ಬೆಂಗಳೂರು:ನಿಂತಿದ್ದ ವಾಹನಕ್ಕ ಕ್ಯಾಂಟರ್ ಡಿಕ್ಕಿಯಾಗಿ ಕ್ಯಾಂಟರ್ ಚಾಲಕ ಸಂತೋಷ್ ನಾಯಕ್ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನೈಸ್ ರಸ್ತೆಯ ನಾಗೇಗೌಡ ಪಾಳ್ಯ ಬ್ರಿಡ್ಜ್ ಬಳಿ ನಡೆದಿದೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಕಳೆದ ರಾತ್ರಿ ನಡೆದಿರೋ ಅಪಘಾತ ನಡೆದಿದ್ದು, ಅತೀ ವೇಗ ಮತ್ತು ನಿರ್ಲಕ್ಷ್ಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದಿ ಹೇಳಲಾಗ್ತಿದೆ. ಕ್ಯಾಂಟರ್ ಚಾಲಕ ನಿಂತಿದ್ದ ಇಚರ್ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿ ಹಿನ್ನಲೆ ಕ್ಯಾಂಟರ್ ಚಾಲಕ ಸಂತೋಷ್ ಎರಡು ವಾಹನಗಳ ಮಧ್ಯೆ ಸಿಲುಕಿ ಸಾವನ್ನಪ್ಪಿದ್ದಾನೆ.
ಮೃತನನ್ನ ಹೊರ ತೆಗೆಯಲು ಸ್ಥಳೀಯರು ಹಾಗೂ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ತಲ್ಲಘಟ್ಟಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.