ಚನ್ನಪಟ್ಟಣ: ಕುಮಾರಸ್ವಾಮಿ ಅವರು ಆಕಾಶದಲ್ಲಿದ್ದಾರೆ ಎಂದು ದೇವೇಗೌಡರು ಹೇಳಿದ್ದು ಕುಮಾರಸ್ವಾಮಿ ಕೈಗೆ ಸಿಗೋದಿಲ್ಲ, ಡಿ.ಕೆ.ಶಿವಕುಮಾರ್ ಭೂಮಿ ಮೇಲೆ ಇದ್ದಾರೆ, ಕೈಗೆ ಸಿಗ್ತಾರೆ ಜನರ ಸಮಸ್ಯೆ ಕೇಳ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದರು.
ಇನ್ನೂ 2 ತಿಂಗಳು ಮಾತ್ರ ಬಾಕಿ ಇದೆ: ಮಾರಣಾಂತಿಕ ಕಾಯಿಲೆಯ ರಹಸ್ಯ ಬಿಚ್ಚಿಟ್ಟ ಶಿವಣ್ಣ!
ತಾಲೂಕಿನ ಬಳ್ಳಾಪಟ್ಟಣ ದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು ದೇವೇಗೌಡರಿಗೆ ಅವರದ್ದೇ ಪಕ್ಷದ ಸರ್ಕಾರ ರೂಪುಗೊಂಡರು, ಅವರಿಗೆ ಆ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ. ಎಷ್ಟು ದಿನ ಇರಲಿದೆಯೋ ಎಂದು ಅನುಮಾನ ಹೊಂದಿದ್ದರು. ಜೆಡಿಎಸ್ ಯಾರೊಂದಿಗಿದ್ದರು ಅಧಿಕಾರದಲ್ಲಿ ಇರೋದಿಲ್ಲ. ಕೆಲಸಗಳು ಮಾಡೋದಿಲ್ಲ ಎಂದು ಚಿವುಟಿದರು.
||ಜೆಡಿಎಸ್ 123 ಸ್ಥಾನ ಗೆಲ್ಲುವವರೆಗೂ ಮಲಗಲ್ಲ ಎಂದಿದ್ದ ದೇವೇಗೌಡರು||
ವಿಧಾನಸಭೆಯಲ್ಲಿ ಜೆಡಿಎಸ್ 123 ಸ್ಥಾನ ಗೆಲ್ಲುವವರೆಗೂ ಮಲಗಲ್ಲ ಎಂದು ದೇವೇಗೌಡರು ಹೇಳಿದ್ರು. ಈಗ ಮೊಮ್ಮಗನನ್ನು ಗೆಲ್ಲಿಸುವವರೆಗೂ ಮಲಗಲ್ಲ ಅಂತಿದಾರೆ, ಅದೆಲ್ಲ ಭಾಷಣವಷ್ಟೇ, ರಾಜಕೀಯ ಮಾಡಲು, ಜನರ ದಾರಿ ತಪ್ಪಿಸಲು ಹೇಳಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
||ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆದ್ದು ಜನ ಸಂಪರ್ಕ ಮಾಡಿಲ್ಲ||
ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣದಲ್ಲಿ ಗೆದ್ದು ಅಭಿವೃದ್ಧಿ ಮಾಡಿಲ್ಲ, ಇಲ್ಲಿನ ಜನರ ಕೈಗೆ ಸಿಗೋದಿಲ್ಲ, ಗೆದ್ದು ಜನ ಸಂಪರ್ಕ ಮಾಡಿಲ್ಲ, ಚುನಾವಣೆಯಲ್ಲಿ ಮಾತ್ರ ಸಿಗ್ತಾರೆ, ವಿಧಾನ ಸಭೆಯಲ್ಲಿ ಅವರು ಮಾತನಾಡಿದ್ದು ಅವರನ್ನು ಬಿಂಬಿಸುತ್ತೆ. ಆರೀತಿಯ ಮಾತು ರಾಜಕಾರಣಿಗಳಿಗೆ ಅವಮರ್ಯಾದೆ ಎಂದು ಟೀಕಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರಕ್ಕೆ, ಕ್ಷೇತ್ರದ ಜಲ ಸಂಪನ್ಮೂಲಕ್ಕೆ ತಮ್ಮದೇ ಆದ ಕೊಡುಗೆ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಚನ್ನಪಟ್ಟಣ ಅಭಿವೃದ್ಧಿಗೆ ಶ್ರಮ ವಹಿಸಲಿದ್ದಾರೆ. ಅಭಿವೃದ್ಧಿ ಕಡೆ ಗಮನಕೊಟ್ಟು ಜನ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನುಡಿದಂತೆ ನಡೆದಿದೆ, ನೆಹರು, ರಾಜೀವ್ ಗಾಂಧಿ, ಇಂದರಾ ಗಾಂಧಿ ಕಾಲದಿಂದಲೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊಟ್ಟಿದೆ. ನಮ್ಮ ಕೆಲಸ ಮುಂದಿಟ್ಟು ಮತ ಕೇಳುತಿದ್ದೇವೆ. ಜೆಡಿಎಸ್ ನಿಂದ ಅಭಿವೃದ್ಧಿಯ ಕೊಡುಗೆ, ಯಾವ ಕೆಲಸನೂ ಮಾಡದೆ ವೈಯಕ್ತಿಕವಾಗಿ ಆರೋಪ ಮಾಡೋದನ್ನ ರೂಡಿಸಿಕೊಂಡಿದ್ದಾರೆ ಎಂದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
||ಚುನಾವಣೆಗೆ ಹಣ, ಆಮಿಷ ಕಣ್ಣೀರು ಕೆಲಸ ಮಾಡಲ್ಲ||
ಚುನಾವಣೆಯ ಕೊನೆಯಲ್ಲಿ ಬರೋದನ್ನ ಕಲಿತಿದ್ದಾರೆ, ಚುನಾವಣೆಗೆ ಹಣ, ಆಮಿಷ ಕಣ್ಣೀರು ಕೆಲಸ ಮಾಡಲ್ಲ, ಮಾಡಿರುವ ಕೆಲಸಗಳನ್ನ ಜನ ನೋಡಿದ್ದಾರೆ. ಜನಸಂಪರ್ಕ ಚುನಾವಣೆಯಲ್ಲಿ ಶಕ್ತಿ ತೋರಲಿದೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಾಸಕ ರವಿಕುಮಾರ್ ಗೌಡ ಇದ್ದರು.
ಇದಕ್ಕೂ ಮುನ್ನ ಬೈರಾಪಟ್ಟಣದ ಕಾರ್ಯಕರ್ತರ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಚನ್ನಪಟ್ಟಣ ಕ್ಷೇತ್ರಕ್ಕೆ ಅಪ್ಪ ಮಕ್ಕಳು ಏನು ಅಭಿವೃದ್ಧಿ ಕೊಡೋಲ್ಲ, ಅವರು ಗೆದ್ದರೆ ಚನ್ನಪಟ್ಟಣದ ಅಭಿವೃದ್ಧಿ 50 ವರ್ಷ ಹಿಂದೆ ಉಳಿಯುತ್ತೆ ಎಂದು ಎಚ್ಚರಿದರು.