ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕ್ಯಾನ್ಸರ್ ಗೆ ಕೊನೆಗೂ ಔಷಧಿ ಮತ್ತೆಯಾಗಿದೆ. ಕ್ಯಾನ್ಸರ್ ಗೆ ಹಲವಾರು ವರ್ಷಗಳಿಂದ ಸಂಶೋಧಕರು ಔಷಧಿ ಕಂಡು ಹಿಡಿಯುವಲ್ಲಿ ತೊಡಗಿಕೊಂಡಿದ್ದಾರೆ. ಕೊನೆಗೂ ಮಹಾಮಾರಿ ರೋಗಕ್ಕೆ ವ್ಯಾಕ್ಸಿನ್ ಬಂದಿದ್ದು ಕ್ಯಾನ್ಸರ್ ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅಂದ ಹಾಗೆ ಈ ಲಸಿಕೆ ಕಂಡು ಹಿಡಿದಿದ್ದು ರಷ್ಯಾ ದೇಶ.
ಇಷ್ಟು ವರ್ಷಗಳ ಕಾಲ ಇಡೀ ಜಗತ್ತೇ ಈ ಒಂದು ಮಹಾಮಾರಿಯಿಂದ ಕಾಪಾಡುವ ಔಷಧಿಗಾಗಿ ತೀವ್ರ ಸಂಶೋಧನೆ ನಡೆಸುತ್ತಿದೆ. ಈ ಮಹಾಮಾರಿಯಿಂದಾಗಿ ವರ್ಷಕ್ಕೆ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಕೊನೆಗೂ ಈ ಕಾಯಿಲೆಗೆ ಔಷಧಿ ಪತ್ತೆಯಾಗಿದ್ದು ಜನ ನೆಮ್ಮದಿಯಾಗಿದ್ದಾರೆ.
ಭಾರತದ ಸ್ನೇಹಿ ರಾಷ್ಟ್ರ ರಷ್ಯಾ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದರಿಂದ ಭಾರತಕ್ಕೂ ಈ ವ್ಯಾಕ್ಸಿನ್ ಸುಲಭವಾಗಿ ದೊರೆಯಲಿದೆ. ಕಾರಣ ಕೋವಿಡ್ ಸಮಯದಲ್ಲಿ ರಷ್ಯಾ ಭಾರತಕ್ಕೆ ಸ್ಪುಟ್ನಿಕ್ ಲಸಿಕೆ ನೀಡುವ ಮೂಲಕ ಸಹಾಯ ನೀಡಿತ್ತು. ಇದೇ ಕಾರಣದಿಂದ ಈ ಒಂದು ಲಸಿಕೆ ಭಾರತಕ್ಕೆ ಅತಿಬೇಗ ಬಂದು ತಲುಪುವ ಸಾಧ್ಯತೆ ಇದೆ..
ಕ್ಯಾನ್ಸರ್ ಗುಣಪಡಿಸುವ ಈ ವ್ಯಾಕ್ಸಿನ್ನ್ನು 2025ರ ಪ್ರಾರಂಭದಲ್ಲಿ ಉಚಿತವಾಗಿ ಹಂಚುತ್ತೇವೆ ಎಂದು ರಷ್ಯಾ ಹೇಳಿದೆ. ಕ್ಯಾನ್ಸರ್ ಬರದಂತೆ ತಡೆಯಲು ಈ ಲಸಿಕೆ ನೀಡಲ್ಲ, ಬದಲಿಗೆ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಈ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ರಷ್ಯಾದ ಆರೋಗ್ಯ ಇಲಾಖೆ ರೇಡಿಯೋಲಾಜಿ ಮೆಡಿಕಲ್ ರಿಸರ್ಚ್ನ ಜನರಲ್ ಡೈರೆಕ್ಟರ್ ಆ್ಯಂಡ್ರೆ ಕಪ್ರಿನ್ ಮಹತ್ವದ ಹೇಳಿಕೆ ನೀಡಿದ್ದಾರೆ.
ರಷ್ಯಾದ ಗಾಮಾಲೇಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಡೈರಕ್ಟರ್ ಅಲೆಕ್ಸಾಂಡರ್ ಗಿಟ್ಸಬರ್ಗ್ ಪ್ರಕಾರ ಕ್ಯಾನ್ಸರ್ ಗಡ್ಡೆಯನ್ನು ಈ ವ್ಯಾಕ್ಸಿನ್ ಸಂಪೂರ್ಣವಾಗಿ ನಾಶಗೊಳಿಸುತ್ತದೆಯಂತೆ. ಈ ಹಿಂದೆ ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್ಗೆ ವ್ಯಾಕ್ಸಿನ್ ಸಿದ್ಧಪಡಿಸುವ ಕೊನೆಯ ಹಂತದಲ್ಲಿದ್ದಾರೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಹೇಳಿದ್ದರು.