ಬೆಂಗಳೂರು: ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, ದ್ವರಕೀಶ್ ಬಹಳಷ್ಟು ಏಳುಬೀಳುಗಳನ್ನ ಕಂಡಿದ್ದರು. ಎಷ್ಟೇ ಕಷ್ಟಬಂದರು ಸಹಿಸಿಕೊಂಡು ಕನ್ನಡಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ.
ಹೆಚ್ಚಾಗಿ ಅವರು ಸಹ ಮೈಸೂರಿನವರು. ಅನೇಕ ವಿಚಾರಗಳನ್ನ ಅವರೊಂದಿಗೆ ಚರ್ಚೆ ಮಾಡಿದ್ದೆ. ಕನ್ನಡ ಸೇವೆ ಮಾಡಿದ ಅಪರೂಪ ನಟ. ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ದೃಷ್ಟಿ ಕೊಡುವಂತವ ಕೆಲಸ ಮಾಡಿರೋದು ಶ್ಲಾಘನೀಯ. ಕನ್ನಡ ಚಿತ್ರರಂಗ ಅವರ ಸಾವಿನಿಂದ ಬಹಳ ಬಡವಾಯಿತು. ಒಬ್ಬ ಕನ್ನಡ ಪ್ರೇಮಿ ಕಳೆದುಕೊಂಡಿದ್ದೇವೆ. ಅವರ ಧರ್ಮಪತ್ನಿ ಕಾಲವಾದ ದಿನವೇ ಅವರು ಕಾಲವಾಗಿದ್ದಾರೆ ಎಂದಿದ್ದಾರೆ.
Rama Navami 2024: ರಾಮ ನವಮಿ ಯಾವಾಗ.? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ
ಹಿರಿಯ ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜ್ಯ ಸರಕಾರವು ತೀವ್ರ ಸಂತಾಪ ಸೂಚಿಸಿದ್ದು, ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ಅಧಿಸೂಚನೆ ಹೊರಡಿಸಿದೆ.