ಸಿಯೋಲ್: ನಾಯಿ ಮಾಂಸ (Dog Meat) ಸೇವನೆ ತೆಗೆದುಹಾಕುವ ಮಸೂದೆಯನ್ನು ದಕ್ಷಿಣ ಕೊರಿಯಾ (South Korea) ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ದಕ್ಷಿಣ ಕೊರಿಯಾದ ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಈ ಮಸೂದೆಯನ್ನು ಕಾನೂನಾಗಿ ಜಾರಿಗೆ ತರಲು ಪ್ರತಿಜ್ಞೆ ಮಾಡಿದ್ದರು. ಸರ್ವಾನುಮತದ ಮತದ ಮೂಲಕ ನಾಯಿ ಮಾಂಸ ನಿಷೇಧಿಸುವ ಮಸೂದೆ ಅಂಗೀಕಾರಗೊಂಡಿದೆ.
ಆಹಾರದ ಉದ್ದೇಶಕ್ಕಾಗಿ ನಾಯಿಯನ್ನು ಕಡಿಯುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 19.12 ಲಕ್ಷ ರೂ. (30 ಮಿಲಿಯನ್ ವಾನ್) ವರೆಗೆ ದಂಡ ವಿಧಿಸುತ್ತದೆ. ನಾಯಿ ಸಂತಾನಾಭಿವೃದ್ಧಿ ಮಾಡುವುದು ಅಥವಾ ಆಹಾರಕ್ಕಾಗಿ ವಿತರಿಸುವುದು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.
ಮೂರು ವರ್ಷಗಳ ಗ್ರೇಸ್ ಅವಧಿಯ ನಂತರ 2027 ರಲ್ಲಿ ಕಾನೂನು ಜಾರಿಯಾಗಲಿದೆ. ನಾಯಿ ಮಾಂಸ ಉದ್ಯಮದಲ್ಲಿರುವವರಿಗೆ ವ್ಯಾಪಾರ ಬದಲಾಯಿಸಲು ಸಹಾಯ ಮಾಡಲು ಸಬ್ಸಿಡಿ ನೀಡಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಯೂನ್ ತನ್ನ ಅಧ್ಯಕ್ಷೀಯ ಪ್ರಚಾರದಲ್ಲಿ ನಾಯಿ ಮಾಂಸದ ಸೇವನೆಯನ್ನು ಕೊನೆಗೊಳಿಸಲು ವಾಗ್ದಾನ ಮಾಡಿದ್ದರು.
ನಾಯಿ ಮಾಂಸ ಸೇವಿಸುವ ಹಲವು ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಪ್ರಾಣಿಗಳನ್ನು ಬ್ಲಡ್ಜಿಯನಿಂಗ್, ನೇಣು ಮತ್ತು ವಿದ್ಯುದಾಘಾತದ ಮೂಲಕ ಕೊಲ್ಲುವುದು ಸೇರಿದಂತೆ ವ್ಯಾಪಾರದ ಭಾಗವಾಗಿ ಮಾಡಿಕೊಂಡಿದ್ದಕ್ಕೆ ಅಂತರರಾಷ್ಟ್ರೀಯ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.