಿತ ವರ್ಗಕ್ಕೆ ನ್ಯಾಯ ಕೊಡ್ತೀವಿ ಅಂತಾರೆ. ನೋಡಿದ್ರೆ ಶೋಷಿತರನ್ನ ಇವರು ನಿಷ್ಕೃಷ್ಟವಾಗಿ ಕಾಣ್ತಿದ್ದಾರೆ. ಅಧ್ಯಕ್ಷರ ಆಯ್ಕೆ ಬಗ್ಗೆ ಜಿಲ್ಲೆಯಲ್ಲಿ ಒಬ್ಬರನ್ನು ಮಾತಾಡಿಸಿಲ್ಲ. ಎಲ್ಲರನ್ನೂ ನಿರ್ಲಕ್ಷ್ಯ ಮಾಡಿದ್ದಾರೆ. ಇವರಿಬ್ಬರಿದ್ದರು ಸಾಕು ಇಡೀ ಜಿಲ್ಲೆಯನ್ನೆ ಕಂಟ್ರೋಲ್ ಮಾಡ್ತಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 11 ಕ್ಕೆ 11 ಗೆಲ್ಲಿಸಿಕೊಂಡು ಬರ್ತಾರೆ. ಬೇರೆಯವರು ಯಾರು ಬೇಡ, ಇವರಿಬ್ಬರು ಇದ್ರೆ ಎಲ್ಲಾ ಆಗಿಹೋಗುತ್ತೆ ಎಂದರು. ಅಲ್ಲದೇ ನಮಗೆ ಪಕ್ಷದ ಮೇಲೂ ಅಸಮಾಧಾನವಿಲ್ಲ. ಸಚಿವರ ಮೇಲೂ ಅಸಮಾಧಾನವಿಲ್ಲ. ಅವರ ವಿರುದ್ಧ ಅಸಮಾಧಾನ ಇರೋದು ಅಂತಾ ಹೇಳಿದರು.