ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ಒಂದೇ ಗ್ರಾಮದ ಮೂವರಲ್ಲಿ ಕಾಣಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಕೆಲವರಲ್ಲಿ ವಾಂತಿ-ಭೇದಿ ಆರಂಭವಾಗಿದೆ. ಈ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಿದೆ.
ಕಳೆದ ಒಂದು ವಾರದಿಂದ ಇಲಾಖೆ ಸತತ 114 ಜನರನ್ನ ಪರೀಕ್ಷೆಗೊಳಪಡಿಸಿತ್ತು. ಈ ವೇಳೆ ಮೂವರಲ್ಲಿ ಕಾಲರಾ ಕಾಣಿಸಿಕೊಂಡಿದೆ. ಗ್ರಾಮಕ್ಕೆ ಡಿಎಚ್ಓ ಶಿವಕುಮಾರ್ ಸ್ವಾಮಿ ಸೆರಿದಂತೆ ಹಿರಿಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಗಮನಿಸಿ.. ಹೊಸ `APL-BPL’ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!
ಬೋರ್ ವೆಲ್ ನೀರಿನಿಂದ ಕಾಲರ ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ. ಇದರಿಂದ ಗ್ರಾಮದ ನಾಲ್ಕು ಬೋರ್ವೆಲ್ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಆರೋಗ್ಯ ಅಧಿಕಾರಿಗಳು ನೀರಿನ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಗ್ರಾಮದ ಸಮುದಾಯ ಆಸ್ಪತ್ರೆಯಲ್ಲಿ ಮುಂಜಾಗೃತ ಕ್ರಮವಾಗಿ 6 ಜನ ವೈದ್ಯರು, ಅಂಬುಲೆನ್ಸ್ ವಾಹನ ನಿಯೋಜನೆ ಮಾಡಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)